newsfirstkannada.com

ಕೆನಡಾ ವಿರುದ್ಧದ ಟೀಮ್ ಇಂಡಿಯಾ ಪಂದ್ಯ ದಿಢೀರ್ ರದ್ದು ಆಗುತ್ತಾ.. ಕಾರಣವೇನು?

Share :

Published June 15, 2024 at 8:05pm

Update June 15, 2024 at 8:07pm

  ಅಮೆರಿಕದ ಪ್ಲೋರಿಡಾದಲ್ಲಿ ನಡೀಬೇಕಿದ್ದ ಟಿ20 ವಿಶ್ವಕಪ್ ಪಂದ್ಯ

  ಈಗಾಗಲೇ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದ್ದ ರೋಹಿತ್ ಬಾಯ್ಸ್​

  ಕೆನಡಾ ವಿರುದ್ಧದ ಪಂದ್ಯ ಇನ್ನು ಪ್ರಾರಂಭ ಆಗದಿದ್ದಕ್ಕೆ ಕಾರಣವೇನು?

ಕೆನಡಾ ಮತ್ತು ಭಾರತದ ನಡುವಿನ ಟಿ20 ವಿಶ್ವಕಪ್​ ಟೂರ್ನಿ ಪಂದ್ಯಕ್ಕೆ ಒದ್ದೆಯಾದ ಔಟ್‌ಫೀಲ್ಡ್ ಇರುವುದರಿಂದ ಟಾಸ್ ಅನ್ನು ವಿಳಂಬ​ ಮಾಡಲಾಗಿದೆ. ಪಂದ್ಯ ನಡೆಯುತ್ತಿರುವ ಸ್ಟೇಡಿಯಂ ಸುತ್ತ ಮಳೆ ಸುರಿದ ಕಾರಣ ಪಂದ್ಯವನ್ನು ಇನ್ನು ಆರಂಭ ಮಾಡಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಇದು ರೋಚಕ ಕಿಡ್ನಾಪ್ ಕಹಾನಿ.. ದರ್ಶನ್​ ಜೊತೆ ಫೋಟೋ ತೆಗೆಸ್ತೀವಿ ಅಂತ ಕರೆದು, ಕೊಂದು ಹಾಕಿದ್ರಾ?

ಫ್ಲೋರಿಡಾದ ಲಾಡರ್‌ಹಿಲ್​ನಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​​ನಲ್ಲಿ ಕೆನಡಾ ವಿರುದ್ಧ ಭಾರತ ಅಖಾಡಕ್ಕೆ ಇಳಿಯುತ್ತಿದೆ. ಈ ಪಂದ್ಯಕ್ಕಾಗಿ ರೋಹಿತ್ ಬಾಯ್ಸ್​ ಸಾಕಷ್ಟು ತಯಾರಿ ಮಾಡಿಕೊಂಡಿದ್ದು ಮ್ಯಾಚ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಪಂದ್ಯ ನಡೆಯುವ ಮೊದಲೇ ಸ್ಟೇಡಿಯಂ ಸುತ್ತ ಮಳೆ ಬಂದಿದೆ. ಇದರಿಂದ ಒದ್ದೆಯಾದ ಔಟ್‌ಫೀಲ್ಡ್ ಇದೆ. ಹೀಗಾಗಿ ಪಂದ್ಯವನ್ನು ಇನ್ನು ಪ್ರಾರಂಭ ಮಾಡಿಲ್ಲ. ಭಾರತದ ಪಂದ್ಯ ನೋಡಲು ಬಂದ ಕ್ರಿಕೆಟ್​ ಅಭಿಮಾನಿಗಳಿಗೆ ಬೇಸರ ತರಿಸಿದಂತೆ ಆಗಿದೆ.

ಇದನ್ನೂ ಓದಿ: ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

ಈಗಾಗಲೇ ಸೂಪರ್-8ಗೆ ಹೋಗಿರುವ ಭಾರತ ಇಂದಿನ ಪಂದ್ಯ ಗೆದ್ದರೇ ಒಟ್ಟು 4 ಪಂದ್ಯಗಳಿಂದ 8 ಅಂಕಗಳನ್ನು ಪಡೆದಂತೆ ಆಗುತ್ತದೆ. ಆಡಿದ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡಿರುವ ರೋಹಿತ್ ಟೀಮ್ ಪಾಯಿಂಟ್ ಟೇಬಲ್​ನಲ್ಲಿ ಟಾಪ್​​ನಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಇವತ್ತಿನ ಈ ಪಂದ್ಯ ಮುಗಿದ ಮೇಲೆ ಶುಭ್​ಮನ್ ಗಿಲ್ ಮತ್ತು ಆವೇಶ್ ಖಾನ್ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೆನಡಾ ವಿರುದ್ಧದ ಟೀಮ್ ಇಂಡಿಯಾ ಪಂದ್ಯ ದಿಢೀರ್ ರದ್ದು ಆಗುತ್ತಾ.. ಕಾರಣವೇನು?

https://newsfirstlive.com/wp-content/uploads/2024/06/VIRAT_ROHIT-3.jpg

Load More