newsfirstkannada.com

ಹೀಗೆ ಮಾಡದಿದ್ರೆ T20 ವರ್ಲ್ಡ್​​ಕಪ್​ನಿಂದ ಭಾರತ ಹೊರಕ್ಕೆ.. ರೋಹಿತ್, ರಾಹುಲ್ ಮುಂದಿನ ಚಾಲೆಂಜ್​ಗಳೇನು​?

Share :

Published June 14, 2024 at 5:44pm

  ಈಗಾಗಲೇ ವಿರಾಟ್​ ಕೊಹ್ಲಿ 3 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿಲ್ಲ

  ರೋಹಿತ್ ಶರ್ಮಾ​ ಪಡೆಗೆ ವೆಸ್ಟ್​ ಇಂಡೀಸ್​ನಲ್ಲಿ ರಿಯಲ್​ ಸವಾಲು

  ಭಾರತ ತಂಡ ವೆಸ್ಟ್ ಇಂಡೀಸ್​ಗೆ ಹೋಗಿ ಆಡುವುದು ಯಾವಾಗ..?

ವಿಶ್ವಕಪ್​ ಸಮರದಲ್ಲಿ ಟೀಮ್​ ಇಂಡಿಯಾ ಸೂಪರ್​- 8 ಸ್ಟೇಜ್​​ಗೆ ಜಬರ್ದಸ್ತ್​ ಎಂಟ್ರಿ ಕೊಟ್ಟಾಗಿದೆ. ಹ್ಯಾಟ್ರಿಕ್​ ಗೆಲುವಿನ ಹುಮ್ಮಸ್ಸಿನಲ್ಲಿರೋ ಟೀಮ್​ ಇಂಡಿಯಾದಲ್ಲಿ ಕಪ್​ ಕನವರಿಕೆ ಜೋರಾಗಿದೆ. ಆದ್ರೆ, ಅಮೆರಿಕದಲ್ಲಿ ಗೆಲುವಿನ ಓಟ ನಡೆಸಿದ ರೋಹಿತ್​ ಪಡೆಗೆ ವೆಸ್ಟ್​ ಇಂಡೀಸ್​ನಲ್ಲಿ ರಿಯಲ್​ ಸವಾಲು ಎದುರಾಗಲಿದೆ. ಸ್ವಲ್ಪ ಯಾಮಾರಿದ್ರೂ, ಕಪ್​​ ಕನಸು ನುಚ್ಚುನೂರಾಗಲಿದೆ.

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಹ್ಯಾಟ್ರಿಕ್​ ಗೆಲುವು ಸಾಧಿಸಿ, ಸೂಪರ್-​ 8 ಹಂತಕ್ಕೆ ಗ್ರ್ಯಾಂಡ್​​ ಎಂಟ್ರಿ ಕೊಟ್ಟಿದೆ. ಜಬರ್ದಸ್ತ್​ ಪರ್ಫಾಮೆನ್ಸ್​ ನೀಡಿರೋ ರೋಹಿತ್​ ಶರ್ಮಾ ಪಡೆ, ಅಮೆರಿಕದಲ್ಲಿ ಸಕ್ಸಸ್​ ಕಂಡಿದೆ. ಶನಿವಾರ ನಡೆಯೋ ಕೆನಡಾ ವಿರುದ್ಧದ ಕೊನೆಯ ಪಂದ್ಯದ ಬಳಿಕ ಟೀಮ್​ ಇಂಡಿಯಾ, ಯುಎಸ್​ಗೆ ಗುಡ್​ ಬೈ ಹೇಳಲಿದೆ.

ಇದನ್ನೂ ಓದಿ: ‘ಕ್ರೂರತ್ವ, ಮೃಗಿಯ ಗುಣಗಳು ದರ್ಶನ್​ನಲ್ಲಿವೆ’.. ಶಿಕ್ಷೆ ಹೇಗಿರಬೇಕಂತ ಮಾಜಿ ಸಚಿವ ಹೇಳಿದ್ರು?

ವಿಂಡೀಸ್​ನಲ್ಲಿ ಟೀಮ್ ಇಂಡಿಯಾ ಮುಂದಿದೆ ಸವಾಲು.!

ಯುಎಸ್​​ಎನಲ್ಲಿ ಯಶಸ್ಸನ್ನ ಕಂಡ ಟೀಮ್​ ಇಂಡಿಯಾ, ವೆಸ್ಟ್​ ಇಂಡೀಸ್​ನಲ್ಲಿ ಮುಂದಿನ ಪಂದ್ಯಗಳನ್ನ ಆಡಲಿದೆ. ಟೂರ್ನಿಯ ಸೂಪರ್​ 8, ಸೆಮಿಫೈನಲ್​, ಫೈನಲ್​​ನಂತಹ ಮಹತ್ವದ ಪಂದ್ಯಗಳು ಕೆರಬಿಯನ್​ ನಾಡಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಸಾಲಿಡ್​ ಓಪನಿಂಗ್​ ಪಡೆದುಕೊಂಡಿರೋ, ರೋಹಿತ್​ ಪಡೆಗೆ ವೆಸ್ಟ್​​ ಇಂಡೀಸ್​ನಲ್ಲಿ ಪ್ರಮುಖವಾಗಿ 5 ಸವಾಲುಗಳು ಎದುರಾಗಲಿವೆ.

ವಿಂಡೀಸ್​​ನಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ XI ಹೇಗಿರುತ್ತೆ..?

ಇಷ್ಟು ದಿನ ಟೀಮ್​ ಇಂಡಿಯಾ ಅಮೆರಿಕದಲ್ಲಿತ್ತು. ಅಲ್ಲಿಗೂ, ವಿಂಡೀಸ್​ಗೂ ಪ್ಲೇಯಿಂಗ್​ ಕಂಡಿಷನ್​ನಲ್ಲಿ ತುಂಬಾ ವ್ಯತ್ಯಾಸವಿದೆ. ಅಮೆರಿಕದಲ್ಲಿದ್ದ ತಂಡ ಫಾಲೋ ಮಾಡಿದ ಸ್ಟ್ರಾಟಜಿ ಬೇರೆಯದ್ದು. ಆದ್ರೆ, ವಿಂಡೀಸ್​ನಲ್ಲಿ ಟೀಮ್ ಇಂಡಿಯಾ ಗೇಮ್​ಪ್ಲಾನ್ ಸಂಪೂರ್ಣ ಡಿಫರೆಂಟ್ ಆಗಿರಲಿದೆ. ವಿಂಡೀಸ್​ನಲ್ಲಿ ಟೀಮ್ ಇಂಡಿಯಾಕ್ಕೆ ಬಲಿಷ್ಠ ತಂಡಗಳು ಎದುರಾಗಲಿವೆ. ಎದುರಾಳಿ, ಕಂಡಿಷನ್​​, ಪಿಚ್ ಎಲ್ಲ ಬದಲಾಗಲಿದೆ. ಹೀಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಆಯ್ಕೆ ದೊಡ್ಡ ಸವಾಲಾಗಲಿದೆ.

ಸ್ಲೋ ಪಿಚ್​ನಲ್ಲಿ ವರ್ಲ್ಡ್​ಕ್ಲಾಸ್ ಬ್ಯಾಟರ್ಸ್​ಗೆ ಸವಾಲ್..!

ಟೀಮ್ ಇಂಡಿಯಾದಲ್ಲಿ ವರ್ಲ್ಡ್​ಕ್ಲಾಸ್ ಬ್ಯಾಟರ್ಸ್ ಇದ್ದಾರೆ. ಆದ್ರೂ, ವಿಂಡೀಸ್​ನ ಸ್ಲೋ ಪಿಚ್​ಗಳಲ್ಲಿ ದೊಡ್ಡ ಸವಾಲು ಎದುರಾಗಲಿದೆ. ಐಪಿಎಲ್​ನಲ್ಲಿ ಸಲೀಸಾಗಿ 200, 250 ರನ್​ಗಳಿಸಿದ ಮೈಂಡ್​​ ಸೆಟ್​ನಲ್ಲಿರೋ ಟೀಮ್ ಇಂಡಿಯಾ ಬ್ಯಾಟರ್ಸ್, ಕೆರಬಿಯನ್​ ನಾಡಲ್ಲಿ ರನ್​ಗಳಿಸೋಕೆ ಕಷ್ಟಪಡಬೇಕಾಗುತ್ತದೆ. ತಾಳ್ಮೆಯಿಂದ, ಎಚ್ಚರಿಕೆಯ ಆಟವಾಡಿದ್ರೆ ಮಾತ್ರ ಸೇಫ್​.. ಯಾಮಾರಿದ್ರೆ, ಕಥೆ ಗೋವಿಂದ.

ತಂಡದಲ್ಲಿ ಎಷ್ಟು ಮಂದಿ ಸ್ಪಿನ್ನರ್ಸ್​ ಆಡಿಸ್ತಾರೆ..? ಯಾರಿಗೆಲ್ಲಾ ಸ್ಥಾನ..?

ವೆಸ್ಟ್​ ಇಂಡೀಸ್​ನ ಸ್ಲೋ ಌಂಡ್ ಸ್ಪಿನ್ ಟ್ರ್ಯಾಕ್​ನಲ್ಲಿ ಎಷ್ಟು ಮಂದಿ ಸ್ಪಿನ್ನರ್ಸ್ ಆಡಿಸಬೇಕು.? ಇಬ್ಬರಾ ಅಥವಾ ಮೂವರು ಸ್ಪಿನ್ನರ್​ಗಳಿಗೆ ಮಣೆಹಾಕಬೇಕಾ..? ಯಾರು ಆ ಸ್ಪಿನ್ನರ್ಸ್..? ಈ ಪ್ರಶ್ನೆಗೆ ರೋಹಿತ್​ ಹಾಗೂ ದ್ರಾವಿಡ್​ ಮೊದಲು ಉತ್ತರ ಕಂಡುಕೊಳ್ಳಬೇಕಿದೆ. ಈ ಒಂದು ನಿರ್ಧಾರದ ಮೇಲೆ ಬ್ಯಾಟಿಂಗ್​ ಡೆಪ್ತ್​, ಟೀಮ್​ ಕಾಂಬಿನೇಶನ್​ ಎಲ್ಲವೂ ನಿಂತಿದೆ. ಎಲ್ಲವೂ ಸರಿದೂಗುವಂತೆ ಬ್ಯಾಲೆನ್ಸಿಂಗ್​ ನಿರ್ಧಾರ ತೆಗೆದುಕೊಳ್ಳೋದು ನಿಜಕ್ಕೂ ಸವಾಲಾಗಲಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಸ್ಲಾಟ್ ಚೇಂಜ್ ಮಾಡಿ ತಮಾಷೆ ನೋಡ್ತಿದ್ದಾರಾ.. ವಿರಾಟ್​ ವೈಫಲ್ಯಕ್ಕೆ ಕಾರಣವೇನು?

ಬೂಮ್ರಾಗೆ ಸಾಥ್ ಕೊಡೋದ್ಯಾರು..? ದುಬೆ ಕಥೆ ಏನು..?

ಕೆರಿಬಿಯನ್​ನ ಪಿಚ್​ಗಳು, ವೇಗಿಗಳಿಗೆ ಹೆಚ್ಚು ನೆರವಾಗಲ್ಲ. ಹಾಗಾಗಿ ತಂಡದಲ್ಲಿ 2 ವೇಗಿಗಳಿಗೆ ಮಾತ್ರ ಅವಕಾಶ ಸಿಗೋ ಸಾಧ್ಯತೆ ದಟ್ಟವಾಗಿದೆ. ವರ್ಲ್ಡ್​​ ​​ಕ್ಲಾಸ್​ ವೇಗಿ ಬೂಮ್ರಾ ಒಂದು ಸ್ಥಾನದಲ್ಲಿ ಆಡೋದು ಕನ್​ಫರ್ಮ್​. ಇನ್ನು, 3ನೇ ವೇಗಿಯಾಗಿ ಹಾರ್ದಿಕ್​ ಪಾಂಡ್ಯ ತಂಡದಲ್ಲಿ ಇರಲಿದ್ದಾರೆ. ಒಂದು ಸ್ಥಾನದಲ್ಲಿ ಆರ್ಷ್​ದೀಪ್​ ಸಿಂಗ್​, ಮೊಹಮ್ಮದ್​ ಸಿರಾಜ್​ ಇಬ್ಬರಲ್ಲಿ ಯಾರಿಗೆ ಚಾನ್ಸ್​ ಅನ್ನೋದು ಪ್ರಶ್ನೆಯಾಗಿದೆ. ಆಲ್​​ರೌಂಡರ್​ ಕೋಟಾದಲ್ಲಿ ಆಡ್ತಿರೋ ದುಬೆಯನ್ನ ಆಡಿಸಬೇಕಾ, ಸ್ಪೆಷಲಿಸ್ಟ್​ ಬ್ಯಾಟರ್​ಗೆ ಮಣೆಹಾಕಬೇಕಾ ಅನ್ನೋದನ್ನೂ ತಿರ್ಮಾನಿಸಬೇಕಿದೆ.

ವರ್ಲ್ಡ್​ಕಪ್ ನಾಕೌಟ್ ಜಿಂಕ್ಸ್​ನಿಂದ ಹೊರಬರುತ್ತಾ ಭಾರತ.?

ಏಕದಿನ ವಿಶ್ವಕಪ್, ಟಿ-ಟ್ವೆಂಟಿ ವಿಶ್ವಕಪ್​.. ಸೇರಿದಂತೆ ಐಸಿಸಿ ಟೂರ್ನಿಗಳಲ್ಲಿ, ಟೀಮ್ ಇಂಡಿಯಾ, ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುತ್ತದೆ. ಆದ್ರೆ, ನಾಕೌಟ್ ಸ್ಟೇಜ್​ನಲ್ಲಿ ಮಾತ್ರ ಮೆನ್ ಇನ್ ಬ್ಲೂ ಪಡೆ, ಪದೇ ಪದೇ ಎಡವುತ್ತಲೇ ಇರುತ್ತವೆ. ಈ ನಾಕೌಟ್ ಜಿಂಕ್ಸ್​ನಿಂದ ಪಾರಾಗಲು ಟೀಮ್ ಮ್ಯಾನೇಜ್​ಮೆಂಟ್​ ಮೊದಲು ಪ್ಲಾನ್​ ರೂಪಿಸಬೇಕಿದೆ. ಈ 5 ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಕಪ್​ ಗೆಲ್ಲೋ ಹಾದಿ ಸಲೀಸಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹೀಗೆ ಮಾಡದಿದ್ರೆ T20 ವರ್ಲ್ಡ್​​ಕಪ್​ನಿಂದ ಭಾರತ ಹೊರಕ್ಕೆ.. ರೋಹಿತ್, ರಾಹುಲ್ ಮುಂದಿನ ಚಾಲೆಂಜ್​ಗಳೇನು​?

https://newsfirstlive.com/wp-content/uploads/2023/08/Rahul-dravid.jpg

Load More