newsfirstkannada.com

T20 world cup; ಭಾರತ vs ಕೆನಡಾ ಪಂದ್ಯಕ್ಕೆ ಮಳೆಯ ಕಾಟ.. ಓವರ್​​ಗಳನ್ನ​ ಕಡಿಮೆ ಮಾಡ್ತಾರಾ?

Share :

Published June 15, 2024 at 8:37pm

  ಈಗಾಗಲೇ ಆರಂಭವಾಗಬೇಕಿದ್ದ ಕೆನಡಾ ವಿರುದ್ಧದ ಪಂದ್ಯ

  ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿರುವ ಕ್ಯಾಪ್ಟನ್ ರೋಹಿತ್ ಬಾಯ್ಸ್​

  ಭಾರತ vs ಕೆನಡಾ ಪಂದ್ಯ ಆರಂಭವಾಗುವುದು ಯಾವಾಗ..?

ಫ್ಲೋರಿಡಾದ ಲಾಡರ್‌ಹಿಲ್​ನಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​​ನಲ್ಲಿ ನಡೆಯಬೇಕಿದ್ದ ಕೆನಾಡ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಇದರಿಂದ ಮೈದಾನವು ಒದ್ದೆಯಾದ ಔಟ್‌ಫೀಲ್ಡ್​​ನಿಂದ ಕೂಡಿದ್ದರಿಂದ ಟಾಸ್ ಅನ್ನು ವಿಳಂಬ ಮಾಡಲಾಗಿದೆ.

ಇದನ್ನೂ ಓದಿ: ಕೆನಡಾ ವಿರುದ್ಧದ ಟೀಮ್ ಇಂಡಿಯಾ ಪಂದ್ಯ ದಿಢೀರ್ ರದ್ದು ಆಯ್ತಾ.. ಕಾರಣವೇನು?

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಗೆಲುವಿನ ಅಲೆಯಲ್ಲಿದೆ. ಈಗಾಗಲೇ ಹ್ಯಾಟ್ರಿಕ್ ಗೆಲುವು ಕಂಡಿದೆ. T20 ವಿಶ್ವಕಪ್ ಟೂರ್ನಿಯಲ್ಲಿ ಕೆನಡಾ ಕ್ಯಾಪ್ಟನ್ ಸಾದ್ ಬಿನ್ ಜಾಫರ್ ಪಡೆ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದ್ದು ಉಳಿದ 2 ಪಂದ್ಯಗಳಲ್ಲಿ ಸೋತು ಹೋಗಿದ್ದಾರೆ. ಹೀಗಾಗಿ ಕೆನಡಾ ಟೀಮ್ ಸಂಕಷ್ಟದ ಹಾದಿಯಲ್ಲಿದೆ. ಇಂದಿನ ಪಂದ್ಯ ನಡೆಯುವ ಮೊದಲೇ ಮಳೆ ಆಗಮನದಿಂದ ಇನ್ನು ಟಾಸ್ ಹಾಕಿಲ್ಲ. ಒಂದು ಗಂಟೆ ಮೇಲೆ ಟಾಸ್ ಆಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ಆರಂಭವಾದರೆ ಓವರ್​​ಗಳನ್ನು ಕಡಿತ ಮಾಡುವ ನಿರೀಕ್ಷೆ ಇದೆ. ಪಂದ್ಯವೇ ರದ್ದು ಆದರೆ ತಲಾ ಒಂದೊಂದು ಪಾಯಿಂಟ್ ಅನ್ನು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

ಒದ್ದೆಯಾದ ಔಟ್‌ಫೀಲ್ಡ್ ಮತ್ತು ಕೆಟ್ಟ ಹವಾಮಾನದಿಂದ ಟಾಸ್ ವಿಳಂಬವಾಗಿದೆ. ಇದರಿಂದ ಪಂದ್ಯವನ್ನು ಇನ್ನು ಆರಂಭ ಮಾಡಿಲ್ಲ. ಈಗಾಗಲೇ ಅಂಪೈರ್​ಗಳು 2 ಬಾರಿ ಮೈದಾನಕ್ಕೆ ತೆರಳಿ ಪಿಚ್​ ಅನ್ನು ಪರಿಶೀಲನೆ ಮಾಡಿದ್ದು ಇನ್ನಷ್ಟು ಸಮಯಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ. ಏಕೆಂದರೆ ಮಳೆಯಿಂದಾಗಿ ಪಿಚ್ ಸಂಪೂರ್ಣವಾಗಿ ಒದ್ದೆಯಾಗಿದೆ. ಇದರಿಂದ ಚಂಡು ಬೌನ್ಸ್ ಆಗುವುದು ಕಷ್ಟವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 world cup; ಭಾರತ vs ಕೆನಡಾ ಪಂದ್ಯಕ್ಕೆ ಮಳೆಯ ಕಾಟ.. ಓವರ್​​ಗಳನ್ನ​ ಕಡಿಮೆ ಮಾಡ್ತಾರಾ?

https://newsfirstlive.com/wp-content/uploads/2024/06/ROHIT_SHARMA_NEW_1-1.jpg

Load More