newsfirstkannada.com

ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್.. ರೋಹಿತ್ ಹೊರಗೆ ಹೋದ್ರೆ ಶುಭ್​ಮನ್ ಗಿಲ್​ಗೆ ಚಾನ್ಸೇ ಸಿಗಲ್ವಾ?

Share :

Published June 13, 2024 at 12:57pm

    ಶುಭ್​ಮನ್ ಗಿಲ್​ ಕ್ಲಾಸ್​ ಆಟಕ್ಕೆ ಮಾಸ್ ಉತ್ತರಕೊಟ್ಟಿದ್ದ ಯಶಸ್ವಿ ​

    ಗಿಲ್​ ಓವರ್​ ಟೇಕ್​ ಮಾಡಿದ್ದ ಯಶಸ್ವಿ ಜೈಸ್ವಾಲ್​​ಗೂ ಸಿಗ್ತಿಲ್ಲ ಚಾನ್ಸ್​

    ರೋಹಿತ್ ಶರ್ಮಾ ನಿರ್ಗಮನದ ಬಳಿಕ ತಂಡಕ್ಕೆ ಯಾರು ಬರ್ತಾರೆ?

ಟಿ20 ವಿಶ್ವಕಪ್​​ ಟೂರ್ನಿ ಮಹತ್ವದ ಘಟ್ಟ ತಲುಪಿದೆ. ಅದ್ಭುತ ಪ್ರದರ್ಶನ ನೀಡ್ತಿರುವ ಟೀಮ್ ಇಂಡಿಯಾ ಸೂಪರ್​-8ಕ್ಕೂ ಗ್ರ್ಯಾಂಡ್ ಎಂಟ್ರಿ ನೀಡಿದೆ. ಆದ್ರೆ, ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಮಾತ್ರ ಒಂದು ಪ್ರಶ್ನೆ ಇನ್ನಿಲ್ಲದೆ ಕಾಡ್ತಿದೆ. ಫಸ್ಟ್​ ಚಾಯ್ಸ್​ ಓಪನರ್ ಶುಭ್​ಮನ್​ ಗಿಲ್, ರಿಸರ್ವ್ಡ್​ ಪ್ಲೇಯರ್ ಆಗಿದ್ದೇಗೆ ಅನ್ನೋ ಪ್ರಶ್ನೆಗೆ ಉತ್ತರವೇ ಸಿಗ್ತಿಲ್ಲ. ಗಿಲ್​ ಓವರ್​ ಟೇಕ್​ ಮಾಡಿದ ಜೈಸ್ವಾಲ್​ಗೆ ಅವಕಾಶವೂ ಸಿಗ್ತಿಲ್ಲ.

ಇದನ್ನೂ ಓದಿ: ಪತ್ನಿ ಮೇಲೆ ಕೋಪ ಮಾಡಿಕೊಂಡ್ರಾ ಧೋನಿ.. ಫಾರಿನ್ ಟ್ರಿಪ್​ಗೆ ಹೋದ್ರೂ ತಪ್ಪುತ್ತಿಲ್ಲ ಆಭಿಮಾನಿಗಳ ಅಭಿಮಾನ

ಶುಭ್​ಮನ್ ಗಿಲ್.. ಟೀಮ್ ಇಂಡಿಯಾದ ಸೆನ್ಸೇಷನಲ್ ಪ್ಲೇಯರ್. ಡೆಬ್ಯು ಮಾಡಿದ ವರ್ಷವೇ ವಿಶ್ವ ಕ್ರಿಕೆಟ್​ನಲ್ಲಿ ಛಾಪು ಮೂಡಿಸಿದ ಕ್ರಿಕೆಟರ್. ಟೆಸ್ಟ್​, ಏಕದಿನ ಕ್ರಿಕೆಟ್​​ನಲ್ಲಿ ರನ್​​ ಕೊಳ್ಳೆ ಹೊಡೆದ ಗಿಲ್​​​​, ಅಲ್ಪಾವಧಿಯಲ್ಲೇ ಯುವರಾಜನಾಗಿ, ವಿಶ್ವ ಕ್ರಿಕೆಟ್​ನ ಭವಿಷ್ಯದ ರೂಲರ್ ಆಗಿ ಗುರುತಿಸಿಕೊಂಡ ಆಟಗಾರ. ಆದ್ರೀಗ ಇದೇ ಗಿಲ್​​​​​​ಗೆ ಬೆಂಚ್ ಖಾಯಂ ಆಗಿದೆ. ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಿದ್ದ ಶುಭ್​​ಮನ್, ಟಿ20 ವಿಶ್ವಕಪ್​ನಲ್ಲಿ ರಿಸರ್ವ್ಡ್​​ ಪ್ಲೇಯರ್ ಆಗಿದ್ದಾರೆ.

ಇದನ್ನೂ ಓದಿ:ದರ್ಶನ್​, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್​ ಕೊಟ್ಟ ಪತ್ನಿ ವಿಜಯಲಕ್ಷ್ಮಿ

ಏಕದಿನದಲ್ಲಿ ಶುಭ್​ಮನ್​ ಶೈನ್​​.. T20ಯಲ್ಲಿ ಸೈಲೆಂಟ್.!

ಏಕದಿನ ಮಾದರಿಯಲ್ಲಿ ಆರಂಭಿಕನಾಗಿ ಅಬ್ಬರಿಸ್ತಿದ್ದ ಶುಭ್​ಮನ್, ಕ್ಲಾಸ್​ ಆಟಕ್ಕೆ ದಿಗ್ಗಜರು ಮಾರು ಹೋಗಿದ್ರು. ಆದ್ರೆ, ಏಕದಿನದ ಅಬ್ಬರ ಟಿ20 ಫಾರ್ಮೆಟ್​ನಲ್ಲಿ ಕಾಣೆಯಾಗಿತ್ತು. ಟಿ20ಗೆ ಗಿಲ್​ ಸೂಕ್ತವಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಇದೇ ಟೈಮ್​​ನಲ್ಲಿ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟ ಜೈಸ್ವಾಲ್, ಮಾಸ್ ಆಟವಾಡಿದ್ರು. ಜೈಸ್ವಾಲ್​ರ ಕನ್ಸಿಸ್ಟೆನ್ಸಿ, ಗಿಲ್​ಗೆ ಮುಳುವಾಯ್ತು. ಟಿ20 ವಿಶ್ವಕಪ್​ ಸ್ಥಾನ ಹೋಗಲು ಇದೂ ಒಂದು ಕಾರಣ.

ಕೊನೆ 10 ಟಿ20 ಪಂದ್ಯಗಳಲ್ಲಿ ಪ್ರದರ್ಶನ

ಕೊನೆ 10 ಟಿ20 ಪಂದ್ಯಗಳಿಂದ ಗಿಲ್​, 1 ಶತಕ, 1 ಅರ್ಧಶತಕ ಒಳಗೊಂಡ 270 ರನ್ ಸಿಡಿಸಿದ್ದು, 152ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಆದ್ರೆ, 10 ಪಂದ್ಯಗಳ ಪೈಕಿ ಕೇವಲ 9 ಇನ್ನಿಂಗ್ಸ್​ಗಳಲ್ಲಿ ಮಾತ್ರ ಬ್ಯಾಟ್ ಬೀಸಿದ ಜೈಸ್ವಾಲ್, 3 ಅರ್ಧಶತಕ ಒಳಗೊಂಡ 270 ರನ್ ಸಿಡಿಸಿದ್ದಾರೆ. 162.65ರ ಸ್ಟ್ರೈಕ್​​​ರೇಟ್ ಹೊಂದಿದ್ದಾರೆ. ಇದಿಷ್ಟೇ ಅಲ್ಲ, ಕೊನೆ 8 ಪಂದ್ಯಗಳಿಂದ ಗಿಲ್​ ಆಟ ಮತ್ತಷ್ಟು ಕುಸಿದಿತ್ತು. ಕೊನೆಯ 8 ಪಂದ್ಯಗಳಲ್ಲಿ ಒಮ್ಮೆ ಅರ್ಧಶತಕ, ಒಮ್ಮೆ 20ರ ಗಡಿ ತಲುಪಿದ್ದು ಬಿಟ್ರೆ, ಇನ್ನುಳಿದ ಉಳಿದ 6 ಇನ್ನಿಂಗ್ಸ್​ಗಳಲ್ಲಿ ಸಿಂಗಲ್ ಡಿಜಿಟ್ ಗಡಿ ದಾಟಿಲ್ಲ. ಆದ್ರೆ, ಜೈಸ್ವಾಲ್​ ದಡಂದಶಃಗುಣಂ ಅನ್ನೇ ಮೂಲ ಮಂತ್ರವಾಗಿಸಿಕೊಂಡು ರನ್​ ಕೊಳ್ಳೆ ಹೊಡೆದಿದ್ದಾರೆ.

ವೆಸ್ಟ್ ​ಇಂಡೀಸ್​ ಜೈಸ್ವಾಲ್​ ಸೂಪರ್​ ಆಟ.!

ಈ ಬಾರಿಯ ವಿಶ್ವಕಪ್​ ನಡೀತಾ ಇರೋ ವೆಸ್ಟ್​ ಇಂಡೀಸ್​ನಲ್ಲೂ ಯಶಸ್ವಿ ಜೈಸ್ವಾಲ್​ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದಾರೆ. ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆರಂಭಿಕನಾಗಿ ಗಿಲ್​ ಪರದಾಡಿದ್ರೆ, ಮುಂಬೈಕರ್ ಜೈಸ್ವಾಲ್ ನಿರ್ಭೀತಿಯಿಂದ ಬ್ಯಾಟಿಂಗ್ ನಡೆಸಿದ್ರು.

ವೆಸ್ಟ್ ಇಂಡೀಸ್​ನಲ್ಲಿ ಗಿಲ್-ಜೈಸ್ವಾಲ್

ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ 5 ಪಂದ್ಯಗಳನ್ನಾಡಿದ ಗಿಲ್, 1 ಅರ್ಧಶತಕದ ನೆರವಿನಿಂದ 102 ರನ್ ಗಳಿಸಿದ್ದು, 120ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ರು. ಜಸ್ಟ್​ ಮೂರೇ 3 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ಜೈಸ್ವಾಲ್, 1 ಅರ್ಧಶತಕ ಒಳಗೊಂಡ 90 ರನ್ ಸಿಡಿಸಿದ್ರು. 157.89ರ ಸ್ಟ್ರೈಕ್​ರೇಟ್​​​​​​​​​ನಲ್ಲಿ ಬ್ಯಾಟ್ ಬೀಸಿದ್ರು.

ಇದನ್ನೂ ಓದಿ: IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

ಈ ಪರ್ಫಾಮೆನ್ಸ್​ನ ಫಲವಾಗಿ ಟಿ20 ತಂಡದ ನ್ಯೂ ಓಪನರ್​ ಆಗಿ ಗುರುತಿಸಿಕೊಂಡ ಜೈಸ್ವಾಲ್, ನಂತರ ನಡೆದ ಅಫ್ಘಾನ್ ಸಿರೀಸ್​ನಲ್ಲಿ ಶುಭ್​​ಮನ್​​​​ ಬದಲಿಗೆ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಿದ್ರು. ಸಿಕ್ಕ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಜೈಸ್ವಾಲ್, ಶುಭ್​ಮನ್ ಗಿಲ್​ ಪಾಲಿಗೆ ಮುಳ್ಳಾದರು. ಈ ವಿಶ್ವಕಪ್​ ಸೆಲೆಕ್ಷನ್​ಗೂ ಮುನ್ನ ನಡೆದ ಐಪಿಎಲ್​ನಲ್ಲೂ ಜಿದ್ದಿಗೆ ಬಿದ್ದಂತೆ ಬ್ಯಾಟಿಂಗ್ ನಡೆಸಿದ ಜೈಸ್ವಾಲ್, ಟಿ20 ವಿಶ್ವಕಪ್​ನ ಫಸ್ಟ್​ ಚಾಯ್ಸ್​ ಓಪನರ್ ಆಗಿ ಆಯ್ಕೆಯಾದರು. ಇತ್ತ ಟಿ20 ವಿಶ್ವಕಪ್​ ಆಯ್ಕೆಗೂ ಮುನ್ನ ಪರದಾಡಿದ ಗಿಲ್​​, ರಿಸರ್ವ್ಡ್​ ಪ್ಲೇಯರ್ ಸ್ಥಾನಕ್ಕೆ ಸಿಮೀತರಾದ್ರು.

ರಿಸರ್ವ್ಡ್​ ಪ್ಲೇಯರ್ ಆಗಿಯೇ ಕಳೆದು ಹೋಗ್ತಾರಾ ಗಿಲ್.?

ಟಿ20 ವಿಶ್ವಕಪ್​ನಲ್ಲಿ ಶುಭ್​ಮನ್ ಗಿಲ್ ಸದ್ಯ ರಿಸರ್ವ್ಡ್​ ಪ್ಲೇಯರ್ ಆಗಿದ್ದಾರೆ. ಮುಂದೆ ರಿಸರ್ವ್ಡ್​ ಪ್ಲೇಯರ್​ ಸ್ಥಾನದಿಂದಲೂ ಕಾಣೆಯಾಗ್ತಾರಾ ಎಂಬ ಅನುಮಾನ ಹುಟ್ಟಿದೆ. ರೋಹಿತ್ ನಿರ್ಗಮನದ ಬಳಿಕ ಆರಂಭಿಕನಾಗಿ ಕಾಣಿಸಿಕೊಳ್ಳಲು, ಟೀಮ್ ಇಂಡಿಯಾ ಹೊರಗೆ ಭಾರೀ ಪೈಪೋಟಿ ನಡೀತಿದೆ. ಐಪಿಎಲ್​ನಲ್ಲಿ ಮಿಂಚಿರುವ ಅಭಿಷೇಕ್ ಶರ್ಮಾ, ಒಂದೇ ಒಂದು ಅವಕಾಶಕ್ಕೆ ಕಾಯ್ತಿದ್ದಾರೆ. ಋತುರಾಜ್ ಗಾಯಕ್ವಾಡ್ ಕೂಡ ಕರ್ಚೀಪ್ ಹಾಕಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಗಿಲ್​, ಕಮಾಲ್ ಮಾಡದಿದ್ರೆ, ಟಿ20 ತಂಡದಿಂದಲೇ ಕಳೆದುಹೋಗುವುದು ಗ್ಯಾರಂಟಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್.. ರೋಹಿತ್ ಹೊರಗೆ ಹೋದ್ರೆ ಶುಭ್​ಮನ್ ಗಿಲ್​ಗೆ ಚಾನ್ಸೇ ಸಿಗಲ್ವಾ?

https://newsfirstlive.com/wp-content/uploads/2024/06/ROHIT_GILL.jpg

Load More