newsfirstkannada.com

ಟಿವಿಯಲ್ಲಿ ಬರುವ ‘ಕ್ರೈಂ ಶೋ’ಗಳ ಎಫೆಕ್ಟ್; ಜನರ ಮನಸ್ಸು ಗೆಲ್ಲಲು ಅಡ್ಡದಾರಿ ಹಿಡಿದು ಲಾಕ್ ಆದ..!

Share :

07-11-2023

    ಜನರನ್ನು ಮೆಚ್ಚಿಸುವ ಸಲುವಾಗಿ ಪೊಲೀಸ್​​ನಂತೆ ರೆಡಿ ​​

    ಮೊಹಮ್ಮದ್ ಸರ್ಮಾಜ್ ಆಲಂ (26) ಬಂಧಿತ ಆರೋಪಿ

    ಸೆಕ್ಷನ್ 170, 171ರ ಅಡಿಯಲ್ಲಿ ಕೇಸ್​ ದಾಖಲಿಸಿದ ಪೊಲೀಸ್​​

ಸೋಶಿಯಲ್ ಮೀಡಿಯಾ, ಟಿವಿ, ಸಿನಿಮಾ, ನಾಟಕಗಳು ಜನರ ಮೇಲೆ ನಮ್ಮ ನಿರೀಕ್ಷೆಗೂ ಮೀರಿ ಪರಿಣಾಮ ಬೀರುತ್ತವೆ. ಅದು ಕೆಟ್ಟದಾಗಿಯೂ ಇರಬಹುದು, ಒಳ್ಳೆಯ ರೀತಿಯಲ್ಲೂ ಇರಬಹುದು. ಇಲ್ಲೊಬ್ಬ ಪುಣ್ಯಾತ್ಮ ಟಿವಿಯಲ್ಲಿ ಬರುವ ಕ್ರೈಂ ಶೋಗಳಿಂದ ಪ್ರೇರಿತಗೊಂಡು ಜನರ ಮನಸ್ಸು ಗೆಲ್ಲುಲು ಅಡ್ಡ ದಾರಿ ಹಿಡಿದು ಪೊಲೀಸರ ಅತಿಥಿಯಾಗಿದ್ದಾನೆ!

ಹೌದು.. ಪ್ರತಿಯೊಬ್ಬರು ಒಂದಲ್ಲಾ ಒಂದು ಹುದ್ದೆಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ. ಆಸೆಪಟ್ಟಂತೆ ಕೆಲವರು ಶಿಕ್ಷಕ, ಇಂಜಿನಿಯರ್​​, ಡಾಕ್ಟರ್ ಮತ್ತೆ ಪೊಲೀಸ್​​ ಹುದ್ದೆಗಳಿಗೆ ಸೇರುತ್ತಾರೆ. ಇನ್ನೂ ಕೆಲವರಿಗೆ ಅಂಥ ಅವಕಾಶ ದಕ್ಕುವುದಿಲ್ಲ. ಹೀಗಾಗಿ ಅಂತವರು ಡಾಕ್ಟರ್ ಒಟ್ಟೆ ಹಾಕಿಕೊಳ್ಳುತ್ತಾರೆ. ಇಲ್ಲೊಬ್ಬ ವ್ಯಕ್ತಿ ಜನರ ಅಟೆನ್ಷನ್ ಪಡೆಯಲಿಕ್ಕಾಗಿ ಐಪಿಎಸ್ ಅಧಿಕಾರಿಯಂತೆ ವಸ್ತ್ರವನ್ನು ಧರಿಸಿಕೊಂಡು ಓಡಾಡಿ ಲಾಕ್ ಆಗಿದ್ದಾನೆ.

10ನೇ ತರಗತಿಯವರೆಗೆ ಓದಿದ್ದ ವ್ಯಕ್ತಿಯೊಬ್ಬ ಐಪಿಎಸ್ ಅಧಿಕಾರಿಯಂತೆ ವೇಷ ಧರಿಸಿ ಓಡಾಡಿ ಪೊಲೀಸರ ಅತಿಥಿಯಾದ ಘಟನೆ ಗುಜರಾತ್​ನ ಉದ್ನಾ ಪ್ರದೇಶದಲ್ಲಿ ನಡೆದಿದೆ. ಮೊಹಮ್ಮದ್ ಸರ್ಮಾಜ್ ಆಲಂ (26) ಬಂಧಿತ ಆರೋಪಿ. ಬಂಧಿತ ವ್ಯಕ್ತಿಯು ಸೂರತ್ ಮೂಲದ ಜವಳಿ ಘಟಕದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ. ಮೊಹಮ್ಮದ್ ಸರ್ಮಾಜ್ ಆಲಂ ಜನರನ್ನು ಮೆಚ್ಚಿಸುವ ಸಲುವಾಗಿ ಪೊಲೀಸ್ ಸಮವಸ್ತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಮಾರುವೇಷದಲ್ಲಿ ತಿರುಗಾಡಿದ್ದಾನೆ.

ಈತನ ಮೇಲಿರುವ ಆರೋಪಗಳು ಏನು..? 

ಪೊಲೀಸ್ ಅಧಿಕಾರಿಯಂತೆ ಪೋಸ್​​​ ಕೊಡುತ್ತಿದ್ದ ಈತ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸುವಂತೆ ಹೇಳುತ್ತಿದ್ದನಂತೆ. ಕೂಡಲೇ ಈತ ಫೇಕ್​​ ಅಧಿಕಾರಿ ಎಂದು ತಿಳಿಯುತ್ತಿದ್ದಂತೆ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಖಾಕಿ ಸಮವಸ್ತ್ರ ಮತ್ತು ಭುಜದ ಬ್ಯಾಡ್ಜ್‌ಗಳನ್ನು ಧರಿಸಿದ್ದ ಆಲಂನನ್ನು ಬಂಧಿಸಿದ್ದಾರೆ.

ಬಳಿಕ ಅವನ ಬಳಿಯಿದ್ದ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಪೊಲೀಸರು ಬಳಸುವ ವಾಕಿ-ಟಾಕಿ ಸೆಟ್, ಪಿಸ್ತೂಲ್ ಆಕಾರದ ಸಿಗರೇಟ್ ಲೈಟರ್, ಆಂಧ್ರ ಪ್ರದೇಶ ಪೊಲೀಸರ ಬ್ಯಾಡ್ಜ್ ಮತ್ತು ಮತ್ತೊಂದು ಪೊಲೀಸ್ ಸಮವಸ್ತ್ರವನ್ನು ಅವರ ಬ್ಯಾಗ್​ನಲ್ಲಿ ಪತ್ತೆ ಹಚ್ಚಿದ್ದಾರೆ. ಕೆಲವು ಟಿವಿ ಧಾರಾವಾಹಿಗಳು, ಕ್ರೈಮ್ ಕಥೆಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ. ಐಪಿಸಿಯ ಸೆಕ್ಷನ್ 170 ಮತ್ತು 171 ರ ಅಡಿಯಲ್ಲಿ ಕೇಸ್​ ಹಾಕಿ ಆಲಂನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಭಗೀರಥ ಗಾಧವಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿವಿಯಲ್ಲಿ ಬರುವ ‘ಕ್ರೈಂ ಶೋ’ಗಳ ಎಫೆಕ್ಟ್; ಜನರ ಮನಸ್ಸು ಗೆಲ್ಲಲು ಅಡ್ಡದಾರಿ ಹಿಡಿದು ಲಾಕ್ ಆದ..!

https://newsfirstlive.com/wp-content/uploads/2023/11/fake-police.jpg

Load More