ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕಿವಿಮಾತು ಹೇಳಿದ ಸಿದ್ದರಾಮಯ್ಯ
ಪದೇ ಪದೆ ಎದ್ದು ನಿಂತು ನೀವು ಮಾತನಾಡಿದ್ರೆ ನಿಮ್ಮ ಆಸೆ ಈಡೇರುತ್ತಾ?
ಹೊಂದಾಣಿಕೆ ರಾಜಕೀಯದ ಆರೋಪಕ್ಕೆ ಸಿಡಿದೆದ್ದ ಸಿಎಂ ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ಇವತ್ತು ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಧ್ಯೆ ಸ್ವಾರಸ್ಯಕರ ಚರ್ಚೆ ನಡೆದಿದೆ. ಸದನದಲ್ಲಿ ಸಿಎಂ ಮಾತನಾಡುವಾಗ ಶಾಸಕ ಯತ್ನಾಳ್ ಅವರು ಪದೇ ಪದೆ ಎದ್ದು ನಿಲ್ಲುತ್ತಿದ್ದರು. ಆಗ ಯತ್ನಾಳ್‌ಗೆ ಕಿವಿಮಾತು ಹೇಳಿದ ಸಿಎಂ ಸಿದ್ದರಾಮಯ್ಯ ಸಖತ್ ಪಂಚ್ ಕೊಟ್ರು.
ನೀವು ವಿರೋಧ ಪಕ್ಷದ ಸ್ಥಾನದ ಆಕಾಂಕ್ಷಿ ಅಂತಾ ಗೊತ್ತಿದೆ. ಪದೇ ಪದೆ ಯಾಕೆ ಎದ್ದು ನಿಂತು ನೀವು ಮಾತನಾಡುತ್ತೀರಾ? ಹೀಗೆ ಮಾತನಾಡಿದ್ರೆ ಉತ್ತಮ ಸಂಸದೀಯ ಪಟು ಆಗೋದಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷ ನಿಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಮಾತಿಗೆ ಮತ್ತೆ ಎದ್ದು ನಿಂತ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆಗ ಅವರಪ್ಪನಾಣೆ ಸಿಎಂ ಆಗೋದಿಲ್ಲ ಅಂತಾ ಹೇಳಿದ್ರಿ. ಅವರು ಸಿಎಂ ಆಗಲಿಲ್ಲವಾ? ನೀವು ಹೇಳಿದಕ್ಕಾದ್ರೂ ವಿರೋಧ ಪಕ್ಷದ ನಾಯಕನಾಗುತ್ತೇನೆ ಎಂದು ಯತ್ನಾಳ್ ಕಿಚಾಯಿಸಿದರು.
ಇಷ್ಟೆಲ್ಲಾ ವಾಗ್ವಾದದ ಮಧ್ಯೆ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೆ ಎದ್ದು ಮಾತನಾಡುತ್ತಿದ್ದರು. ಆಗ ಮತ್ತೆ ಕಾಲೆಳೆದ ಸಿಎಂ ಸಿದ್ದರಾಮಯ್ಯನವರು, ಮತ್ತೆ ನೀವು ಎಷ್ಟೇ ಎದ್ದು ನಿಂತರೂ ಕಿರುಚಾಡಿದರೂ ನಿಮ್ಮನ್ನ ಮಾಡೋದಿಲ್ಲ ಎಂದರು.
ನೀವು ವಿರೋಧ ಪಕ್ಷದ ಸ್ಥಾನದ ಆಕಾಂಕ್ಷಿ ಅಂತಾ ಗೊತ್ತಿದೆ. ಪದೇ ಪದೆ ಯಾಕೆ ಎದ್ದು ನಿಂತು ನೀವು ಮಾತನಾಡುತ್ತೀರಾ? ನನಗೆ ಇರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷ ನಿಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾಲೆಳೆದಿದ್ದಾರೆ. #NewsFirstKannada… pic.twitter.com/3Mbj8nzqaj
— NewsFirst Kannada (@NewsFirstKan) July 12, 2023
ಸಿಎಂ ಈ ಕಾಮಿಡಿ ಪಂಚ್‌ಗೆ ಮತ್ತೆ ಉತ್ತರಿಸಿದ ಯತ್ನಾಳ್ ಅವರು, ಹಾಗಾದರೆ ಅಡ್ಜೆಸ್ಟ್‌ಮೆಂಟ್ ಆಗಿದೆ ಎಂದರು. ಆಗ ಗರಂ ಆದ ಸಿದ್ದರಾಮಯ್ಯನವರು ನನ್ನ ರಾಜಕೀಯ ಜೀವನದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಲ್ಲ. ಎಂದಾದರೂ ಸಚಿವರ ಮನೆ ಬಳಿಗೆ ಹೋಗಿದ್ದೇನಾ? ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರು ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ. ಈಗ ಪ್ರತಿಪಕ್ಷದ ಸ್ಥಾನದಲ್ಲಿ ಹಲವರು ಕುಳಿತಿದ್ದಾರೆ. ಎಂದೂ ನಾನು ಯಾರ ಬಳಿಯೂ ಹೋಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Video: ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ -ಸಿಕ್ಕ ಗ್ಯಾಪ್ನಲ್ಲೇ ಡೈಲಾಗ್ ಹೊಡೆದ ಪ್ರದೀಪ್ ಈಶ್ವರ್
ಸಿಎಂ ಸಿದ್ದರಾಮಯ್ಯ ನಾನು ಯಾವ ಸಚಿವರ ಮನೆ ಬಳಿಗೆ ಹೋಗಿಲ್ಲ ಎಂದಿದ್ದಕ್ಕೆ ಯತ್ನಾಳ್ ಅವರು ಆಗ ದೂರವಾಣಿಯಲ್ಲಿ ಮಾತನ್ನಾಡಿರಬಹುದು ಎಂದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನೀವು ಈಗ ಎರಡ್ಮೂರು ಬಾರಿ ಶಾಸಕರಾಗಿರಬಹುದು. ನಾನು 1983ರಿಂದ ರಾಜಕೀಯದಲ್ಲಿ ಇದ್ದೇನೆ. ಬಿ.ಎಸ್ ಯಡಿಯೂರಪ್ಪ, ಆರ್.ವಿ ದೇಶಪಾಂಡೆ, ಬಿ.ಆರ್ ಪಾಟೀಲ್ ಇವರೆಲ್ಲಾ ಆಗಿನಿಂದಲೇ ಇದ್ದಾರೆ. ನಾನು ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಹಾಗೇನಾದರೂ ಮಾಡಿಕೊಂಡಿರೋದನ್ನ ಸಾಬೀತುಪಡಿಸಲಿ. ಆಗಲೇ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ