ನನ್ನಂತವನು ಆಗಿದ್ದರೇ ಪಾರ್ಟಿಯಿಂದ ಡಿಸ್ಮಿಸ್ ಮಾಡ್ತಿದ್ದೆ
ಏನೇನೂ ಮಾತಡಿದ್ದೀರಿ, ಏನೇನು ಕಥೆ ಅಂಥ ಇಸ್ಟರಿ ಇದೆ
ಭ್ರಷ್ಟ ಬಂಡೆ.. ನಾನೇಕೆ ಹೆದರಬೇಕು. ಪಕ್ಷಕ್ಕೆ ಬರ್ತಿರಲಿಲ್ಲ
ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಇವತ್ತು ವಿಧಾನಸಭೆಯಲ್ಲಿ ಮಾತಿನ ಮಹಾಯುದ್ಧವೇ ನಡೆದಿದೆ.
ಸದನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ವರ್ಗಾವಣೆಯಲ್ಲಿ ವ್ಯಾಪಾರ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ರು. ಆಗ ಚೇರ್ನಿಂದ ಎದ್ದ ಡಿ.ಕೆ ಶಿವಕುಮಾರ್ ಅವರು, ಏ.. ಕೂತ್ಕೋಳಯ್ಯಾ ಅಂತಾ ಏಕವಚನದಲ್ಲೇ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಂ ಹುದ್ದೆ 2,500 ಕೋಟಿ ರೂ. ಮಂತ್ರಿ ಹುದ್ದೆನೂ ಸಾವಿರ ಕೋಟಿ ಎಂದು ಹೇಳುತ್ತಿದ್ದವರು ನೀವು. ಏ.. ಕುತ್ಕೋಳಯ್ಯ ಕಂಡಿದ್ದೀನಿ. ಏನೇನೂ ಮಾತಾಡಿದ್ದೀರಿ, ಏನೇನು ಕಥೆ ಎನ್ನುವುದು ಹಿಸ್ಟರಿ ನಮ್ಮತ್ರ ಇದೆ. ಅರ್ಥ ಆಯಿತಾ. ಆವಾಗ ನಿಮ್ಮ ಸಿಎಂ ಸುಮ್ಮನಿದ್ದರೆಂದು ನಾವು ಸುಮ್ಮನಿರಕ್ಕೆ ತಯಾರಿಲ್ಲ. ನಿನ್ ಮಾತ್ ಮೇಲೆ, ನಾಲಿಗೆ ಮೇಲೆ ಹಿಡಿತವಿರಬೇಕು. ಆವತ್ತು ಅವರು ಸುಮ್ಮನಿದ್ದರು. ನನ್ನಂತವನಾಗಿದ್ದರೇ ಆವತ್ತೇ 24 ಗಂಟೆಯಲ್ಲಿ ಪಾರ್ಟಿಯಿಂದ ಡಿಸ್ಮಿಸ್ ಮಾಡುತ್ತಿದ್ದೆ. ನಿಮ್ಮಂತರಿಂದಲೇ ಇವತ್ತು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿರುವುದು ಎಂದು ಡಿ.ಕೆ. ಶಿವಕುಮಾರ್ ಗುಡುಗಿದರು.
ಡಿಸಿಎಂಗೆ ಎದುರತ್ತರ ಕೊಟ್ಟ ಶಾಸಕ ಯತ್ನಾಳ್, ಭ್ರಷ್ಟ ಬಂಡೆ.. ನಾನೇಕೆ ಹೆದರಬೇಕು. ನಿಮ್ಮಂತಹ ಪಕ್ಷಕ್ಕೆ ನಾನು ಏಕೆ ಬರುತ್ತಿದ್ದೆ ಹೇಳಿ. ನನ್ನ ಉಚ್ಛಾಟನೆ ಮಾಡಲು ಇವನ್ಯಾರು, ಹೂ ಇಸ್ ದಿಸ್ ಎಂದು ಸಿಟ್ಟಿನಿಂದಲೇ ಪ್ರಶ್ನೆ ಮಾಡಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ