newsfirstkannada.com

ಎಲ್ಲೆಲ್ಲೂ ‘ಕಾವಾಲ’ ಹವಾ; ಏರ್​​ಪೋರ್ಟ್​​ನಲ್ಲಿ ಫ್ಯಾನ್​​ ಜೊತೆ ತಮನ್ನಾ ಡ್ಯಾನ್ಸ್‌.. ಇಲ್ಲಿವೆ ಟಾಪ್​ 5 ಸಿನಿ ಸುದ್ದಿ

Share :

12-07-2023

    ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ಕೊಟ್ಟ ರಾಜಮೌಳಿ ಕುಟುಂಬ

    ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಘೋಸ್ಟ್​ ಚಿತ್ರದ ಟೀಸರ್ ರಿಲೀಸ್

    ಜಗೇಶ್​​ ನಟನೆಯ ತೋತಾಪುರಿ 2 ರೊಮ್ಯಾಂಟಿಕ್ ಸಾಂಗ್ ಹೇಗಿದೆ?

ಘೋಸ್ಟ್​ ಮಾಸ್ ಟೀಸರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಘೋಸ್ಟ್​ ಚಿತ್ರದ ಟೀಸರ್ ರಿಲೀಸ್ ಆಗಿದೆ. ಶಿವಣ್ಣನ 61ನೇ ಹುಟ್ಟುಹಬ್ಬದ ವಿಶೇಷವಾಗಿ ಘೋಸ್ಟ್​ ಚಿತ್ರದ ಬಿಗ್ ಡ್ಯಾಡಿ ಝಲಕ್ ರಿವೀಲ್ ಆಗಿದ್ದು, ಸ್ಯಾಂಡಲ್​ವುಡ್​ ಸೆನ್ಸೇಷನ್ ಆಗಿದೆ. ಸೆಂಚುರಿ ಸ್ಟಾರ್​, ಜಬರ್​ದಸ್ತ್​ ಡೈಲಾಗ್​ಗೆ ಫ್ಯಾನ್ಸ್​ ಫುಲ್​​ ಫಿದಾ ಆಗಿದ್ದು, ಇವ್ರು ಒರಿಜಿನಲ್ ಗ್ಯಾಂಗ್​ಸ್ಟರ್​ ಅಂತಿದ್ದಾರೆ. ಶ್ರೀನಿ ಈ ಚಿತ್ರ ನಿರ್ದೇಶಿಸಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.

ಡಾಲಿ-ಸುಮನ್ ಮೆಲೋಡಿ ಸಾಂಗ್

ತೋತಾಪುರಿ 2 ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಡಾಲಿ ಧನಂಜಯ್ ಮತ್ತು ಸುಮನ್ ರಂಗನಾಥ್ ಜೋಡಿ ಗಮನ ಸೆಳೆಯುತ್ತಿದೆ. ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿ ಚಾಪ್ಟರ್ 1 ಕಳೆದ ವರ್ಷ ತೆರೆ ಕಂಡಿತ್ತು. ಇದೀಗ ತೋತಾಪುರಿ ಚಾಪ್ಟರ್ 2 ಬಿಡುಗಡೆಗೆ ಸಜ್ಜಾಗಿದ್ದು, ನವರಸ ನಾಯಕ ಜಗ್ಗೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಧಾರ್ಮಿಕ ಕ್ಷೇತ್ರಗಳಿಗೆ ರಾಜಮೌಳಿ ಟೂರ್

RRR ಚಿತ್ರದ ನಂತರ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿರೋ ರಾಜಮೌಳಿ ಸದ್ಯ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡಿನ ಪ್ರಖ್ಯಾತ ದೇವಸ್ಥಾನಗಳಿಗೆ ಕುಟುಂಬದ ಜೊತೆ ಭೇಟಿ ನೀಡಿರುವ ರಾಜಮೌಳಿ ಈ ಕುರಿತು ವಿಡಿಯೋ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಅಂದ್ಹಾಗೆ, ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನ ಮಹೇಶ್ ಬಾಬು ಜೊತೆ ಮಾಡುತ್ತಿದ್ದು, ಈ ವರ್ಷದ ಕೊನೆಯಲ್ಲಿ ಶುರುವಾಗಲಿದೆ.

View this post on Instagram

A post shared by SS Rajamouli (@ssrajamouli)

2ನೇ ಮದುವೆ ಬಗ್ಗೆ ರಜಿನಿ ಪುತ್ರಿ ಸ್ಪಷ್ಟನೆ

ಸೂಪರ್​ಸ್ಟಾರ್​ ರಜಿನಿಕಾಂತ್ ಅವರ ಕಿರಿ ಮಗಳು ಐಶ್ವರ್ಯ ಎರಡನೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಬಗ್ಗೆ ಐಶ್ವರ್ಯ ಅವರ ಟೀಮ್ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ, ಐಶ್ವರ್ಯ ಮತ್ತೆ ಮದುವೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ ಹಾಗೂ ನಿರ್ಧಾರವೂ ಮಾಡಿಲ್ಲ ಎಂದು ತಿಳಿಸಿದೆ. ಅಂದ್ಹಾಗೆ, ಐಶ್ವರ್ಯ ರಜಿನಿಕಾಂತ್ ನಟ ಧನುಶ್ ಜೊತೆ 2004ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಧನುಶ್ ಮತ್ತು ಐಶ್ವರ್ಯ ವಿಚ್ಛೇದನ ಪಡೆದುಕೊಂಡಿದ್ದರು.

ಏರ್​ಪೋರ್ಟ್​ನಲ್ಲಿ ತಮನ್ನಾ ಕಾವಾಲಯ್ಯ ಡ್ಯಾನ್ಸ್

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೇ ನೋಡಿದ್ರು ಕಾವಾಲಯ್ಯ ಹಾಡಿನದ್ದೇ ಸದ್ದು ಗದ್ದಲ. ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ತಮನ್ನಾ ಕಾಣಿಸಿಕೊಂಡಿರುವ ಕಾವಾಲಯ್ಯ ಡ್ಯಾನ್ಸ್​ ಸಖತ್ ವೈರಲ್ ಆಗಿದ್ದು, ನಂಬರ್ 1 ಟ್ರೆಂಡಿಂಗ್​ನಲ್ಲಿದೆ. ಅಷ್ಟೇ ಅಲ್ಲ ರೀಲ್ಸ್​, ಶಾರ್ಟ್ಸ್​, ವಾಟ್ಸಾಪ್, ಫೇಸ್​ಬುಕ್ ಎಲ್ಲಾ ಕಡೆಯೂ ಸಂಚಲನ ಸೃಷ್ಟಿಸಿದೆ. ಇದೀಗ, ಸಾಂಗ್​ನಲ್ಲಿ ಸಖತ್ ಸ್ಟೆಪ್ ಹಾಕಿ ಮೋಡಿ ಮಾಡಿದ್ದ ತಮನ್ನಾ ಏರ್​ಪೋರ್ಟ್​ನಲ್ಲಿ ಫೋಟೋ ಜರ್ನಲಿಸ್ಟ್​ ಜೊತೆ ಕಾವಾಲಯ್ಯ ಹುಕ್ ಸ್ಟೆಪ್ ಹಾಕಿ ಗಮನ ಸೆಳೆದಿದ್ದು, ವಿಡಿಯೋ ವೈರಲ್ಆಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಎಲ್ಲೆಲ್ಲೂ ‘ಕಾವಾಲ’ ಹವಾ; ಏರ್​​ಪೋರ್ಟ್​​ನಲ್ಲಿ ಫ್ಯಾನ್​​ ಜೊತೆ ತಮನ್ನಾ ಡ್ಯಾನ್ಸ್‌.. ಇಲ್ಲಿವೆ ಟಾಪ್​ 5 ಸಿನಿ ಸುದ್ದಿ

https://newsfirstlive.com/wp-content/uploads/2023/07/tammanaa.jpg

Load More