newsfirstkannada.com

ನಿಗೂಢ ಶಕ್ತಿಯನ್ನು ಹೊದ್ದು ನಿಂತ ದೊಡ್ಡಹುಣಸೆ ಮರಗಳು.. ಹಾವೇರಿಯಲ್ಲಿ ಎಂದೂ ಮುಗಿಯದ ಒಂದು ಕುತೂಹಲ..!

Share :

12-07-2023

    12 ರಿಂದ 13 ಮಂದಿ ತಬ್ಬಿದ್ರೆ ಮಾತ್ರ ಪೂರ್ಣಗೊಳ್ಳುವ ಬೃಹತ್​ ಮರ

    ಅವು ಸುಮಾರು ಎಷ್ಟು ಸಾವಿರ ವರ್ಷಗಳ ಹಳೆಯ ಮರಗಳು ಗೊತ್ತಾ?

    ಔಷಧಿ ಗುಣದ ಜೊತೆಗೆ ಶ್ರದ್ಧಾಭಕ್ತಿಯ ಕೇಂದ್ರಗಳಾಗಿರುವ ಮರಗಳು

ಪ್ರಕೃತಿ ಅಂದ್ರೆ ಸೋಜಿಗ.. ಎಂದೂ ತಣಿಯದ ಕುತೂಹಲ.. ಮನುಷ್ಯನ ಬಹುಪಾಲು ಸಮಸ್ಯೆಗಳಿಗೆ ಪರಿಹಾರವನ್ನು ತನ್ನೊಡಲೊಳಗೆ ಹುದುಗಿಸಿಟ್ಟುಕೊಂಡಿದೆ. ಇದೇ ಪ್ರಕೃತಿಯ ಭಾಗವಾದ ಮೂರು ದೊಡ್ಡಹುಣಸೆ ಮರಗಳು ಭಾರೀ ಗಮನ ಸೆಳೆಯುತ್ತಿವೆ. ಮರಗಳು ಭಕ್ತರ ಶ್ರದ್ಧಾಕೇಂದ್ರಗಳಾಗಿಯೂ ಬದಲಾಗಿವೆ.

ಹಚ್ಚ ಹಸಿರಿನಿಂದ ಭಾರೀ ಅಗಲಕ್ಕೆ ಚಾಚಿರುವ ಮರದ ಕೊಂಬೆಗಳು.. ಸುಮಾರು 12 ರಿಂದ 13 ಮಂದಿ ಒಟ್ಟು ಸೇರಿ ತಬ್ಬಿದ್ರೆ ಮಾತ್ರ ಪೂರ್ಣಗೊಳ್ಳುವ ಬೃಹತ್​ ಮರ.. ಮೂರು ದೊಡ್ಡ ದೊಡ್ಡ ಹುಣಸೆಮರಗಳ ಕೆಳಗೆ ಧ್ಯಾನಸ್ಥರಾಗಿರುವ ಸ್ವಾಮೀಜಿ.. ಈ ಮರಗಳು ಕೇವಲ ಮರಗಳಲ್ಲ, ಈ ಭಾಗದ ಭಕ್ತರಿಗೆ ಕಲ್ಪವೃಕ್ಷಗಳು, ಪ್ರಕೃತಿಯ ವಿಸ್ಮಯವನ್ನು ಕಣ್ತುಂಬಿಕೊಳ್ಳುವವರಿಗೆ ಅಚ್ಚರಿಯ ಕೇಂದ್ರ, ಪರಿಸರ ಪ್ರೇಮಿಗಳಿಗೆ ಪ್ರವಾಸಿ ತಾಣವಾದ್ರೆ ಆಯುರ್ವೇದ ವೈದ್ಯರಿಗೆ ಔಷಧಿಯ ಭಂಡಾರ.

ತಮ್ಮ ಗಾತ್ರದಿಂದಲೇ ಜನರ ಹುಬ್ಬೇರಿಸುವಂತೆ ಮಾಡಿದ ಹುಣಸೆಮರಗಳು

ಅಂದಾಗೆ ಹಾವೇರಿಯ ಸವಣೂರಿನ ಈ ದೊಡ್ಡಹುಣಸೆ ಮರಗಳು ಗಾತ್ರದ ಮೂಲಕ ಹುಬ್ಬೇರಿಸುವಂತೆ ಮಾಡುತ್ತವೆ. ಇವುಗಳ ಕಾಂಡ ಎಷ್ಟು ದೊಡ್ಡದು ಅಂದ್ರೆ 13 ಜನರು ಒಟ್ಟುಗೂಡಿ ತಬ್ಬಿದಾಗ ಮಾತ್ರ ಅಪ್ಪುಗೆ ಪೂರ್ಣಗೊಳ್ಳುತ್ತದೆ. ಇಲ್ಲಿರುವ ಕಲ್ಮಠಕ್ಕೆ ಈ ಮರಗಳಿಂದಾಗಿ ದೊಡ್ಡಹುಣಸೆಮರದ ಕಲ್ಮಠ ಎಂಬ ಹೆಸರು ಬಂದಿದೆ.

ಬೇರಿನಿಂದ ಎಲೆಗಳವರೆಗೆ ಮೈತುಂಬ ಔಷಧಿಯ ಗುಣ ಹೊಂದಿರುವ ಈ ಮರದ ವೈಜ್ಞಾನಿಕ ಹೆಸರು ಎಡನ್ ಸೋನಿಯಾ ಡಿಜಿಟೇಟಾ. ಮಾಲ್ವೇಸಿ ಕುಟುಂಬಕ್ಕೆ ಸೇರಿದ ಈ ಮರದ ಸಾಮಾನ್ಯ ಹೆಸರು ಬೋವಾ ಬಾಬ್. ಈ ಮರಗಳ ಕಾಯಿ ಒಗರು ಮಿಶ್ರಿತ ಹುಳಿ ಆಗಿರುವುದರಿಂದ ಮತ್ತು ಕಾಯಿ ಹಾಗೂ ಕಾಂಡ ಬೃಹದಾಕಾರವಾಗಿರುವುದರಿಂದ ಈ ಮರಕ್ಕೆ ದೊಡ್ಡಹುಣಸೆಮರ ಎನ್ನಲಾಗುತ್ತದೆ.

ಈ ಮರಗಳು ಶ್ರದ್ಧಾಭಕ್ತಿಯ ಕೇಂದ್ರಗಳಾಗಿದ್ದು ಈ ಮರಗಳ ಕೆಳಗೆ ಕುಳಿತು ಧ್ಯಾನಿಸುತ್ತಾ ಪ್ರಾರ್ಥಿಸಿದರೆ ಬಯಕೆ ಈಡೇರುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಸಾವಿರಾರು ಸಂಖ್ಯೆಯ ಜನ ಈ ಮರಗಳಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಆದರೆ ಮೂರು ದೊಡ್ಡಹುಣಸೆಮರಗಳಲ್ಲಿ ಒಂದು ಮರ ಧರೆಗುರುಳಿದ್ದು ಭಕ್ತರ ಮನಸ್ಸಿಗೆ ಘಾಸಿ ಮಾಡಿದೆ. ಜೊತೆಗೆ ಕಲ್ಮಠದ ಪೀಠಾಧಿಪತಿ ಚನ್ನಬಸವ ಸ್ವಾಮಿಜಿಗಳ ಮನಸ್ಸಿಗೂ ಆಘಾತವನ್ನುಂಟು ಮಾಡಿದೆ. ಹೀಗಾಗಿ ಧರೆಗುರುಳಿರುವ ಮರಕ್ಕೆ ಮರು ಜೀವ ನೀಡಬೇಕೆಂದು ಜನ ಆಗ್ರಹಿಸಿದ್ದಾರೆ.

ಸವಣೂರಿನ ದೊಡ್ಡ ಹುಣಸೆಮರಗಳು 2 ಸಾವಿರ ವರ್ಷ ವಯಸ್ಸಿನ ಮರಗಳೆಂಬುವುದು ಜನರ ಅಭಿಪ್ರಾಯ. ಸುಮಾರು 2 ಸಾವಿರ ವರ್ಷಗಳ ಹಿಂದೆ ಗೋರಖ್ ನಾಥ್ ಎಂಬ ಯೋಗಿ ಈ ಮರಗಳನ್ನು ನೆಟ್ಟರು ಎಂಬ ಪ್ರತೀತಿ ಇದೆ. ಜೊತೆಗೆ ಮರಗಳಿಗೆ ಹೊಂದಿಕೊಂಡು ಶರಣ ಸಂಪ್ರದಾಯದ ಕಲ್ಮಠ ಕೂಡ ಇರುವುದರಿಂದ ಭಕ್ತಿ ಇಮ್ಮಡಿಗೊಂಡಿದೆ. ಮೂರು ಮರಗಳಲ್ಲಿ ಒಂದು ಬಿದ್ದಿರೋದು ವೃಕ್ಷ ಭಕ್ತರಲ್ಲಿ ಬೇಜಾರು ಹಾಗೂ ಆತಂಕ ಮೂಡುವಂತೆ ಮಾಡಿದೆ.

ಸಾಮಾನ್ಯವಾಗಿ ಆಫ್ರಿಕಾದ ದಟ್ಟ ಕಾಡುಗಳಲ್ಲಿ ಕಂಡುಬರುವ ದೊಡ್ಡ ಹುಣಸೆಮರಗಳು 4 ರಿಂದ 6 ಸಾವಿರ ವರ್ಷಗಳವರೆಗೆ ಬದುಕಿರಬಲ್ಲವು ಎಂದು ವಿಜ್ಞಾನಿಗಳು ಹೇಳುತ್ತಾರೆ. ಸವಣೂರಿನ ದೊಡ್ಡಹುಣಸೆಮರಗಳ ಕಾಂಡ ಬೃಹದಾಕಾರವಾಗಿ ಬೆಳೆದಿರುವುದನ್ನು ನೋಡಿದ್ರೆ ಸಾವಿರಾರು ವರ್ಷಗಳ ವಯಸ್ಸಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಇದೀಗ ಧರೆಗುರುಳಿರುವ ಮರದ ರಕ್ಷಣೆಗೆ ಜಿಲ್ಲಾಡಳಿತ ಧಾವಿಸಿದೆ. ಅರಣ್ಯ ಇಲಾಖೆ ದೊಡ್ಡ ಹುಣಸೆಮರಕ್ಕೆ ಜೀವ ತುಂಬುವ ಜವಾಬ್ದಾರಿ ವಹಿಸಿಕೊಂಡಿದೆ. ಈ ಜೀವ ತುಂಬುವ ಕೆಲಸಕ್ಕೆ ಸಿರಸಿಯ ಪಾರೆಸ್ಟ್ರೀ ಕಾಲೇಜ್ ಪ್ರಾಧ್ಯಾಪಕರು, ವಿಜ್ಞಾನಿಗಳು ಕೈ ಜೋಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಗೂಢ ಶಕ್ತಿಯನ್ನು ಹೊದ್ದು ನಿಂತ ದೊಡ್ಡಹುಣಸೆ ಮರಗಳು.. ಹಾವೇರಿಯಲ್ಲಿ ಎಂದೂ ಮುಗಿಯದ ಒಂದು ಕುತೂಹಲ..!

https://newsfirstlive.com/wp-content/uploads/2023/07/HVR_MARA.jpg

Load More