newsfirstkannada.com

ರೊಮ್ಯಾಂಟಿಕ್‌ ಸ್ಟಾರ್‌ ಆಗಿದ್ದ ನಟ ಅಬ್ಬಾಸ್‌ ಈಗ ಟ್ಯಾಕ್ಸಿ ಡ್ರೈವರ್‌; ಬಹುಭಾಷಾ ನಟನ ಬದುಕಲ್ಲಿ ಆಗಿದ್ದೇನು?

Share :

19-07-2023

    ನಟ ಅಬ್ಬಾಸ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದ ಬಗ್ಗೆ ಹೇಳಿದ್ದೇನು.?

    ನಟ ಅಬ್ಬಾಸ್‌ ಚಿತ್ರರಂಗದಿಂದ ದೂರ ಉಳಿದುಕೊಳ್ಳಲು ಕಾರಣವೇನು

    ಕನ್ನಡದಲ್ಲಿ ಶಾಂತಿ ಶಾಂತಿ ಶಾಂತಿ ಹಾಗೂ ಅಪ್ಪು ಪಪ್ಪು ಚಿತ್ರಗಳಲ್ಲಿ ನಟನೆ

ನಟ ಅಬ್ಬಾಸ್ ಕನ್ನಡದ ಶಾಂತಿ ಶಾಂತಿ ಶಾಂತಿ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ನಟ ಅಬ್ಬಾಸ್ ಅವರು ಚಿತ್ರರಂಗದಿಂದ ಸುಮಾರು ಎಂಟು ವರ್ಷಗಳಿಂದ ದೂರ ಉಳಿದುಕೊಂಡು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ರೊಮ್ಯಾಂಟಿಕ್‌ ನಟ ಎಂದೆನಿಸಿಕೊಂಡ ಅಬ್ಬಾಸ್ ಅವರು ಕೇವಲ ಒಂಬತ್ತು ವರ್ಷಗಳಲ್ಲಿ ಖ್ಯಾತಿ ಪಡೆದ ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಇದೀಗ ಖಾಸಗಿ ಸಂದರ್ಶನವೊಂದರಲ್ಲ್ಲಿ ಅಬ್ಬಸ್‌ ತಮ್ಮ ಜೀವನದ ಏಳು ಬೀಳುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರರಂಗದಿಂದ ದೂರ ಉಳಿದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಅಬ್ಬಾಸ್ ನೀಡಿದ ಸಂದರ್ಶನದಲ್ಲಿ ತಮಗೆ ಆತ್ಮಹತ್ಯೆಯ ಆಲೋಚನೆ ಕಾಡಿತ್ತು ಎಂದು ಹೇಳಿಕೊಂಡಿದ್ದಾರೆ.

ದುಡುಕಿನ ನಿರ್ಧಾರದ ಬಗ್ಗೆ ಅಬ್ಬಾಸ್‌ ಹೇಳಿದ್ದೇನು..?

ತನಗೂ ಕೂಡ ಆತ್ಮಹತ್ಯೆಯ ಆಲೋಚನೆ ಕಾಡಿತ್ತು. ನಾನು ಆ ಭಾವನೆಗಳನ್ನು ನೇರವಾಗಿ ಅನುಭವಿಸಿದ್ದೇನೆ. ನಾನು 10ನೇ ತರಗತಿ ಫೇಲ್ ಆಗಿದ್ದೆ. ಆಗ ನನ್ನ ಜೀವನ ಗೊಂದಲದಿಂದ ಕೂಡಿತ್ತು. ನನ್ನ ಹದಿಹರೆಯದ ದಿನಗಳಲ್ಲಿ ಅದೆಷ್ಟೋ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ಆ ಸಮಯದಲ್ಲಿ ನನ್ನ ಗೆಳತಿ ಒಂಟಿಯಾಗಿ ಬಿಟ್ಟು ಹೋಗಿದ್ದು. ಈ ಎಲ್ಲಾ ಕಾರಣಕ್ಕೆ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮೂಡಿತ್ತು ಎಂದಿದ್ದಾರೆ. ಹೀಗಾಗಿ ನಾನು ಸಾಯಬೇಕು ಎಂಬ ನಿರ್ಧಾರವನ್ನು ಮಾಡಿದೆ. ಒಮ್ಮೆ ರಸ್ತೆಯ ಪಕ್ಕದಲ್ಲಿ ನಿಂತು, ವೇಗವಾಗಿ ಚಲಿಸುವ ವಾಹನದ ಮುಂದೆ ಹೋಗಿಬಿಡಲು ಯೋಚಿಸುತ್ತಿದ್ದೆ. ಆದರೆ ನಾನು  ಹಾಗೆ ಮಾಡಿದರೆ ಆ ವಾಹನದ ಚಾಲಕನ ಜೀವನದ ಮೇಲೆ ಅದು ಪರಿಣಾಮ ಬೀರಬಹುದು ಎಂದು ಆಗ ನನಗೆ ಅರಿವಾಯಿತು. ನನ್ನ ಕರಾಳ ಕ್ಷಣದಲ್ಲಿಯೂ ಸಹ, ನಾನು ಇನ್ನೊಬ್ಬ ವ್ಯಕ್ತಿಯ ಯೋಗಕ್ಷೇಮವನ್ನು ಪರಿಗಣಿಸುತ್ತಿದ್ದೆ ಎಂದು ಸಂದರ್ಶನದಲ್ಲಿ ಕೇಳಿ ಕೊಂಡಿದ್ದಾರೆ.

ನಟ ಅಬ್ಬಾಸ್‌ ಚಿತ್ರರಂಗವನ್ನು ತೊರದಿದ್ದೇಕೆ?

ಚಿತ್ರರಂಗದಲ್ಲಿ ಮೊದ ಮೊದಲು ಚೆನ್ನಾಗಿತ್ತು. ಸಾಕಷ್ಟು ಸಾಧನೆಗಳ ನಂತರ ನನ್ನ ಕೆಲವು ಸಿನಿಮಾಗಳು ಸೋತು ಹೋದವು. ಆಗ ನಾನು ಆರ್ಥಿಕವಾಗಿ ದಿವಾಳಿಯಾಗಿದ್ದೆ. ಬಳಿಕ ಕೆಲಸ ಮಾಡಬೇಕೆಂದು ನಿರ್ಧರಿಸಿದೆ. ನಿರ್ಮಾಪಕ ಆರ್‌ಬಿ ಚೌಧರಿ ಅವರನ್ನು ಸಂಪರ್ಕಿಸಿ ಕೆಲಸಕ್ಕಾಗಿ ವಿನಂತಿಸಿದೆ. ಅವರು ಪೂವೇಲಿ ಚಿತ್ರದ ಭಾಗವಾಗಲು ನನಗೆ ಅವಕಾಶ ನೀಡಿದರು. ಆದರೆ, ಕೊನೆಗೆ ನನಗೇ ಬೇಸರವಾಗಿ ಸಿನಿಮಾ ಬಿಟ್ಟು ಬಂದೆ ಎಂದು ನಟ ಅಬ್ಬಾಸ್‌ ಹೇಳಿದ್ದಾರೆ.

ನ್ಯೂಜಿಲ್ಯಾಂಡ್‌ನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ ನಟ ಅಬ್ಬಾಸ್‌..!

ಇನ್ನು ಹೀಗೆ ಮಾತನ್ನ ಮುಂದುವರೆಸಿದ ನಟ ಅಬ್ಬಾಸ್​ ನನ್ನ ಕುಟುಂಬಕ್ಕೆ ತೊಂದರೆ ಆಗಬಾರದೆಂದು ನಾನು ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದೇನೆ. ನ್ಯೂಜಿಲ್ಯಾಂಡ್‌ನಲ್ಲಿ ಟ್ಯಾಕ್ಸಿ ಓಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾನು ವಿದೇಶದಲ್ಲಿ ವಾಸಿಸುತ್ತಿದ್ದಾಗ, ಕೆಲವು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದೇನೆ. ಆದರೆ ದುರಾದೃಷ್ಟವಶಾತ್, ನನ್ನ ಮಾತುಗಳನ್ನು ಆಗಾಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆರಂಭದಲ್ಲಿ ನಟನಾಗುವ ಆಸೆಯಿರಲಿಲ್ಲ ನನಗೆ ಎಂದು ಅಬ್ಬಾಸ್ ಬಹಿರಂಗಪಡಿಸಿದ್ದಾರೆ.

ನಟ ಅಬ್ಬಾಸ್​ ಅವರು ಕನ್ನಡದಲ್ಲಿ ಶಾಂತಿ ಶಾಂತಿ ಶಾಂತಿ, ಅಪ್ಪು ಪಪ್ಪು, ಕಂಡುಕೊಂಡೇನ್ ಕಂಡುಕೊಂಡೇನ್, ಪಡೆಯಪ್ಪ, ಹೇ ರಾಮ್, ಆನಂದಂ, ಮಿನ್ನಲೆ, ಅಂಶ್ ದಿ ಡೆಡ್ಲಿ ಭಾಗ ಹೀಗೆ ಹತ್ತು ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ನಟ ಅಬ್ಬಾಸ್​ ಅವರು ಈ ಎಲ್ಲ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರೊಮ್ಯಾಂಟಿಕ್‌ ಸ್ಟಾರ್‌ ಆಗಿದ್ದ ನಟ ಅಬ್ಬಾಸ್‌ ಈಗ ಟ್ಯಾಕ್ಸಿ ಡ್ರೈವರ್‌; ಬಹುಭಾಷಾ ನಟನ ಬದುಕಲ್ಲಿ ಆಗಿದ್ದೇನು?

https://newsfirstlive.com/wp-content/uploads/2023/07/actor-abbas-1.jpg

Load More