ಸಂಕಷ್ಟದಲ್ಲಿ ತಿಮ್ಮಪ್ಪನ ಮೊರೆ ಹೋದ ರಜನಿಕಾಂತ್ ಅಳಿಯ
ಇಬ್ಬರು ಮಕ್ಕಳೊಂದಿಗೆ ಮುಡಿಕೊಟ್ಟು ಪೂಜೆ ಸಲ್ಲಿಸಿದ ಧನುಷ್
ದಾಂಪತ್ಯ ಕಲಹ, ವಿವಾದಗಳಿಂದ ಸುದ್ದಿಯಾಗಿದ್ದ ತಮಿಳು ನಟ
ತಿರುಪತಿ: ಸೂಪರ್‌ಸ್ಟಾರ್ ರಜನಿಕಾಂತ್ ಅಳಿಯ ತಮಿಳು ನಟ ಧನುಷ್ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಇತ್ತೀಚೆಗೆ ದಾಂಪತ್ಯ ಕಲಹಕ್ಕೆ ಸಿಲುಕಿ ಧನುಷ್ ಸಾಕಷ್ಟು ಸುದ್ದಿಯಾಗಿದ್ದರು. ಇದಾದ ಬಳಿಕ ತಮಿಳು ಚಿತ್ರ ನಿರ್ಮಾಪಕರು ಧನುಷ್ ಅವರನ್ನ ಬ್ಯಾನ್ ಮಾಡೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ಸಾಲು, ಸಾಲು ವಿವಾದಗಳಿಗೆ ಸಿಲುಕಿದ್ದ ಧನುಷ್ ಇಂದು ಬೆಳ್ಳಂಬೆಳಗ್ಗೆ ತಿರುಮಲದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇಂದು ಮುಂಜಾನೆ ತಿರುಮಲಕ್ಕೆ ಭೇಟಿ ಕೊಟ್ಟ ನಟ ಧನುಷ್ ಅವರು ತಿಮ್ಮಪ್ಪನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಧನುಷ್ ಜೊತೆಗೆ ಅವರ ಇಬ್ಬರು ಮಕ್ಕಳಾದ ಯಾತ್ರಾ ಮತ್ತು ಲಿಂಗಾ ಕೂಡ ಸಾಥ್ ಕೊಟ್ಟಿದ್ದರು. ತಮ್ಮ ಇಬ್ಬರು ಮಕ್ಕಳ ಜೊತೆ ತಿರುಪತಿಗೆ ಆಗಮಿಸರೋ ಧನುಷ್ ಅವರು ಮುಡಿ ಕೊಡುವ ಮೂಲಕ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಿರುಮಲದಲ್ಲಿ ಭಕ್ತರ ಸರತಿ ಸಾಲಿನಲ್ಲಿ ಧನುಷ್ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ಧನುಷ್ ಕ್ಯಾಪ್ಟನ್ ಮಿಲ್ಲರ್ ಅನ್ನೋ ಹೊಸ ಚಿತ್ರದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದರು. ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ಖ್ಯಾತ ನಿರ್ದೇಶಕ ಅರುಣ್ ಮಾತೇಸ್ವರನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಮಧ್ಯೆ ಧನುಷ್ ಅವರು ತಮ್ಮ ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಾಲು, ಸಾಲು ಸಂಕಟಗಳ ಮಧ್ಯೆ ತಿಮ್ಮಪ್ಪನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂಕಟ ಬಂದಾಗ ವೆಂಕಟರಮಣ ಅನ್ನೋ ಹಾಗೆ ಧನುಷ್ ತಿರುಪತಿಯಲ್ಲಿ ಪ್ರತ್ಯಕ್ಷವಾಗಿರೋದು ವಿಶೇಷವಾಗಿದೆ. ತನ್ನಿಬ್ಬರು ಮಕ್ಕಳೊಂದಿಗೆ ಧನುಷ್ ಮುಡಿ ಕೊಟ್ಟು ಕಾಣಿಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
#Dhanush Anna in Tirupati visit ❤️
New getup 🔥@dhanushkraja Anna ❤️#CaptainMiller pic.twitter.com/yiHpcIgsou— 𝐂𝐡𝐨𝐜𝐨𝐁𝐨𝐲𝐃𝐟𝐜™ (@sandydfc) July 3, 2023