ಸೆನ್ಸಾರ್​ ಮಂಡಳಿ ವಿರುದ್ಧ ತಮಿಳು ನಟ ವಿಶಾಲ್ ಗಂಭೀರ ಆರೋಪ.. ಅಸಲಿಗೆ ಆಗಿದ್ದೇನು..?

author-image
Veena Gangani
ಸೆನ್ಸಾರ್​ ಮಂಡಳಿ ವಿರುದ್ಧ ತಮಿಳು ನಟ ವಿಶಾಲ್ ಗಂಭೀರ ಆರೋಪ.. ಅಸಲಿಗೆ ಆಗಿದ್ದೇನು..?
Advertisment
  • ‘ಮಾರ್ಕ್​ ಆಂಟೊನಿ’ ಹಿಂದಿ ಆವೃತ್ತಿ ಸರ್ಟಿಫಿಕೇಟ್​ಗೆ ಲಂಚ
  • ಲಂಚ ಕೊಟ್ಟಿದ್ದಾಗಿ ಹೇಳಿಕೊಂಡ ತಮಿಳು ನಟ ವಿಶಾಲ್​
  • ಆರೋಪದ ಬೆನ್ನಲ್ಲೇ ತನಿಖೆ ಆದೇಶಿಸಿದ ಸಚಿವಾಲಯ

ಒಂದು ಚಿತ್ರ ತೆರೆ ಮೇಲೆ ಬರಬೇಕು ಅಂದ್ರೆ ಅದಕ್ಕೆ ಸೆನ್ಸಾರ್​ ಸರ್ಟಿಫಿಕೇಟ್​ ಇರಲೇಬೇಕು. ಇದೀಗ ಸೆನ್ಸಾರ್​ ಮಂಡಳಿಯ ವಿರುದ್ಧ ತಮಿಳು ನಟ ವಿಶಾಲ್​ ಸಮರ ಸಾರಿದ್ದಾರೆ. ಸೆನ್ಸಾರ್‌ ಮಂಡಳಿಯಲ್ಲಿ ಸರ್ಟಿಫಿಕೇಟ್‌ಗೂ ಲಂಚ ಕೊಡಬೇಕು ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಹಾಗೂ ದಾಖಲೆ ಸಮೇತ ಪ್ರಧಾನಿಗೂ ಟ್ಯಾಗ್​ ಮಾಡಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ನಟ ವಿಶಾಲ್​ ಕಾಲಿವುಡ್​ನ ಬಹುಬೇಡಿಕೆಯ ನಟರಲ್ಲಿ ಇವರು ಕೂಡ ಒಬ್ಬರು. ಇತ್ತೀಚಿಗೆ ವಿಶಾಲ್ ನಟನೆಯ ‘ಮಾರ್ಕ್ ಆಂಟೊನಿ’ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆ ಆಗಿ ಹಿಟ್ ಆಗಿದೆ. ನಿನ್ನೆಯಷ್ಟೇ ಹಿಂದಿ ವರ್ಷನ್​ನಲ್ಲೂ ಮಾರ್ಕ್​ ಆಂಟೋನಿ ರಿಲೀಸ್​ ಆಗಿದೆ. ಇದರ ಬೆನ್ನಲ್ಲೇ ನಟ ವಿಶಾಲ್​ ಸೆನ್ಸಾರ್​ ಮಂಡಳಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದು, ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿದೆ.

publive-image

ಸೆನ್ಸಾರ್‌ ಸರ್ಟಿಫಿಕೇಟ್‌ಗೆ ಕೊಡ್ಬೇಕಂತೆ ಲಕ್ಷ ಲಕ್ಷ ಲಂಚ..
ಸೆನ್ಸಾರ್‌ ಮಂಡಳಿ ವಿರುದ್ಧ ತಮಿಳು ನಟ ವಿಶಾಲ್​ ಆರೋಪ

ಮಾರ್ಕ್​ ಆಂಟೋನಿ ಚಿತ್ರ, ತಮಿಳು, ತೆಲುಗಿನಲ್ಲಿ ತೆರೆಗೆ ಬಂದು, ಸಕ್ಸಸ್ ಎನಿಸಿಕೊಂಡಿದೆ. ಹೀಗಾಗಿ, ಈ ಸಿನಿಮಾವನ್ನು ಹಿಂದಿಯಲ್ಲೂ ರಿಲೀಸ್ ಮಾಡಬೇಕು ಎಂಬುದು ವಿಶಾಲ್ ನಿರ್ಧಾರವಾಗಿತ್ತು. ಅದಕ್ಕಾಗಿ ಅವರು ಹಿಂದಿ ವರ್ಷನ್ ರೆಡಿ ಮಾಡಿ, ಸೆನ್ಸಾರ್ ಮಾಡಿಸಲು ಹೋದಾಗ ಸೆನಾನ್ಸ್​ ಮಂಡಳಿಯ ಅಧಿಕಾರಿಗಳು ಲಂಚಕ್ಕೆ ಡಿಮ್ಯಾಂಡ್​ ಮಾಡಿದ್ದರಂತೆ. ತುರ್ತಾಗಿ ಸಿನಿಮಾ ತೆರೆಗೆ ತರಬೇಕಿದ್ದರಿಂದ ವಿಶಾಲ್ ಕೂಡ ಲಂಚ ನೀಡಿದ್ದು, ಇದೀಗ ಆ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

publive-image

‘ಮಾರ್ಕ್ ಆಂಟೊನಿ’ ಚಿತ್ರವನ್ನು ಹಿಂದಿಗೆ ಡಬ್ ಮಾಡಿ ರಿಲೀಸ್​ ಮಾಡಲು ನಿರ್ಧರಿಸಿದ್ವಿ. ಆದ್ರೆ, ಕೆಲ ತಾಂತ್ರಿಕ ಕಾರಣಗಳಿಗಾಗಿ ತಡವಾಗಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ ಮಾಡಲಾಯ್ತು. ಸೆನ್ಸಾರ್​ ಮಂಡಳಿಗೆ ಸೋಮವಾರ ಅರ್ಜಿ ಸಲ್ಲಿಸಿ ಬೇಗನೆ ಪ್ರಮಾಣ ಪತ್ರ ನೀಡುವಂತೆ ಮನವಿ ಮಾಡಿಕೊಂಡಿದ್ವಿ. ಆದ್ರೆ, ಅಲ್ಲಿನ ಅಧಿಕಾರಿಗಳು, ಒಂದೇ ದಿನದಲ್ಲಿ ಸರ್ಟಿಫಿಕೇಟ್​ ಬೇಕಾದ್ರೆ 6.50 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟರು. ನಾವು ಬೇರೆ ಆಪ್ಷನ್ ಇಲ್ಲದೆ ಹಣ ನೀಡಬೇಕಾಯಿತು. ಅಧಿಕಾರಿಗಳು ನಮ್ಮ ಸಿನಿಮಾವನ್ನು ನೋಡಲು ಮೂರು ಲಕ್ಷ ಹಣ ಮತ್ತು ಸೆನ್ಸಾರ್​ ಪ್ರಮಾಣ ಪತ್ರ ನೀಡಲು 3.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟರು, ಹಣವನ್ನು ನೀಡಿದ ಬಳಿಕವೇ ಪ್ರಮಾಣ ಪತ್ರ ಸಿಕ್ಕಿತು ಎಂದು ದಾಖಲೆ ಸಮೇತ ಆರೋಪ ಮಾಡಿದ್ದಾರೆ.

ಸೆನ್ಸಾರ್​ ಮಂಡಳಿಯಲ್ಲಿ ಭ್ರಷ್ಟಾಚಾರ ಬಯಲು ಮಾಡಿರುವ ನಟ ವಿಶಾಲ್​, ಮಹಾರಾಷ್ಟ್ರ ಸಿಎಂ ಹಾಗೂ ಪ್ರಧಾನ ಮಂತ್ರಿಗಳಾದ ಮೋದಿಯವರಿಗೂ ಟ್ಯಾಗ್​ ಮಾಡಿದ್ದಾರೆ. ಈ ವಿಷಯದ ಕಡೆಗೆ ಗಮನ ಹರಿಸಬೇಕು. ಸಿನಿಮಾದಲ್ಲಿ ಭ್ರಷ್ಟಾಚಾರ ತೋರಿಸುವುದು ಓಕೆ, ಆದರೆ, ನಿಜ ಜೀವನದಲ್ಲಿ ಸಿನಿಮಾದವರಿಗೆ ಭ್ರಷ್ಟಾಚಾರ ಎದುರಾದರೆ ಹೇಗೆ ಎಂದು ನ್ಯಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

ನಟ ವಿಶಾಲ್​ ಆರೋಪದ ಬೆನ್ನಲ್ಲೇ ತನಿಖೆಗೆ ಕೇಂದ್ರ ಆದೇಶ

ಸಾಕ್ಷಿ ಸಮೇತವಾಗಿ ವಿಶಾಲ್ ವಿಡಿಯೋ ಮಾಡಿ ಅದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಇದರ ಗಂಭೀರತೆಯನ್ನು ಅರಿತ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೂಡಲೇ ತನಿಖೆಗೆ ಆದೇಶಿಸಿದೆ. ಸಿ.ಬಿ.ಎಫ್.ಸಿಯ ಹಿರಿಯ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ, ತನಿಖೆಗೆ ಆದೇಶ ಮಾಡಿದೆ. ಈ ಕುರಿತು ಇದೊಂದು ದುರಾದೃಷ್ಟ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದೆ. ಸಿನಿಮಾದಲ್ಲಿ ಭ್ರಷ್ಟಾಚಾರದ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ನಟ ವಿಶಾಲ್​ ತೊಡೆತಟ್ಟಿ, ಜನಮನ ಗೆದ್ದಿದ್ದಾರೆ. ಇದೀಗ ನಿಜ ಜೀವನದಲ್ಲೂ ಕೂಡ, ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು, ನ್ಯಾಯ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment