newsfirstkannada.com

ಯೋಗಿಬಾಬುಗೆ ಚಮಕ್ ಕೊಟ್ಟ ಧೋನಿ, ಅಮರನಾಥ ಯಾತ್ರೆ ಮುಗಿಸಿದ ಸಾಯಿ ಪಲ್ಲವಿ; ಇಲ್ಲಿವೆ ಟಾಪ್​​ ಸಿನಿ ಸುದ್ದಿಗಳು

Share :

15-07-2023

    ಶೂಟಿಂಗ್​​ ಮುಗಿಸಿ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ ಸೂಪರ್ ಸ್ಟಾರ್ ರಜನಿ

    ಥಿಯೇಟರ್‌ನಲ್ಲಿ ಗ್ರ್ಯಾಂಡ್​ ಎಂಟ್ರಿಗೆ ಸಜ್ಜಾದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’

    ಮಗಳ ಕೋಣೆಯನ್ನು​ ವಿಶೇಷವಾಗಿ ಡಿಸೈನ್ ಮಾಡಿಸಿದ ರಾಮ್ ಚರಣ್ ದಂಪತಿ

ಯೋಗಿಬಾಬುಗೆ ಚಮಕ್ ಕೊಟ್ಟ ಧೋನಿ

ತಮಿಳು ಹಾಸ್ಯ ನಟ ಯೋಗಿಬಾಬು ಕ್ರಿಕೆಟಿಗ ಎಂಎಸ್​ ಧೋನಿ ಚಮಕ್ ಕೊಟ್ಟಿರೋ ವಿಡಿಯೋ ವೈರಲ್ ಆಗ್ತಿದೆ. ಮಹೇಂದ್ರ ಸಿಂಗ್ ಧೋನಿ ನಿರ್ಮಾಣದಲ್ಲಿ ತಯಾರಾಗಿರುವ LGM ಚಿತ್ರದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಈ ವೇಳೆ ಕೇಕ್ ಎತ್ತಿಕೊಂಡು ಧೋನಿ, ಯೋಗಿಬಾಬುಗೆ ತಿನ್ನಿಸುತ್ತಾರೆ ಅಂತಾ ನಿರೀಕ್ಷೆ ಮಾಡಿದ್ದರು. ಆದರೆ ಧೋನಿ ಯೋಗಿಬಾಬುಗೆ ತಿನ್ನಿಸದೇ ತಾವೇ ತಿಂದರು. ಇದನ್ನ ಗಮನಿಸಿ ಯೋಗಿಬಾಬು ಒಂದು ಕ್ಷಣ ನಿರಾಸೆಯಿಂದ ನೋಡಿದ್ರು. ಆದ್ರೆ ಯೋಗಿಬಾಬು ರಿಯಾಕ್ಷನ್​ನ ಧೋನಿ ಸಖತ್ ಎಂಜಾಯ್ ಮಾಡಿದ ವಿಡಿಯೋ ಗಮನ ಸೆಳೆಯುತ್ತಿದೆ.

ಅಮರನಾಥ ಯಾತ್ರೆ ಮುಗಿಸಿದ ಸಾಯಿ ಪಲ್ಲವಿ

ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ತನ್ನ ಪೋಷಕರೊಂದಿಗೆ ಅಮರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳನ್ನ ಶೇರ್ ಮಾಡಿರುವ ಸಾಯಿ ಪಲ್ಲವಿ ತುಂಬಾ ಎಮೋಷನಲ್​ ಆಗಿದ್ದಾರೆ. 60 ವರ್ಷದ ಆಸುಪಾಸಿನಲ್ಲಿರುವ ತಂದೆ-ತಾಯಿಯೊಂದಿಗೆ ಅಮರನಾಥ ಯಾತ್ರೆ ಮುಗಿಸಿದ್ದು ನಿಜಕ್ಕೂ ಅದ್ಭುತ ಅನುಭವ ಅಂತ ಸಂತಸ ಹಂಚಿಕೊಂಡಿದ್ದಾರೆ.

ರಿಲ್ಯಾಕ್ಸ್​ ಮೂಡ್​ನಲ್ಲಿ ರಜಿನಿಕಾಂತ್

ಇತ್ತೀಚೆಗಷ್ಟೇ ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಮ್’ ಸಿನಿಮಾ ಚಿತ್ರೀಕರಣ ಮುಗಿಸಿದ ಸೂಪರ್ ಸ್ಟಾರ್ ರಜಿನಿಕಾಂತ್ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದಾರೆ. ಇಷ್ಟು ದಿನ ‘ಜೈಲರ್’ ಹಾಗೂ ‘ಲಾಲ್ ಸಲಾಮ್’ ಚಿತ್ರಗಳ ಶೂಟಿಂಗ್​ನಲ್ಲಿದ್ದ ತಲೈವಾ ಎರಡೂ ಚಿತ್ರಗಳ ಕೆಲಸ ಮುಗಿಸಿ ಮಾಲ್ಡೀವ್ಸ್​ಗೆ ಪ್ರಯಾಣ ಮಾಡಿದ್ದು, ವಿಶ್ರಾಂತಿ ಪಡೆಯಲಿದ್ದಾರೆ. ಆಗಸ್ಟ್​ 10ಕ್ಕೆ ‘ಜೈಲರ್’ ಸಿನಿಮಾ ರಿಲೀಸ್ ಆಗಲಿದ್ದು, ಮಾಲ್ಡೀವ್ಸ್​ನಿಂದ ಹೊರಬಂದ ನಂತರ ಮತ್ತೆ ಚಿತ್ರದ ಪ್ರಮೋಷನ್​ನಲ್ಲಿ ಭಾಗಿಯಾಗಲಿದ್ದಾರೆ.

ಹಾಸ್ಟೆಲ್​ ಹುಡುಗರ ಭರ್ಜರಿ ಪ್ರಚಾರ

ಪ್ರೋಮೋಗಳಿಂದಲೇ ಸಖತ್ ಸೌಂಡ್ ಮಾಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಇದೇ ತಿಂಗಳು 21ನೇ ತಾರೀಖು ಥಿಯೇಟರ್​ಗೆ ಬರ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಅಫಿಶಿಯಲ್ ಟ್ರೇಲರ್ ರಿಲೀಸ್ ಆಗಿ ಹಾಸ್ಟೆಲ್ ಹುಡುಗರು ಈಗ ಭರ್ಜರಿ ಪ್ರಮೋಷನ್ ಶುರು ಮಾಡಿದ್ದಾರೆ. ಆಟೋಗಳ ಹಿಂದೆ ಪಂಚಿಂಗ್ ಡೈಲಾಗ್ಸ್​ ಪೋಸ್ಟರ್​ ಹಾಕಿ ಹಾವಳಿ ಶುರು ಮಾಡಿದ್ದಾರೆ. ನಿತೀನ್ ಕೃಷ್ಣಮೂರ್ತಿ ಈ ಚಿತ್ರ ನಿರ್ದೇಶಿಸಿದ್ದು, ವರುಣ್ ಗೌಡ ಮತ್ತು ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.

ರಾಮ್ ಚರಣ್​ ಮಗಳಿಗಾಗಿ ‘ಟೆಂಪಲ್ ಟ್ರೀ’ ನರ್ಸರಿ

ರಾಮ್ ಚರಣ್ ತೇಜ-ಉಪಾಸನ ದಂಪತಿ ತಮ್ಮ ಮುದ್ದಿನ ಮಗಳಿಗಾಗಿ ಬಹಳ ವಿಶೇಷವಾದ ನರ್ಸರಿ ನಿರ್ಮಿಸಿದ್ದಾರೆ. ಭೌದ್ಧ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದು ಟೆಂಪಲ್ ಟ್ರೀ ಎನ್ನುವ ಡಿಸೈನ್​ನಲ್ಲಿ ಕ್ಲಿನ್​ಕಾರಾಗಾಗಿ ನರ್ಸರಿ ಸೃಷ್ಟಿಸಿದ್ದಾರೆ. ಉಪಾಸನಾ ಹಾಗೂ ರಾಮ್ ಚರಣ್ ಇಬ್ಬರಿಗೂ ಅರಣ್ಯವೆಂದರೆ ಬಹಳ ಪ್ರೀತಿಯಾದ್ದರಿಂದ ಅದೇ ಥೀಮ್ ಇರಿಸಿ ಮಗಳ ಕೋಣೆಯನ್ನು ಡಿಸೈನ್ ಮಾಡಿಸಿದ್ದಾರೆ. ಗೋಡೆಗಳ ಮೇಲೆಲ್ಲ ಆನೆ, ಹುಲಿ, ಕೋತಿ, ಜನಪಾತ, ಮಳೆ, ಮರ, ಗಿಡಗಳ ಭಿನ್ನ ರೀತಿಯ ಚಿತ್ರಗಳು ಆಕರ್ಷಿಸುತ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಯೋಗಿಬಾಬುಗೆ ಚಮಕ್ ಕೊಟ್ಟ ಧೋನಿ, ಅಮರನಾಥ ಯಾತ್ರೆ ಮುಗಿಸಿದ ಸಾಯಿ ಪಲ್ಲವಿ; ಇಲ್ಲಿವೆ ಟಾಪ್​​ ಸಿನಿ ಸುದ್ದಿಗಳು

https://newsfirstlive.com/wp-content/uploads/2023/07/ms.jpg

Load More