newsfirstkannada.com

Video: ಬೈಕ್​ ಚಕ್ರಕ್ಕೆ ಹೆಂಡತಿಯ ಬಟ್ಟೆ ಸಿಲುಕಿ ಭಯಾನಕ ಅಪಘಾತ.. ಮೂವರು ಬದುಕಿ ಉಳಿದಿದ್ದೇ ಹೆಚ್ಚು

Share :

19-11-2023

    ಹೆಂಡತಿ, ಮಗುವನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗ್ತಿದ್ದ ಪತಿ

    ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ಚಕ್ರಕ್ಕೆ ಸಿಲುಕಿದ ಬಟ್ಟೆ

    ಭೀಕರ ಅಪಘಾತದಲ್ಲಿ ಗ್ರೇಟ್ ಎಸ್ಕೇಪ್ ಆದ ಪತಿ, ಪತ್ನಿ, ಮಗು

ಚೆನ್ನೈ: ವೇಗವಾಗಿ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಹೆಂಡತಿಯ ಬಟ್ಟೆ ಚಕ್ರಕ್ಕೆ ಸಿಲುಕಿಕೊಂಡು ಭಯಾನಕವಾಗಿ ನಡು ರಸ್ತೆಯಲ್ಲಿ ಬಿದ್ದಿರುವ ಘಟನೆ ತಮಿಳು ನಾಡಿನ ಚೆನ್ನೈ ಸಮೀಪ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ತನ್ನ ಮಗು ಹಾಗೂ ಹೆಂಡತಿಯನ್ನು ಕರೆದುಕೊಂಡು ಗಂಡ ಬೈಕ್​ನಲ್ಲಿ ಚಲಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆ ಬೈಕ್​ನ ಹಿಂಬದಿ ಸೀಟ್​​ನಲ್ಲಿ ಕುಳಿತಿದ್ದ ಹೆಂಡತಿಯ ಬಟ್ಟೆ ಬೈಕ್ ಚಕ್ರಕ್ಕೆ ಸಿಲುಕಿಕೊಂಡಿದೆ. ಪರಿಣಾಮ ಮಗು ಸೇರಿ ಮೂವರು ನಡು ರಸ್ತೆಯಲ್ಲೇ ಬಿದ್ದಿದ್ದಾರೆ. ಸದ್ಯ ಬೈಕ್​ ಹಿಂದೆ ಯಾವುದೇ ವಾಹನ ಬಂದಿಲ್ಲದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು ಕುಟುಂಬ ಸೇಫ್ ಆಗಿದೆ ಎಂದು ಹೇಳಲಾಗಿದೆ.

ರಸ್ತೆ ಬಿದ್ದಿದ್ದರಿಂದ ಮೂವರಿಗೂ ಸಣ್ಣ ಗಾಯಾಗಳಾಗಿದ್ದು ಸಮೀಪದ ಕ್ಲಿನಿಕ್​ಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬೈಕ್​ ಚಕ್ರಕ್ಕೆ ಹೆಂಡತಿಯ ಬಟ್ಟೆ ಸಿಲುಕಿ ಭಯಾನಕ ಅಪಘಾತ.. ಮೂವರು ಬದುಕಿ ಉಳಿದಿದ್ದೇ ಹೆಚ್ಚು

https://newsfirstlive.com/wp-content/uploads/2023/11/TN_BIKE_ACCIDENT.jpg

Load More