newsfirstkannada.com

Cauvery water: ಕರ್ನಾಟಕದ ವಿರುದ್ಧ ಮತ್ತೆ ಫಿಟಿಂಗ್ ಇಟ್ಟ ತಮಿಳುನಾಡು.. ಕೇಂದ್ರ ಸರ್ಕಾರಕ್ಕೆ ಕೊಟ್ಟ ಲಿಖಿತ ದೂರಿನಲ್ಲಿ ಏನಿದೆ..?

Share :

05-07-2023

    ನೀರಿಗಾಗಿ ಮತ್ತೆ ಜಲಯುದ್ಧ ಶುರುಮಾಡಿದ ತಮಿಳುನಾಡು

    ಕೇಂದ್ರ ಸರ್ಕಾರದ ಬಳಿ ಏನೆಲ್ಲಾ ಆರೋಪ ಮಾಡಿದೆ ಗೊತ್ತಾ?

    ಮೇಕೆದಾಟು ಯೋಜನೆ ವಿರುದ್ಧವೂ ತಮಿಳುನಾಡು ಕಿತಾಪತಿ

ಬೆಂಗಳೂರು: ನೀರಿನ ವಿಚಾರದಲ್ಲಿ ಆಗಾಗ ಕ್ಯಾತೆ ತೆಗೆಯುವ ತಮಿಳುನಾಡು ಮತ್ತೆ ಕಿರಿಕ್ ಮಾಡಲು ಹೊರಟಿದೆ. ‘ನಮಗೆ ನಿಗದಿತ ಪ್ರಮಾಣದ ಕಾವೇರಿ ನೀರನ್ನು ಹರಿಸಿಲ್ಲ’ ಎಂದು ಕರ್ನಾಟಕದ ವಿರುದ್ಧ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ದೂರು ನೀಡಿದೆ. ಈ ಮೂಲಕ ಕರ್ನಾಟಕ-ತಮಿಳುನಾಡು ನಡುವಿನ ಜಲಯುದ್ಧ ಮತ್ತೆ ಶುರುವಾಗುವ ಲಕ್ಷಣ ಗೋಚರವಾಗಿದೆ.

ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್​ಗೆ ತಮಿಳುನಾಡು ಲಿಖಿತ ದೂರು ನೀಡಿದೆ. ತಮಿಳುನಾಡು ಜಲಸಂಪನ್ಮೂಲ ಖಾತೆ ಸಚಿವ ದೊರೈ ಮುರುಗನ್, ಖುದ್ದು ಕೇಂದ್ರದ ನಾಯಕರನ್ನು ಭೇಟಿ ಮಾಡಿ, ‘ಜೂನ್ ತಿಂಗಳಲ್ಲಿ 9 TMC ನೀರನ್ನು ನಮಗೆ ಕರ್ನಾಟಕ ಬಿಡಬೇಕಿತ್ತು. ಆದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ ಕರ್ನಾಟಕ ಬಿಟ್ಟಿಲ್ಲ ಎಂದು ದೂರಿನಲ್ಲಿ ಆರೋಪಿಸಿದೆ.

ಜುಲೈ ತಿಂಗಳಲ್ಲಿ ತಮಿಳುನಾಡಿಗೆ 34 ಟಿಎಂಸಿ ನೀರು ಹರಿಸಬೇಕು. ಜೂನ್, ಜುಲೈ ತಿಂಗಳದ ನೀರನ್ನು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಅಂತಾ ಎಂದು ದೊರೈ ಮುರುಗನ್ ಒತ್ತಾಯಿಸಿದ್ದಾರೆ. ಅಲ್ಲದೇ ತಮಿಳುನಾಡು ರಾಜ್ಯದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ಸಕ್ಸೆನಾ ಅವರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ತಮಿಳುನಾಡು ರಾಜ್ಯದ ಮೆಟ್ಟೂರು ಡ್ಯಾಮ್​ನಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಹೀಗಾಗಿ ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್​ಗಳಿಂದ ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿ ಎಂದು ಮನವಿ ಮಾಡಲಾಗಿದೆ.

ಆದರೆ ಕರ್ನಾಟಕದ ಕಾವೇರಿ ಕಣಿವೆಯ ನಾಲ್ಕು ಡ್ಯಾಮ್​ಗಳಲ್ಲಿ 31.8 ಟಿಎಂಸಿ ನೀರು ಮಾತ್ರ ಸಂಗ್ರಹ ಆಗಿದೆ. ನಾಲ್ಕು ಡ್ಯಾಮ್​ಗಳಲ್ಲಿ ಒಟ್ಟಾರೆ ಶೇ.28 ರಷ್ಟು ಮಾತ್ರ ನೀರು ಸಂಗ್ರಹ ಆಗಿದ್ದರೆ, KRSನಲ್ಲಿ 10 ಟಿಎಂಸಿ, ಹೇಮಾವತಿಯಲ್ಲಿ 13 ಟಿಎಂಸಿ ನೀರು ಸಂಗ್ರಹದ ಜೊತೆಗೆ ನಾಲ್ಕು ಡ್ಯಾಮ್​ಗಳ ಒಳ ಹರಿವಿನ ಪ್ರಮಾಣ 4,915 ಕ್ಯೂಸೆಕ್ ಇದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡಿನ ಮೆಟ್ಟೂರು ಡ್ಯಾಮ್​ನಲ್ಲಿ 60 ಟಿಎಂಸಿ ನೀರು ಸಂಗ್ರಹ ಇದೆ. ಜೊತೆಗೆ ಮೇಕೆದಾಟು ಡ್ಯಾಮ್ ವಿರುದ್ಧವೂ ದೂರು ನೀಡಿದೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cauvery water: ಕರ್ನಾಟಕದ ವಿರುದ್ಧ ಮತ್ತೆ ಫಿಟಿಂಗ್ ಇಟ್ಟ ತಮಿಳುನಾಡು.. ಕೇಂದ್ರ ಸರ್ಕಾರಕ್ಕೆ ಕೊಟ್ಟ ಲಿಖಿತ ದೂರಿನಲ್ಲಿ ಏನಿದೆ..?

https://newsfirstlive.com/wp-content/uploads/2023/07/CAUVERY.jpg

Load More