newsfirstkannada.com

ಪೋಷಕರ ಧಿಕ್ಕರಿಸಿ ಮದುವೆ; ಮೂರೇ ದಿನಕ್ಕೆ ಬಿತ್ತು ಹೆಣ; ಮರ್ಯಾದೆಗಾಗಿ ಪ್ರೇಮಿಗಳ ಕೊಲೆ

Share :

04-11-2023

    ಬೈಕಿನಲ್ಲಿ ಏಕಾಏಕಿ ಬಂದು ಸೆಕೆಂಡ್​​ಗಳಲ್ಲಿ ಕೊಂದು ಎಸ್ಕೇಪ್ ಆದ್ರು

    ಮದುವೆಯಾದ ಮೂರನೇ ದಿನಕ್ಕೆ ಹತ್ಯೆಯಾಗಿ ಮಸಣ ಸೇರಿದ ಜೋಡಿ

    ಮರ್ಯಾದೆಗಾಗಿ ಯುವ ಪ್ರೇಮಿಗಳನ್ನು ಬರ್ಬರವಾಗಿ ಕೊಂದ್ರು ಹಂತಕರು?

ಪ್ರೀತಿಗೆ ಯಾವುದೇ ಜಾತಿ-ಧರ್ಮ ಇಲ್ಲ, ಬಡವ- ಶ್ರೀಮಂತ ಅನ್ನೋ ಯಾವುದೇ ಭೇದ ಬಾವವಿಲ್ಲ ಅಂತಾರೆ. ಆದ್ರೆ ಇದು ಸಿನಿಮಾಗೆ ಮಾತ್ರ ಸೀಮಿತ ಎನ್ನಬಹುದು. ಯಾಕಂದ್ರೆ, ಇವತ್ತಿನ ಕಥೆಯಲ್ಲಿ ಒಂದೇ ಜಾತಿ, ಒಂದೇ ಸಮುದಾಯದವರು ಪ್ರೀತಿಸಿ ಮದುವೆಯಾದರು. ಹೊಸ ಜೀವನ ಕನಸು ಕಂಡರು. ಆದರೆ ಮೂರನೇ ದಿನಕ್ಕೆ ಬರ್ಬರವಾಗಿ ಹತ್ಯೆಯಾಗಿ ಮಸಣ ಸೇರಿದ್ದಾರೆ.

ಮರ್ಯಾದೆಗಾಗಿ ನಡೆದ ಘನಘೋರ ಹತ್ಯೆ!

ಮದುವೆ ಆಗಿ ಇನ್ನು ಮೂರೇ ದಿನ ಆಗಿತ್ತು. ಹೊಸ ಬದುಕು.. ಹೊಸ ಹೊಸ ಕನಸುಗಳು.. ಒಟ್ಟಿಗೆ ಬದುಕಲೇ ಬೇಕು ಅಂತ ಪೋಷಕರನ್ನು ಎದುರಿಸಿ ಪ್ರೇಮ ವಿವಾಹವಾಗಿದ್ದರು. ಆದರೆ ಬದುಕಿ ಬಾಳಬೇಕಿದ್ದ ನವಜೋಡಿ ಮೂರೇ ದಿನಕ್ಕೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ. ನವೆಂಬರ್ 2ನೇ ತಾರೀಕು ಸಂಜೆ 6 ಗಂಟೆಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮನೆಯೊಳಗೆ ನುಗ್ಗಿ, ಪಾಪ ಪುಣ್ಯದ ಲೆಕ್ಕ ಹಾಕದೇ ಹೊಸದಾಗಿ ಮದುವೆಯಾಗಿದ್ದ ಯುವ ಪ್ರೇಮಿಗಳನ್ನ ಬರ್ಬರವಾಗಿ ಕೊಂದು ಪರಾರಿಯಾಗಿದ್ದಾರೆ. ಸದ್ಯ ಈ ನವಜೋಡಿಯ ಹತ್ಯೆಯಿಂದ ತೂತುಕೂಡಿ ಬೆಚ್ಚಿಬಿದ್ದಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

ಪೋಷಕರನ್ನ ಧಿಕ್ಕರಿಸಿ ಮದುವೆ.. ಮೂರು ದಿನಕ್ಕೆ ಬಿತ್ತು ಹೆಣ!
ಮರ್ಯಾದೆಗಾಗಿ ಯುವ ಪ್ರೇಮಿಗಳನ್ನ ಕೊಂದ್ರಾ ಹಂತಕರು?

ತೂತುಕೂಡಿಯಲ್ಲಿ ವರದಿಯಾಗಿರುವ ಈ ಕೊಲೆ ಮರ್ಯಾದೆ ಹತ್ಯೆ ಅಂತ ಹೇಳಲಾಗ್ತಿದೆ. ಪೋಷಕರು ನಿರಾಕರಿಸಿದರೂ ಪ್ರೀತಿಸದವನ ಜೊತೆ ಮದುವೆಯಾಗಿದ್ದರಿಂದ ಮರ್ಯಾದೆಗೆ ಅಂಜಿದ ಪೋಷಕರು ಈ ಕೊಲೆ ಮಾಡಿಸಿದ್ರು ಅನ್ನೋ ಅನುಮಾನ ವ್ಯಕ್ತವಾಗಿದೆ.

‘ಸೈರಾಟ್’​ ಸಿನಿಮಾದ ಕಥೆ ನೆನಪಿಸಿತು ಈ ಕೊಲೆ!
ಬಡವ-ಶ್ರೀಮಂತ ಮನೆತನದ ಪ್ರೇಮ ಕಥೆ ಇದು!

2016ರಲ್ಲಿ ತೆರೆಕಂಡ ಮರಾಠಿ ಸಿನಿಮಾ ‘ಸೈರಾಟ್’​ ಬಹುಶಃ ನೆನಪಿರಬಹುದು. ಶ್ರೀಮಂತ ಮನೆತನದ ಹುಡುಗಿ, ತನ್ನದೇ ಊರಿನ ಬಡ ಹಾಗೂ ಕೆಳಜಾತಿಯ ಹುಡುಗನನ್ನ ಪ್ರೀತಿಸ್ತಾಳೆ. ಆಮೇಲೆ ಪೋಷಕರ ವಿರೋಧ ವ್ಯಕ್ತವಾಗಿದ್ದಕ್ಕೆ ಇಬ್ಬರು ಓಡಿ ಹೋಗಿ ಮದುವೆನೂ ಆಗ್ತಾರೆ. ದೂರದ ಊರಿನಲ್ಲಿ ಬಾಡಿಗೆ ಮನೆಯೊಂದನ್ನು ಮಾಡ್ಕೊಂಡು ಬದುಕು ಸಾಗಿಸ್ತಾರೆ. ವರ್ಷಗಳ ನಂತರ ಈ ವಿಷಯ ತಿಳಿದು ಮನೆ ಹುಡುಕಿ ಬರುವ ಯುವತಿ ಸಂಬಂಧಿಕರು ಗಂಡ-ಹೆಂಡತಿ ಇಬ್ಬರನ್ನ ಭೀಕರವಾಗಿ ಕೊಂದುಬಿಡ್ತಾರೆ. ಈ ಸಿನಿಮಾ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಮರ್ಯಾದೆ ಹತ್ಯೆಗಳನ್ನ ನಿಲ್ಲಿಸಬೇಕು ಎನ್ನುವ ಸಂದೇಶ ಸಾರಿತ್ತು. ಆದರೆ ಮದುವೆ ಆಗಿ ಮೂರೇ ದಿನಕ್ಕೆ ಆ ಪ್ರೇಮಿಗಳ ದುರಂತ್ಯ ಕಂಡಿದ್ದು ಘನಘೋರ ಎನ್ನಬಹುದು.

ಈ ಘಟನೆ ನಡೆದಿರುವ ತಮಿಳುನಾಡಿನ ತೂತುಕೂಡಿಯ ಮುರುಗೇಶ್​ ನಗರದಲ್ಲಿ. ಮೂಲತಃ ಕೋವಿಲ್ ಪಟ್ಟಿ ನಿವಾಸಿಯಾಗಿದ್ದ ಮುತ್ತುರಾಜ್ ತನ್ನ ಮಗ ಮಾರಿಸೆಲ್ವಂ ಮತ್ತು ಹೆಂಡತಿ ಜೊತೆ ಮುರುಗೇಶ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಾರಿಸೆಲ್ವಂ ಕಂಪನಿಯೊಂದರಲ್ಲಿ ಕೆಲಸಕ್ಕೆ ಹೋದ್ರೆ, ಅವರ ತಂದೆ-ತಾಯಿ ಕೂಲಿ ಕೆಲಸ ಮಾಡ್ತಿದ್ದರು. ಈ ಕಟುಂಬದ ಆರ್ಥಿಕ ಸ್ಥಿತಿಗತಿಯೂ ಅಷ್ಟಕಷ್ಟೇ ಎನ್ನಲಾಗಿತ್ತು. ಹೀಗೆ ಕೂಲಿ ಕೆಲಸ ಮಾಡ್ತಿದ್ದ ಮಾರಿಸೆಲ್ವಂಗೆ, ಹಾಲು ವ್ಯಾಪಾರ ಹಾಗೂ ಫೈನ್ಸಾನ್ಸ್​ ಮಾಡ್ತಿದ್ದ ಮುತ್ತುರಾಮಲಿಂಗಂ ಎನ್ನುವರ ಮಗಳು ಕಾರ್ತಿಕಾ ಜೊತೆ ಪ್ರೀತಿ ಶುರುವಾಗಿತ್ತು. ಒಂದೇ ಜಾತಿ, ಸಮುದಾಯ ಆಗಿದ್ದರೂ ಆರ್ಥಿಕವಾಗಿ ಎರಡೂ ಕುಟುಂಬಕ್ಕೂ ಅಜಗಜಾಂತರ ವ್ಯತ್ಯಾಸವಿದ್ದ ಕಾರಣ ಮಕ್ಕಳ ಪ್ರೀತಿ ವಿಷಯ ತಿಳಿದು ಕಾರ್ತಿಕಾ ಕುಟುಂಬದವ್ರು ತೀವ್ರವಾಗಿ ಖಂಡಿಸಿದ್ದರು. ಈ ವಿಷಯ ಗೊತ್ತಾಗಿ ಮಾರಿಸೆಲ್ವಂ ಮನೆ ಬಳಿ ಬಂದು ಕಾರ್ತಿಕಾ ಕುಟುಂಬದವರು ಗಲಾಟೆ ಮಾಡಿ ಎಚ್ಚರಿಕೆನೂ ಕೊಟ್ಟಿದ್ದರು. ಈ ಗಲಾಟೆ ಆದ ಕೆಲವೇ ದಿನಕ್ಕೆ ಮಾರಿಸೆಲ್ವಂ ಮತ್ತು ಕಾರ್ತಿಕಾ ಮನೆ ಬಿಟ್ಟು ಓಡಿ ಹೋಗಿ ಕೋವಿಲ್ ​ಪಟ್ಟಿಯ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಆಮೇಲೆ ರಕ್ಷಣೆ ಕೋರಿ ಅಲ್ಲೇ ಪೊಲೀಸ್ ಸ್ಟೇಷನ್​ನಲ್ಲಿ ಮನವಿ ಕೊಟ್ಟಿದ್ದರು.

ಅಕ್ಟೋಬರ್ 31ಕ್ಕೆ ಮದುವೆ ಆಗಿ ಒಂದು ದಿನ ಅಲ್ಲೇ ಸಂಬಂಧಿಕರ ಮನೆಯಲ್ಲಿ ಕಳೆದ ಜೋಡಿ ನವೆಂಬರ್ 2ಕ್ಕೆ ಮುರುಗೇಶ್​ ನಗರದಲ್ಲಿರುವ ಮಾರಿಸೆಲ್ವಂ ನಿವಾಸಕ್ಕೆ ವಾಪಸ್ ಅಗ್ತಾರೆ. ಅವತ್ತು ಮಾರಿಸೆಲ್ವಂ ಅಪ್ಪ-ಅಮ್ಮ ಕೆಲಸಕ್ಕೆ ಹೋಗಿದ್ರು. ಮಾರಿಸೆಲ್ವಂ ಮತ್ತು ಕಾರ್ತಿಕಾ ಮನೆ ಕೀ ತೆಗೆದು ಮನೆ ಪ್ರವೇಶಿಸಿದ್ದರು. ಆದರೆ ಸಂಜೆ 6 ಗಂಟೆಗೆ ಮೂರು ಬೈಕಿನಲ್ಲಿ ಬಂದ ಅಪರಿಚಿತರು ಮಾರಿಸೆಲ್ವಂ ಮನೆಯೊಳಗೆ ನುಗ್ಗಿ ಮಾರಕಸ್ತ್ರಗಳಿಂದ ದಾಳಿ ನಡೆಸಿ ನವಜೋಡಿಯನ್ನ ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದಾರೆ. ಸಂಜೆ ಕತ್ತಲು ಕವಿದಿತ್ತು. ಅಕ್ಕಪಕ್ಕ ಮನೆಗಳಲ್ಲೂ ಯಾರೂ ಇರಲಿಲ್ಲ. ಅಲ್ಲೊಬ್ಬ ವೃದ್ಧೆ ಇದ್ದರೂ ಬೈಕಿನಲ್ಲಿ ಬಂದೋರು ಒಳಗೋಗಿದನ್ನು ಮಾತ್ರ ನೋಡಿದ್ದಾರೆ. ಬಲವಂತವಾಗಿ ಮನೆ ಬಾಗಿಲು ಹೊಡೆದಿರುವುದನ್ನ ಗಮನಿಸಿದ್ದಾರೆ. ಒಳಗೋದ ಮೇಲೆ ಗಲಾಟೆಯ ಶಬ್ದವೂ ಕೇಳಿಸಿದೆ. ಆಮೇಲೆ ಕೆಲವೇ ನಿಮಿಷಗಳಲ್ಲಿ ಆ ಹಂತಕರು ಮನೆಯಿಂದ ಎಸ್ಕೇಪ್ ಆಗಿದ್ದಾರೆ. ಆದ್ರೆ, ಆ ಬೈಕಿನಲ್ಲಿ ಬಂದೋರು ಯಾರು? ಯಾತಕ್ಕಾಗಿ ಕೊಲೆ ಮಾಡಿದ್ರು ಅನ್ನೋದ ಆ ಕ್ಷಣಕ್ಕೆ ಗೊತ್ತಾಗಿಲ್ಲ. ಆಮೇಲೆ ವಿಷಯ ತಿಳಿದ ಕೂಡಲೇ ಕೆಲಸಕ್ಕೆ ಹೋಗಿದ್ದ ಅಪ್ಪ-ಅಮ್ಮ ಓಡೋಡಿ ಬಂದಿದ್ದಾರೆ.

ಅಷ್ಟೋತ್ತಿಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಸಿಕ್ಕಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸದ್ಯಕ್ಕೆ ಯುವತಿ ಮನೆಯವರು ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮಗಳ ಬಡಕುಟುಂಬದವನ ಜೊತೆ ಪ್ರೀತಿಸಿ, ಓಡಿ ಹೋಗಿ ಮದುವೆ ಆಗಿರುವುದನ್ನ ಸಹಿಸದ ಕುಟುಂಬಸ್ಥರು ಈ ರೀತಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕಾರ್ತಿಕಾ ಅವರ ತಂದೆ ಮುತ್ತುರಾಮಲಿಂಗಂ ಸೇರಿ ಮೂವರನ್ನ ಪೊಲೀಸರು ಬಂಧಿಸಿದ್ದಾರಂತೆ. ಇನ್ನು, ಕೊಲೆ ಮಾಡಿ ಎಸ್ಕೇಪ್ ಆಗಿರುವವರಾಗಿ ಶೋಧ ಮುಂದುವರಿಸಿದ್ದು, ಹಂತಕರಿಗೆ ಬಲೆ ಬೀಸಿದ್ದಾರೆ. ಪ್ರೀತಿಸಿ ಮದುವೆಯಾಗಿ ಒಟ್ಟಿಗೆ ಜೀವನ ಮಾಡಬೇಕು ಅಂದ್ಕೊಂಡೋರು ಪೋಷಕರ ಮರ್ಯಾದೆಗೆ ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ಕಡೆ ಮಗನೇ ಆಧಾರ ಅಂದ್ಕೊಂಡಿದ್ದ ಮಾರಿಸೆಲ್ವಂ ಪೋಷಕರು ಮಗ-ಸೊಸೆಯನ್ನ ಕಳೆದುಕೊಂಡು ನೋವಿನ ಮನೆ ಸೇರಿದ್ದು ನಿಜಕ್ಕೂ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರ ಧಿಕ್ಕರಿಸಿ ಮದುವೆ; ಮೂರೇ ದಿನಕ್ಕೆ ಬಿತ್ತು ಹೆಣ; ಮರ್ಯಾದೆಗಾಗಿ ಪ್ರೇಮಿಗಳ ಕೊಲೆ

https://newsfirstlive.com/wp-content/uploads/2023/11/death-2023-11-03T212930.076.jpg

Load More