ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಸಚಿವ ಸೆಂಥಿಲ್ ಅರೆಸ್ಟ್
ಕಾರಿನೊಳಗೆ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋ ವೈರಲ್
‘CABG ಬೈಪಾಸ್ ಸರ್ಜರಿ’ಗೆ ಮುಂದಾದ ವೈದ್ಯರು
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಸರ್ಕಾರದಲ್ಲಿ ಇಂಧನ ಸಚಿವರಾಗಿರುವ ವಿ.ಸೆಂಥಿಲ್ ಬಾಲಾಜಿ ಅರೆಸ್ಟ್ ಆಗುತ್ತಿದ್ದಂತೆ ಎದೆ ನೋವು ಅಂತಾ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಕಾರಿನಲ್ಲಿ ಬಿದ್ದು ಅಳುತ್ತಿದ್ದ ಸಚಿವರನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಎಂ.ಕೆ ಸ್ಟಾಲಿನ್ ಆಸ್ಪತ್ರೆಗೆ ಭೇಟಿ ನೀಡಿ ಸೆಂತಿಲ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇ.ಡಿ. ಅಧಿಕಾರಿಗಳು ನಿನ್ನೆ ಇಂಧನ ಸಚಿವ ಸೆಂಥಿಲ್ ಬಾಲಜಿ ಮನೆ ಹಾಗೂ ಕಚೇರಿ ಮೇಲೆ ರೇಡ್ ಮಾಡಿದ್ದರು. ಈ ವೇಳೆ ಹಲವು ಮಹತ್ವದ ದಾಲೆಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಸೆಂಥಿಲ್ ಬಾಲಜಿಯವರನ್ನು ಬಂಧಿಸಿದ್ದರು. ಕಾರಿನಲ್ಲಿ ಕುಳಿತ್ತಿದ್ದ ಸಚಿವರು ಎದೆ ನೋವು ಎಂದು ಅಳಲು ಪ್ರಾರಂಭಿಸಿದ್ದರು. ಹೀಗಾಗಿ ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಕರೋನರಿ ಆಂಜಿಯೋಗ್ರಾಂ (Coronary Angiogram) ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಹೃದಯದಲ್ಲಿ ಪ್ರಮುಖ ತೊಂದರೆಗಳು ಕಂಡುಬಂದಿವೆ. ಹೀಗಾಗಿ CABG ಬೈಪಾಸ್ ಸರ್ಜರಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ ಅಂತಾ ವರದಿಯಾಗಿದೆ.
ವಿ.ಸೆಂತಿಲ್ ಬಾಲಾಜಿ ಆಸ್ಪತ್ರೆಗೆ ದಾಖಲು ಆಗುತ್ತಿದ್ದಂತೆ ಆಸ್ಪತ್ರೆ ಮುಂದೆ ದೊಡ್ಡ ಹೈಡ್ರಾಮವೇ ನಡೆದಿದೆ. ಅಧಿಕಾರಿಗಳು ಮತ್ತು ಸಚಿವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಸೆಂಥಿಲ್ ಅರೆಸ್ಟ್ ಬಗ್ಗೆ ಮಾತನಾಡಿದ DMK ಸಚಿವ ಉದಯನಿಧಿ ಸ್ಟಾಲಿನ್, ವಿ.ಸೆಂತಿಲ್ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬರಲಿದ್ದಾರೆ. ಇಡಿ ದಾಳಿಯನ್ನು ಕಾನೂನು ಪ್ರಕಾರ ಎದುರಿಸುತ್ತೇವೆ. ಕೇಂದ್ರದ ಕುತಂತ್ರ ರಾಜಕಾರಣಕ್ಕೆ ನಾವು ಹೆದರುವುದಿಲ್ಲ. ನಾವು ಆಂತರಿಕ ಭದ್ರತಾ (MISA) ಕಾಯಿದೆ ನಿರ್ವಹಣೆಯನ್ನು ಎದುರಿಸಲಿದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ