newsfirstkannada.com

VIDEO: ಅಯ್ಯೋ ಅಮ್ಮ.. ಚಲಿಸುತ್ತಿದ್ದ ಬಸ್​ಗೆ ಅಡ್ಡ ಹೋಗಿ ಪ್ರಾಣ ಬಿಟ್ಟ ಮಹಾತಾಯಿ; ಕಾರಣ ಗೊತ್ತಾದ್ರೆ ಕಣ್ಣೀರು ಬರುತ್ತೆ

Share :

18-07-2023

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತ್ಯಾಗಮಯಿ ತಾಯಿ

    ಪಾಪ.. ಮಗನ ಕಾಲೇಜು ಫೀಸ್​ಗೆ 45 ಸಾವಿರ ರೂಪಾಯಿ ಬೇಕಿತ್ತು

    ಯಾರೋ ಹೇಳಿದ ಮಾತಿನಂತೆ ಬಸ್‌ಗೆ ಸಿಲುಕಿ ಪ್ರಾಣ ಬಿಟ್ಟ ಅಮ್ಮ!

ಚೆನ್ನೈ: ಮಗನ ಕಾಲೇಜು ಫೀಸ್​ ಕಟ್ಟಲು ಹಣವಿಲ್ಲದೇ ತಾಯಿಯೊಬ್ಬರು ವೇಗವಾಗಿ ಬರುತ್ತಿದ್ದ ಖಾಸಗಿ ಬಸ್​ಗೆ ಸಡನ್​ ಆಗಿ ಅಡ್ಡ ಹೋಗಿ ಸಾವನ್ನಪ್ಪಿರುವ ಭೀಕರ ಘಟನೆ ತಮಿಳುನಾಡಿನ ಸೇಲಂ ನಗರದಲ್ಲಿ ನಡೆದಿದೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಈ ಹೃದಯ ವಿದ್ರಾವಕ ದೃಶ್ಯವು ನೋಡಿದವರ ಎದೆ ಝಲ್ಲೆನ್ನಿಸುವಂತೆ ಮಾಡಿದೆ.

ಈ ಮಹಿಳೆಯ ಹೆಸರು ಏನೆಂದು ತಿಳಿದು ಬಂದಿಲ್ಲವಾದರೂ ಇವರು ಸೇಲಂನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಮಗ ಕಾಲೇಜಿಗೆ ಹೋಗುತ್ತಿದ್ದು 45,000 ರೂಪಾಯಿ ಕಾಲೇಜು ಫೀಸ್​ ಕಟ್ಟಬೇಕೆಂದು ತಾಯಿ ಬಳಿ ಕೇಳಿದ್ದಾನೆ. ಹೀಗಾಗಿ ತಾಯಿ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಅವರಿವರ ಬಳಿ ಸಾಲ ಕೇಳಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ODI World Cup 2023: ಶ್ರೇಯಸ್​ ಡೌಟ್​​, ರಿಷಭ್​ ಔಟ್​.. ಗಾಯಗೊಂಡ ಸ್ಟಾರ್​ಗಳ ಕಮ್​ಬ್ಯಾಕ್​ ಯಾವಾಗ?

ಈ ವೇಳೆ ನೀನು ಅಪಘಾತದಲ್ಲಿ ಮೃತಪಟ್ಟರೇ 45,000 ರೂಪಾಯಿ ಕೊಡುತ್ತಾರೆ ಎಂದು ಯಾರೋ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾರೆ. ಇದನ್ನೇ ಬಲವಾಗಿ ನಂಬಿದ ಆ ಮಹಿಳೆ ವೇಗವಾಗಿ ಬರುತ್ತಿದ್ದ ತಮಿಳು ನಾಡು ಸಾರಿಗೆ ಬಸ್​ ಮುಂದೆ ಸಡನ್​ ಆಗಿ ಅಡ್ಡ ಬಂದಿದ್ದಾರೆ. ಇದರಿಂದ ಬಸ್​ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಲ್ಲದೇ ಈ ಮಹಿಳೆಯು ಗಂಡನಿಂದ ಬೇರೆಯಾಗಿ ಸುಮಾರು 18 ವರ್ಷಗಳು ಆಗಿದ್ದವು ಎನ್ನಲಾಗಿದೆ. ನಂತರದ ವರ್ಷಗಳಲ್ಲಿ ತನ್ನ ಮಗ ಮತ್ತು ಮಗಳು ಜೊತೆ ಜೀವನ ಸಾಗಿಸುತ್ತಿದ್ದಳು. ಆದರೆ ಕಾಲೇಜು ಫೀಸ್​ ಕಟ್ಟುವ ವಿಷಯದಲ್ಲಿ ಯಾರೋದು ದಾರಿ ತಪ್ಪಿಸುವಂತ ಮಾತುಗಳನ್ನು ಕೇಳಿ ಮಹಿಳೆಯು ತನ್ನ ಜೀವವನನ್ನೆ ಕಳೆದುಕೊಂಡಿದ್ದಾರೆ. ಸದ್ಯ ಮಹಿಳೆ ಬಸ್​ಗೆ ಅಡ್ಡ ಹೋಗಿ ಸಾವನ್ನಪ್ಪುವ ಸಿಸಿಟಿವಿ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಯ್ಯೋ ಅಮ್ಮ.. ಚಲಿಸುತ್ತಿದ್ದ ಬಸ್​ಗೆ ಅಡ್ಡ ಹೋಗಿ ಪ್ರಾಣ ಬಿಟ್ಟ ಮಹಾತಾಯಿ; ಕಾರಣ ಗೊತ್ತಾದ್ರೆ ಕಣ್ಣೀರು ಬರುತ್ತೆ

https://newsfirstlive.com/wp-content/uploads/2023/07/TN_WOMAN_DIE.jpg

Load More