newsfirstkannada.com

ಮಾಲೀಕನಿಂದ ದೀಪಾವಳಿಗೆ ಅಚ್ಚರಿಯ ಗಿಫ್ಟ್; ಉದ್ಯೋಗಿಗಳಿಗೆ ರಾಯಲ್ ಎನ್​ಫಿಲ್ಡ್ ಬೈಕ್..!

Share :

05-11-2023

    ನವೆಂಬರ್ 12 ರಿಂದ ದೀಪಾವಳಿ ಹಬ್ಬ ಶುರು

    ಟೀ ಎಸ್ಟೇಟ್ ಮಾಲೀಕನಿಂದ ಬೈಕ್ ಉಡುಗೊರೆ

    ಪ್ರತಿವರ್ಷ ದೀಪಾವಳಿಗೆ ಬೋನಸ್ ನೀಡ್ತಿರುವ ಮಾಲೀಕ

ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಸಣ್ಣ-ಪುಟ್ಟ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ಸೇರಿದಂತೆ ಎಲ್ಲರೂ ಹಬ್ಬದ ಮೂಡ್​​ಗೆ ನಿಧಾನವಾಗಿ ಜಾರುತ್ತಿದ್ದಾರೆ. ತಾವು ಕೆಲಸ ಮಾಡುವ ಸಂಸ್ಥೆಗಳು ತಮಗೆ ನೀಡುತ್ತಿರುವ ಬೋನಸ್​ ಜೊತೆ ಹಬ್ಬ ಮಾಡುವ ಸಿದ್ಧತೆಯಲ್ಲಿದ್ದಾರೆ. ಇನ್ನು ದೀಪಾವಳಿ ಗಿಫ್ಟ್ ವಿಚಾರದಲ್ಲಿ ಕೆಲವೊಂದು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ತಮ್ಮದೇ ರೀತಿಯಲ್ಲಿ ಖುಷಿ ಪಡಿಸುತ್ತವೆ.

ಕೆಲವು ಸಂಸ್ಥೆಗಳು ಗಿಫ್ಟ್ ವೊಚರ್, ಇನ್ಸೆಂಟಿವ್ಸ್, ಸ್ವೀಟ್ಸ್​, ಬೋನಸ್​​ಗಳನ್ನು ನೀಡಿದ್ರೆ, ತಮಿಳುನಾಡಿನ ಕೊಟಗಿರಿ ಟೀ ಎಸ್ಟೇಟ್​ನ ಮಾಲೀಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ದೀಪಾವಳಿ ಉಡುಗೊರೆಯಾಗಿ ತಮ್ಮ ನೌಕರರಿಗೆ ರಾಯಲ್​ ಎನ್​ಫಿಲ್ಡ್​ ಬೈಕ್​​ಗಳನ್ನು ನೀಡಿದ್ದಾರೆ.

190 ಎಕರೆ ಟೀ ಎಸ್ಟೇಟ್ ಹೊಂದಿರುವ ಪಿ.ಶಿವಕುಮಾರ್, ಉದ್ಯೋಗಿಗಳ ಪಾಲಿಗೆ ಹೃದಯವಂತ. ಉದ್ಯೋಗಿಗಳನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ತಿರುವ ಶಿವಕುಮಾರ್, ಪ್ರತಿವರ್ಷ ದೀಪಾವಳಿಗೆ ಬೋನಸ್ ನೀಡುತ್ತಾರೆ. ಆದರೆ ಈ ಬಾರಿ ತಮ್ಮ ಉದ್ಯೋಗಿಗಳಿಗೆ ಎರಡು ಲಕ್ಷ ಬೆಲೆ ಬಾಳುವ ಬೈಕ್​ಗಳನ್ನು ನೀಡಿದ್ದಾರೆ.

ಇವರು ಜೊತೆ ಒಟ್ಟು 627 ಉದ್ಯೋಗಿಗಳು ಇದ್ದಾರೆ. ಅವರೆಲ್ಲರಿಗೂ ಕಳೆದ ಎರಡು ದಶಕಗಳಿಂದ ದೀಪಾವಳಿ ಬೋನಸ್ ನೀಡುತ್ತ ಬಂದಿದ್ದಾರೆ. ಈ ಬಾರಿಯ ದೀಪಾವಳಿಗೆ ತಮ್ಮ 15 ಉದ್ಯೋಗಿಗಳಿಗೆ ಬೈಕ್ ಗಿಫ್ಟ್ ಕೊಟ್ಟಿದ್ದಾರೆ. ಮ್ಯಾನೇಜರ್, ಸುಪರ್​ವೈಸರ್, ಸ್ಟೋರ್​ ಕೀಪರ್, ಕ್ಯಾಶಿಯರ್, ಫೀಲ್ಡ್​​ಸ್ಟಾಫ್ ಮತ್ತು ಡ್ರೈವರ್​​ಗಳಿಗೆ ಬೈಕ್ ಗಿಫ್ಟ್ ನೀಡಿದ್ದಾರೆ. ನವೆಂಬರ್ 12 ರಂದು ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಲೀಕನಿಂದ ದೀಪಾವಳಿಗೆ ಅಚ್ಚರಿಯ ಗಿಫ್ಟ್; ಉದ್ಯೋಗಿಗಳಿಗೆ ರಾಯಲ್ ಎನ್​ಫಿಲ್ಡ್ ಬೈಕ್..!

https://newsfirstlive.com/wp-content/uploads/2023/11/Royal-Enfield.jpg

Load More