ಹಿಡಿಯಲು ಹೋದರೆ ಬುಸ್ ಎಂದು ಎಡೆಯೆತ್ತಿ ಬರುತ್ತಿದ್ದ ಕಾಳಿಂಗ ಸರ್ಪ
ಭಯ ಪಡುತ್ತಾ ಚೀಲದೊಳಗೆ ಕಾಳಿಂಗ ಸರ್ಪವನ್ನು ಹಾಕಿದ ಸಿಬ್ಬಂದಿ
ಬೃಹದಾಕಾರದ ಕಾಳಿಂಗ ಸರ್ಪವನ್ನ ಕಂಡು ಭಯ ಬಿದ್ದಿದ್ದ ಸ್ಥಳೀಯರು
ಚೆನ್ನೈ: 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟು ಹಿಡಿದಿರುವ ಘಟನೆ ತಮಿಳುನಾಡಿನ ತೆಂಕಸಿ ಜಿಲ್ಲೆಯ ಗೋವಿಂದಪರಿ ಪ್ರದೇಶದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಕಡಯಂ ಪುರಸಭೆ ವ್ಯಾಪ್ತಿಯ ಗೋವಿಂದಪೇರಿ ಬಳಿಯ ಖಾಸಗಿ ಕಾರ್ಖಾನೆಯ ಬಳಿ ಕಿಂಗ್ ಕೋಬ್ರಾ ಕಾಣಿಸಿಕೊಂಡಿದೆ. ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಅದನ್ನು ಹಿಡಿಯಲು ನಮಗೆ ಆಗದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿ ಹಿಡಿಯಲು ಹೋದರೇ ಬುಸ್ ಎಂದು ಎಡೆಯೆತ್ತಿ ಎದುರಿಗೆ ಬರುತ್ತಿತ್ತು. ಕೊನೆಗೆ ಅಧಿಕಾರಿಗಳು ಕಾಳಿಂಗ ಸರ್ಪವನ್ನು ಹರಸಾಹಸ ಪಟ್ಟು ಹಿಡಿದಿದ್ದಾರೆ. ಬಳಿಕ ಅದನ್ನು ಚೀಲವೊಂದರಲ್ಲಿ ತುಂಬಬೇಕಾದರೂ ಸಖತ್ ಆಟ ಆಡಿಸಿದೆ. ಆದರೂ ಅಧಿಕಾರಿಗಳು ಭಯ ಪಡುತ್ತಲೇ ಚೀಲದೊಳಗೆ ಹಾಕಿದ್ದಾರೆ ಎನ್ನಲಾಗಿದೆ.
ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಮರಳಿ ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಕಿಂಗ್ ಕೋಬ್ರಾ ಹಿಡಿಯುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, 15 ಅಡಿ ಉದ್ದದ ಬೃಹದಾಕಾರದ ಹಾವನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ