newsfirstkannada.com

‘ನಟನಾ ಬದುಕಿಗೆ ಬ್ರೇಕ್’ ಎಂದ ದಳಪತಿ ವಿಜಯ್; ತಮಿಳುನಾಡು ರಾಜಕಾರಣದಲ್ಲಿ ಮತ್ತೊಬ್ಬ ರೀಲ್ to ‘ರಿಯಲ್’ ಹೀರೋನ ಉದಯ..!?

Share :

13-07-2023

    ರಾಜಕೀಯದಲ್ಲಿ ವಿಜಯ್ ನಿಗೂಢ ನಡೆ, ತನ್ನ ಪಕ್ಷದ ಸದಸ್ಯರ ಭೇಟಿ

    ತೆರೆಮರೆಯಲ್ಲಿ ಹಲವು ದಿನಗಳಿಂದ ಪಕ್ಷದ ಚಟುವಟಿಕೆಗಳಲ್ಲಿ ವಿಜಯ್​

    CM ಸ್ಟಾಲಿನ್​ ಸರ್ಕಾರದ ವಿರುದ್ಧ ತೊಡೆ ತಟ್ಟುವವರೇ ಲಿಯೋ ಹೀರೋ?

ತಮಿಳುನಾಡು ರಾಜಕಾರಣಕ್ಕೂ, ಸಿನಿಮಾ ರಂಗಕ್ಕೂ ವಿಶೇಷ ನಂಟು. ಇವೆರಡು ಒಂದನ್ನೊಂದು ಬಿಟ್ಟು ಇರಲಾರದಷ್ಟು ಬೆಸೆದುಕೊಂಡಿದೆ ಅಲ್ಲಿ. ಅಂತೆಯೇ ತಮಿಳುನಾಡಿನ ರಾಜಕಾರಣದ ಪಡಸಾಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳ ಗುಸುಗುಸು ಕಳೆದ ಹದಿನೈದು ದಿನಗಳಿಂದ ಜೋರಾಗಿ ಕೇಳಿಬರ್ತಿದೆ. ಅದಕ್ಕೆಲ್ಲ ಕಾರಣ.. ‘ಪ್ರಿಯ ವಿದ್ಯಾರ್ಥಿಗಳೇ, ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಸೇರಿದಂತೆ ಹಲವು ಮಹಾನಿಯರ ವಿಷಯ ತಿಳಿದುಕೊಳ್ಳಿ..’ ಎಂದು ಆಗಾಗ ಸಂದೇಶ ಸಾರುತ್ತಿದ್ದ ದಳಪತಿ ವಿಜಯ್!

ಹೌದು ದಳಪತಿ ವಿಜಯ್ ತಮಿಳುನಾಡು ರಾಜಕಾರಣಕ್ಕೆ ಎಂಟ್ರಿ ಆಗ್ತಾರೆ ಅನ್ನೋ ಸುದ್ದಿ ಇದೀಗ ತಮಿಳುನಾಡು ರಾಜಕಾರಣವನ್ನು ಆವರಿಸಿಕೊಂಡಿದೆ.

ಯಾರು ವಿಜಯ್..? 

ದಳಪತಿ ವಿಜಯ್​ ತಮಿಳು ಸಿನಿಮಾ ರಂಗದ ಸೂಪರ್ ಹೀರೋ. ದಕ್ಷಿಣ ಭಾರತದ ಪ್ರಮುಖ ನಟರಲ್ಲಿ ವಿಜಯ್ ಕೂಡ ಒಬ್ಬರು. ಬಾಲಕನಾಗಿದ್ದಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 5 ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಬಳಿಕ ತಮ್ಮ 18ನೇ ವಯಸ್ಸಿನಲ್ಲಿ ನಾಲೈ ತೀರ್ಪು ಎನ್ನುವ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿದರು. ಮುಂದಿನ ದಿನಗಳಲ್ಲಿ ನಟ ವಿಕ್ರಮನ್ ಜೊತೆ ವಿಜಯ್​ ಪೂವೆ ಉನಕ್ಕಾಗ ಮೂವಿಯಲ್ಲಿ ಆ್ಯಕ್ಟ್​ ಮಾಡಿದ್ರು. ಇದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿ ಗೆಲುವು ತಂದುಕೊಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೆ ರೇಸ್​ ಹಾರ್ಸ್​ನಂತೆ ವಿಜಯ್​ಗೆ ಸಿನಿಮಾ ರಂಗದಲ್ಲಿ ಸಖತ್ ಡಿಮ್ಯಾಂಡ್ ಇದೆ. ಸದ್ಯ ದಳಪತಿ ಸಿನಿಮಾ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿದ್ದು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಅಲ್ಲದೇ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿಗಳ 100 ಪಟ್ಟಿಯಲ್ಲಿ 7 ಬಾರಿ ಇವರ ಬಗ್ಗೆ ಪ್ರಸ್ತಾಪ ಆಗಿದೆ.

ಪಕ್ಷದ ಸದಸ್ಯರನ್ನು ಭೇಟಿ ಮಾಡಿರೋದು ಏಕೆ?

ಇವರು ಸಿನಿಮಾ ಕ್ಷೇತ್ರದಿಂದ ರಾಜಕೀಯ ಬರುತ್ತಾರಂತೆ. ಜುಲೈ 11 ರಂದು ಚೆನ್ನೈನ ಪನೈಯೂರ್ ಹೌಸ್​ನಲ್ಲಿರುವ ತಮ್ಮದೇ ಪಕ್ಷವಾದ ವಿಜಯ್​ ಮಕ್ಕಳ್​ ಇಯಕ್ಕಂ ಪಾರ್ಟಿ ಆಫೀಸ್​ಗೆ ಭೇಟಿ ನೀಡಿದ್ದರು. ಈ ವೇಳೆ ಪಕ್ಷದ ಸದಸ್ಯರ ಜೊತೆ ಸಭೆ ನಡೆಸಿದ್ದಾರೆಂದು ಹೇಳಲಾಗಿದೆ. ಅಲ್ಲದೇ ಸದ್ಯ ರಿಲೀಸ್​ಗೆ ರೆಡಿಯಾಗಿರುವ ಲಿಯೋ ಸಿನಿಮಾದ ಮೊದಲೇ ವಿಜಯ್​ ತಮಿಳು ನಾಡಿನಾದ್ಯಂತ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಅವರು ರಾಜಕಾರಣಕ್ಕೆ ಬರುವುದಕ್ಕೆ ಮಾಡುತ್ತಿರುವ ಮೊಟ್ಟ ಮೊದಲು ಪಾದಯಾತ್ರೆ. ಈ ಬಗ್ಗೆ ನಟ ವಿಜಯ್​ ಅಧಿಕೃತ ಘೋಷಣೆ ಮಾಡಬೇಕಾಗಿರುವುದು ಬಾಕಿ ಇದೆ ಅಷ್ಟೇ.

ರಾಜಕಾರಣಕ್ಕೆ ಬರುವ ಬಗ್ಗೆ ದಳಪತಿ ವಿಜಯ್​ ಅವರು ಇತ್ತೀಚೆಗೆ ವಿದ್ಯಾರ್ಥಿಗಳ ಮುಂದೆ ರಾಜಕೀಯ ಪಾಠ ಮಾಡಿರುವುದು ಇನ್ನಷ್ಟು ಹಿಂಟ್​ ಕೊಟ್ಟಂತೆ ಇತ್ತು. ಸದ್ಯ ಶೂಟಿಂಗ್ ಮಾಡುತ್ತಿರುವ ಲಿಯೋ ಸಿನಿಮಾ ಹಾಗೂ ವೆಂಕಟ್ ಪ್ರಭು ಜೊತೆ ತಮ್ಮ ವೃತ್ತಿ ಜೀವನದ 68ನೇ ಸಿನಿಮಾವನ್ನು ಮಾಡುವುದೇ ಕೊನೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ 2 ಸಿನಿಮಾಗಳ ಬಳಿಕವೇ ವಿಜಯ್​ ಪೂರ್ಣ ಪ್ರಮಾಣದಲ್ಲಿ ರಾಜಕೀಯ ರಂಗ ಪ್ರವೇಶ ಮಾಡುವರೇ, ಇಲ್ಲ ಸಿನಿಮಾ ಕ್ಷೇತ್ರದಲ್ಲಿ ಮುಂದುವರೆಯುವರೇ ಎಂದು ಫೈನಲ್​ ಆಗಿ ಗೊತ್ತಾಗಲಿದೆ.

ಲಿಯೋ ಸಿನಿಮಾದ ಬಳಿಕ ವಿಜಯ್ ಏನ್ ಮಾಡುವವರು?

ಈ ಸಿನಿಮಾಗಳ ಶೂಟಿಂಗ್ ಮುಗಿದ ತಕ್ಷಣ ಮುಂದಿನ ವರ್ಷ ಅಂದರೆ 2024ರಲ್ಲಿ ಲೋಕಸಭಾ ಮಹಾಚುನಾವಣೆ ನಡೆಯಲಿದೆ. ಈ ಲೋಕಸಭಾ ಎಲೆಕ್ಷನ್​ಗೆ ವಿಜಯ್​ ರಾಜಕಾರಣಕ್ಕೆ ಬಾರದಿದ್ದರೂ 2026ರಲ್ಲಿ ತಮಿಳುನಾಡಿನ ವಿಧಾನಸಭಾ ಎಲೆಕ್ಷನ್​ಗೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ರಾಜಕೀಯ ಧುಮುಕಲಿದ್ದಾರೆ. ನಟ ವಿಜಯ್ ರಾಷ್ಟ್ರ ರಾಜಕಾರಣಗಿಂತ, ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್​ ಮಕ್ಕಳ್​ ಇಯಕ್ಕಂ ಪಕ್ಷದ ಮೂಲಕ ತಮಿಳು ನಾಡಿನಲ್ಲಿ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಈಗಾಗಲೇ ಮಾಡುತ್ತಿದ್ದಾರೆ. ಇದು ಈಗಲೂ ಮುಂದುವರೆದಿದೆ. ಇದಕ್ಕೆ ಜನರ ಬೆಂಬಲ ಕೂಡ ಚೆನ್ನಾಗಿಯೆ ಇದೆ ಎಂದು ಹೇಳಲಾಗುತ್ತಿದೆ. ​

ಅಲ್ಲದೇ ದಳಪತಿ ವಿಜಯ್​ ಬೆಂಬಲಿಗರು ಕೆಲ ತಾಲೂಕು, ಜಿಲ್ಲಾ ಪಂಚಾಯತಿ ಎಲೆಕ್ಷನ್​ನಲ್ಲಿ ಗೆದ್ದು ಕೆಲಸ ಮಾಡ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆಯೇ ತಮ್ಮ ತಂದೆ ಚಂದ್ರಶೇಖರ್ ವಿಜಯ್ ಹೆಸರಲ್ಲಿ ರಾಜಕೀಯ ಪಕ್ಷವನ್ನು ನೋಂದಣಿ ಮಾಡಿಸಿದ್ದರು. ಆದರೆ ಕೆಲ ದಿನಗಳ ನಂತರ ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಆದರೆ ಈಗ ರಾಜಕಾರಣಕ್ಕೆ ಬರಲು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಮಿಳು ನಾಡಿನ ರಾಜಕೀಯ ಪಡಸಾಲೆಯಲ್ಲಿ ಗುಸು ಗುಸು ಪಿಸು ಮಾತುಗಳು ಕೇಳಿ ಬರುತ್ತಿವೆ.

ವಿದ್ಯಾರ್ಥಿಗಳಿಗೆ ರಾಜಕೀಯ ಭಾಷಣ ಮಾಡಿದ್ದ ವಿಜಯ್

ಮೊನ್ನೆ ಮೊನ್ನೆ ಚೆನ್ನೈನಲ್ಲಿ ನಡೆದ ದಳಪತಿ ವಿಜಯ್ ಎಜುಕೇಶನ್ ಆವರ್ಡ್​​ ಸಮಾರಂಭದಲ್ಲಿ ನಟ ವಿಜಯ್ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ವಿದ್ಯಾರ್ಥಿಗಳಿಗೆ ಬೇಕಾದ ವ್ಯಾಲ್ಯೂಬಲ್​ ಸ್ಪೀಚ್​ ಮಾಡಿದರು. ಶಿಕ್ಷಣದ ಮಹತ್ವ ಹಾಗೂ ಇಂದಿನ ಸೋಷಿಯಲ್​ ಮೀಡಿಯಾ ಹೇಗೆ ಪರಿಣಾಮ ಬೀರುತ್ತದೆ ಎಂಬುವುದನ್ನು ಹೇಳಿದರು. ಎಲ್ಲ ಮಹಾನ್​ ಗಣ್ಯರ ಬಗ್ಗೆ ತಿಳಿದುಕೊಳ್ಳಬೇಕು. ಡಾ.ಬಿ.ಆರ್ ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಸೇರಿದಂತೆ ಸಮಾಜಕ್ಕೆ ಸಂದೇಶ ಕೊಡುವ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಿ ಎಂದಿದ್ದರು.

ಇಂದಿನ ವಿದ್ಯಾರ್ಥಿಗಳೇ ಮುಂದಿನ ವೋಟರ್ಸ್​. ಸದೃಢ ರಾಷ್ಟ್ರ ನಿರ್ಮಾಣ ಯಂಗ್​ ವೋಟರ್ಸ್​ ಕೈನಲ್ಲಿದೆ. ಕಾಸಿಗಾಗಿ ವೋಟ್​ ಹಾಕಬೇಡಿ. ಉದಾಹರಣೆಗೆ ನಿಮಗೆ ಹೇಳ್ತಿದ್ದಿನಿ. ಒಂದು ವೋಟ್​ಗೆ 1000 ರೂ.ಗಳನ್ನು ಕೊಡುತ್ತಾರೆ ಎಂದರೆ 1.5 ಲಕ್ಷ ಜನರಿಗೆ ಒಂದೊಂದು ಸಾವಿರ ಎಂದು ಲೆಕ್ಕ ಹಾಕಿದ್ರೆ ಸುಮಾರು 15 ಕೋಟಿ ರೂ. ಆಗುತ್ತದೆ. ಅಂದರೆ ಇದಕ್ಕೂ ಮೊದಲು ಆ ದುಡ್ಡು ಕೊಡುವ ರಾಜಕಾರಣಿ ಎಷ್ಟು ಭ್ರಷ್ಟಾಚಾರ ಮಾಡಿ ಹಣ ಗಳಿಸಿರುತ್ತಾರೆ ಎಂದು ಯೋಚಿಸಿ.

ದಳಪತಿ ವಿಜಯ್

ಇದಕ್ಕೆ ತಮಿಳುನಾಡಿನ ಪ್ರತಿ ವಿದ್ಯಾರ್ಥಿಯು ನಿಮ್ಮ ಪೋಷಕರಿಗೆ ಹಣ ಪಡೆದು ವೋಟ್​ ಮಾಡಬೇಡಿ ಅಂತಾ ಹೇಳಬೇಕು ಎಂದು ವಿಜಯ್​ ಹೇಳಿದ್ದರು.  ಈ ಎಲ್ಲವನ್ನು ಗಮನಿಸಿದರೆ ತಮಿಳ್​ ಸ್ಟಾರ್​ ವಿಜಯ್​ ರಾಜಕೀಯ ರಂಗ ಪ್ರವೇಶ ಮಾಡೋದು ಬುತೇಕ ಕನ್ಫ್​ರ್ಮ್​ ಎಂದು ಹೇಳಲಾಗುತ್ತಿದೆ.

ರಾಜಕಾರಣದಲ್ಲಿ ಹಲವು ನಟರು.. 

ಈಗಾಗಲೇ ಆಂಧ್ರ ಪ್ರದೇಶದಲ್ಲಿ ಮೆಗಾಸ್ಟಾರ್​ ಚಿರಂಜೀವಿಯವರು ರಾಜಕಾರಣದಲ್ಲಿ ಹಲವು ಫೈಟ್​ ಮಾಡಿ ಸೋತು ಮತ್ತೆ ತಮ್ಮ ಸಿನಿಮಾ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಸದ್ಯ ಇವರ ಸಹೋದರ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಸಕ್ರಿಯ ರಾಜಕೀಯದಲ್ಲಿದ್ದು ಸಿಎಂ ಜಗನ್​ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೇ ಮುಂದಿನ ಎಲೆಕ್ಷನ್​ನಲ್ಲಿ ಪಕ್ಷ ಗೆಲ್ಲಿಸಲು ಹಲವು ರೀತಿಯಲ್ಲಿ ಸಂಘಟನೆ, ಸಭೆ ಸೇರಿದಂತೆ ವರಾಹಿ ಮೂಲಕ ಯಾತ್ರೆ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ನಟ, ರಿಯಲ್ ಸ್ಟಾರ್​ ಉಪೇಂದ್ರ ಅವರು ಪಕ್ಷ ಸ್ಥಾಪನೆ ಮಾಡಿದರೂ 2023 ಮೇನಲ್ಲಿ ನಡೆದ ಎಲೆಕ್ಷನ್​ಗೆ ಅಭ್ಯರ್ಥಿಗಳನ್ನು ನೇಮಿಸಿರಲಿಲ್ಲ. ಇನ್ನು ತಮಿಳುನಾಡಿನಲ್ಲಿ ಕಮಲ್ ಹಾಸನ್​ ಕೂಡ ಪಕ್ಷ ಸ್ಥಾಪನೆ ಮಾಡಿ ಹಲವು ಸರ್ಕಸ್​ ಮಾಡಿದ್ರು. ಆದರೆ ಬಹಿರಂಗವಾಗಿ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸೌತ್​ ಇಂಡಿಯಾನ್​ ಸೂಪರ್​ ಸ್ಟಾರ್​ ರಜನಿಕಾಂತ್​ ರಾಜಕಾರಣಕ್ಕೆ ಬರುತ್ತಾರೆಂದು ಎಲ್ಲೆಡೆ ಸುದ್ದಿ ಬಿರುಗಾಳಿಯಂತೆ ಹಬ್ಬಿತ್ತು. ಆದರೆ ಇದು ಇನ್ನು ಎಲ್ಲಿಯೂ ಅಧಿಕೃತವಾಗಿ ಹೊರ ಬಿದ್ದಿಲ್ಲ. ಸದ್ಯ ದಳಪತಿ ವಿಜಯ್​ ಅವ್ರು ಮುಂದಿನ ದಿನಗಳಲ್ಲಿ ಏನು ಹೇಳುವವರು ಎಂದು ಅಭಿಮಾನಿಗಳು, ಜನರು ಕಾಯುತ್ತಿದ್ದಾರೆ.

ವಿಶೇಷ ವರದಿ: ಭೀಮಪ್ಪ, ಡಿಜಿಟಲ್​ ಡೆಸ್ಕ್​​

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ನಟನಾ ಬದುಕಿಗೆ ಬ್ರೇಕ್’ ಎಂದ ದಳಪತಿ ವಿಜಯ್; ತಮಿಳುನಾಡು ರಾಜಕಾರಣದಲ್ಲಿ ಮತ್ತೊಬ್ಬ ರೀಲ್ to ‘ರಿಯಲ್’ ಹೀರೋನ ಉದಯ..!?

https://newsfirstlive.com/wp-content/uploads/2023/07/VIJAY-1.jpg

Load More