newsfirstkannada.com

ಮಹಿಳಾ IPS ಅಧಿಕಾರಿ ಮೇಲೆ ಅತ್ಯಾಚಾರ; ತಮಿಳುನಾಡು ಮಾಜಿ ಡಿಜಿಪಿಗೆ 3 ವರ್ಷ ಜೈಲು!

Share :

16-06-2023

    ಮಹಿಳಾ ಐಪಿಎಸ್​ ಅಧಿಕಾರಿ ಮೇಲೆ ಅತ್ಯಾಚಾರ ಎಸಗಿದ ಆರೋಪ

    ಅತ್ಯಾಚಾರ್​​ ಕೇಸ್​ನಲ್ಲಿ ತಮಿಳುನಾಡು ಮಾಜಿ ಡಿಜಿಪಿಗೆ 3 ವರ್ಷ ಜೈಲು

    3 ವರ್ಷ ಜೈಲು ಜತೆಗೆ 10 ಸಾವಿರ ದಂಡ ವಿಧಿಸಿದ ವಿಲ್ಲುಪುರಂ ಕೋರ್ಟ್​

ಚೆನ್ನೈ: ಅತ್ಯಾಚಾರ ಕೇಸ್​ವೊಂದರಲ್ಲಿ ತಮಿಳುನಾಡು ಮಾಜಿ ಡಿಜಿಪಿ ರಾಜೇಶ್​ ದಾಸ್​ ಎಂಬುವರಿಗೆ 3 ವರ್ಷ ಜೈಲಾಗಿದೆ. ತನ್ನ ಸಹೋದ್ಯೋಗಿ ಮಹಿಳಾ ಐಪಿಎಸ್​ ಅಧಿಕಾರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ರಾಜೇಶ್​​ ದಾಸ್​​ಗೆ​​ ಮೂರು ವರ್ಷ ಜೈಲು, 10 ಸಾವಿರ ದಂಡ ವಿಧಿಸಿ ವಿಲ್ಲುಪುರಂ ಕೋರ್ಟ್​ ಆದೇಶಿಸಿದೆ.

2 ವರ್ಷಗಳ ಹಿಂದೆ ಮಹಿಳಾ ಐಪಿಎಸ್​ ಅಧಿಕಾರಿಯೊಬ್ಬರು ರಾಜೇಶ್​ ದಾಸ್​​ ವಿರುದ್ಧ ಅತ್ಯಾಚಾರ ಕೇಸ್​ ದಾಖಲಿಸಿದ್ದರು. ಅಂದಿನ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ಭದ್ರತೆ ಒದಗಿಸಲು ಒಟ್ಟಿಗೆ ಹೋಗುತ್ತಿದ್ದಾಗ ರಾಜೇಶ್​​ ದಾಸ್​ ತನ್ನನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ನೋಡಿದ. ನಾನು ಒಪ್ಪದಿದ್ದಾಗ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಂದು ನೀಡಿದ ದೂರಿನಲ್ಲಿ ಮಹಿಳಾ ಐಪಿಎಸ್​​ ಅಧಿಕಾರಿ ಆರೋಪಿಸಿದ್ದರು.

ಕಾನೂನು ತಜ್ಞರ ಸಮಿತಿ ರಚನೆ

ಅಂದು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ AIADMK ಸರ್ಕಾರ ಡಿಜಿಪಿ ಆಗಿದ್ದ ರಾಜೇಶ್​​ ದಾಸ್​​ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತು. ಅಲ್ಲದೇ ಕೇಸ್​ ತನಿಖೆಗಾಗಿ ಆರು ಮಂದಿ ನೇತೃತ್ವದ ಕಾನೂನು ತಜ್ಞರ ಸಮಿತಿ ನೇಮಿಸಿ ಆದೇಶಿಸಿತ್ತು.

ಇನ್ನು, ಕೇಸ್​​ನಲ್ಲಿ ಇದುವರೆಗೂ 68ಕ್ಕೂ ಹೆಚ್ಚು ಮಂದಿ ಸ್ಟೇಟ್​ಮೆಂಟ್​​ ರೆಕಾರ್ಡ್​ ಮಾಡಲಾಗಿದೆ. ಜತೆಗೆ ಕೋರ್ಟ್​ ನೀಡಿದ ತೀರ್ಪು ಪ್ರಶ್ನಿಸಿ ಅಪೀಲ್​ ಮಾಡಲು ರಾಜೇಶ್​ ದಾಸ್​ಗೆ 30 ದಿನ ಬೇಲ್​ ಕೂಡ ಸ್ಯಾಂಕ್ಷನ್​ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳಾ IPS ಅಧಿಕಾರಿ ಮೇಲೆ ಅತ್ಯಾಚಾರ; ತಮಿಳುನಾಡು ಮಾಜಿ ಡಿಜಿಪಿಗೆ 3 ವರ್ಷ ಜೈಲು!

https://newsfirstlive.com/wp-content/uploads/2023/06/Rajesh-Das-1.jpg

Load More