ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಮನೆ ಮಾತಾದ ಕೀರ್ತಿ ಪಾತ್ರ
ರಿಯಲ್ ಲೈಫಲ್ಲೂ ಸಿಕ್ಕಾಪಟ್ಟೆ ಫ್ಯಾಷನಿಸ್ಟ್ ಆಗಿದ್ದಾರೆ ನಟಿ ತನ್ವಿ ರಾವ್
ಅದ್ಭುತ ಅಭಿನಯದ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದ ನಟಿ ಇವರು
ಕಿರುತೆರೆಯ ಸೂಪರ್ ಕ್ವೀನ್ಸ್ಗಳಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ತನ್ವಿ ರಾವ್ ಕೂಡ ಒಬ್ಬರು. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇವರು ನಟಿಸುತ್ತಿರೋ ಕೀರ್ತಿ ಪಾತ್ರಕ್ಕೆ ಈಗಾಗಲೇ ನೆಟ್ಟಿಗರು ಫಿದಾ ಆಗಿದ್ದಾರೆ. ಕೀರ್ತಿ ಪಾತ್ರದ ಸ್ಟೈಲ್ ಆ್ಯಂಡ್ ಗ್ಲಾಮರಸ್ ಲುಕ್ಗೆ ಕರುನಾಡೇ ಫಿದಾ ಆಗಿದೆ.
ಇದನ್ನೂ ಓದಿ: ಅಬ್ಬಬ್ಬಾ ಏನ್ ಲುಕ್ ಗುರು.. ತನ್ವಿ ರಾವ್ ರಗಡ್ ಡ್ಯಾನ್ಸ್ಗೆ ಅಭಿಮಾನಿಗಳು ಫುಲ್ ಫಿದಾ
ರೀಲ್ ಹಾಗೂ ರಿಯಲ್ ಲೈಫಲ್ಲೂ ತನ್ವಿ ರಾವ್ ಅವರು ಸಿಕ್ಕಾಪಟ್ಟೆ ಫ್ಯಾಷನಿಸ್ಟ್. ಆಗಾಗ ಗ್ಲಾಮಸರ್ ಫೋಟೋಶೂಟ್ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಌಕ್ಟಿವ್ ಆಗಿರುವ ತನ್ವಿ ರಾವ್ ಅವರು ಆಗಾಗ ಫೋಟೋಶೂಟ್ ಹಾಗೂ ಡ್ಯಾನ್ಸ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾ ಇರುತ್ತಾರೆ. ಇದೀಗ ತಮ್ಮ ಅದ್ಭುತ ಅಭಿನಯದ ಮೂಲಕ ವೀಕ್ಷಕರ ಗಮನ ಸೆಳೆದಿದ್ದ ನಟಿ ತನ್ವಿ ರಾವ್ ಇದೀಗ ಸತತವಾಗಿ ಎರಡನೇ ಬಾರಿಗೆ ಅವಾರ್ಡ್ ಅನ್ನು ಗಿಟ್ಟಿಸಿಕೊಂಡಿದ್ದಾರೆ.
ಹೌದು, ಕಲರ್ಸ್ ಕನ್ನಡದಲ್ಲಿ ಅನುಬಂಧ ಕಾರ್ಯಕ್ರಮ ನಡೆಯುತ್ತಿದೆ. ಕಳೆದ 10 ವರ್ಷಗಳಿಂದ ನಡೆಯುತ್ತಾ ಬಂದಿರೋ ಅನುಬಂಧ ಅವಾರ್ಡ್ಸ್ 2024, 11ನೇ ವರ್ಷಕ್ಕೆ ಕಾಲಿಟ್ಟಿದೆ. ಇದೇ ಅನುಬಂಧ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಸ್ಟೈಲ್ ಐಕಾನ್ ಅವಾರ್ಡ್ಸ್ ಅನ್ನು ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಳೆದ ಬಾರಿಯ ಅನುಬಂಧ ಅವಾರ್ಡ್ಸ್ನಲ್ಲೂ ಜನ ಮೆಚ್ಚಿದ ಸ್ಟೈಲ್ ಐಕಾನ್ ತಮ್ಮದಾಗಿಸಿಕೊಂಡಿದ್ದರು. ಇದೀಗ ಎರಡನೇ ಬಾರಿಯೂ ಕೂಡ ಜನ ಮೆಚ್ಚಿದ ಸ್ಟೈಲ್ ಐಕಾನ್ ತಮ್ಮದಾಗಿಸಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇನ್ನು, ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಕೀರ್ತಿ ಪಾತ್ರದಲ್ಲಿ ನಟಿ ತನ್ವಿ ರಾವ್ ಅವರು ಅಭಿನಯಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಎಪಿಸೋಡ್ಗಳಲ್ಲಿ ನಟಿ ತನ್ವಿ ರಾವ್ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಕಾವೇರಿ ಬಾಯಿಂದ ಸತ್ಯ ಹೊರ ತರಲು ಕೀರ್ತಿ ಹರಸಾಹಸ ಪಟ್ಟಿದ್ದಳು. ಆದರೆ ಕಾವೇರಿ ಕೀರ್ತಿಯನ್ನು ಬೆಟ್ಟದ ಮೇಲಿಂದ ತಳ್ಳಿ ಸಾಯಿಸಿದ್ದಾಳೆ. ಆದರೆ ಇದರ ಮಧ್ಯೆ ಲಕ್ಷ್ಮೀ ಸಖತ್ ಪ್ಲಾನ್ ಮಾಡಿ ಕೀರ್ತಿ ಆತ್ಮ ಮೈಮೇಲೆ ಬಂದಿದೆ ಅಂತ ನಾಟಕವಾಡುತ್ತಿದ್ದಾಳೆ. ಈ ನಾಟಕ ಮಾಡಲು ಮುಖ್ಯ ಕಾರಣವೇ ಕಾವೇರಿ ಬಾಯಿಂದ ಸತ್ಯ ಆಚೆ ತರುವ ಸಲುವಾಗಿ. ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ