newsfirstkannada.com

ಗಣೇಶೋತ್ಸವಕ್ಕೆ ಭಯೋತ್ಪಾದಕರ ರೀತಿಯಲ್ಲಿ ಹಣ ವಸೂಲಿ ಮಾಡ್ತಾರೆ- ಪಂಡಿತಾರಾಧ್ಯ ಶ್ರೀ ಮತ್ತೊಂದು ಹೇಳಿಕೆ

Share :

07-11-2023

    ‘ಗಣೇಶ ಚತುರ್ಥಿ ವೇಳೆ ಅನೇಕ ಮಕ್ಕಳು ದಾರಿಗೆ ಅಡ್ಡ ಹಾಕ್ತಾರೆ’

    ‘ನಾವಂತೂ ಅಂಥವರಿಗೆ ಯಾರಿಗೂ ಹಣವನ್ನು ಕೊಡುವುದಿಲ್ಲ’

    ಗಣೇಶನ ಪೂಜಿಸೋದು ನಮ್ಮ ಸಂಸ್ಕೃತಿ ಅಲ್ಲ ಎಂದಿದ್ದ ಶ್ರೀಗಳು

ಚಿತ್ರದುರ್ಗ: ಗಣೇಶನನ್ನು ಪೂಜಿಸೋದು ನಮ್ಮ ಸಂಸ್ಕೃತಿ ಅಲ್ಲ ಎಂದು ಚಿತ್ರದುರ್ಗದ ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಬೆನ್ನಲ್ಲೇ, ಇದೀಗ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಹುಡುಗರು ಗಣೇಶೋತ್ಸವಕ್ಕೆ ಭಯೋತ್ಪಾದಕರ ರೀತಿಯಲ್ಲಿ ಹಣ ವಸೂಲಿ ಮಾಡ್ತಾರೆ ಎಂದು ಪಂಡಿತಾರಾಧ್ಯ ಶ್ರೀಗಳು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ ಗಣೇಶ ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ. ಗಣೇಶ ಚತುರ್ಥಿ ವೇಳೆ ಅನೇಕ ಮಕ್ಕಳು ದಾರಿಗೆ ಅಡ್ಡ ಹಾಕ್ತಾರೆ. ಕಲ್ಲು ಹಾಕಿ, ಹಗ್ಗ ಹಾಕಿ ಭಯೋತ್ಪಾದಕರಂತೆ ಹಣ ವಸೂಲಿ ಮಾಡ್ತಾರೆ. ನಾವಂತೂ ಅಂಥವರಿಗೆ ಯಾರಿಗೂ ಹಣ ಕೊಡಲ್ಲ ಎಂದಿದ್ದಾರೆ.

ಇದನ್ನೂ ಓದಿ: ಗಣಪತಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ-ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಭಾರತೀಯರು ಅನೇಕ ಹಬ್ಬ-ಹುಣ್ಣಿಮೆ ಆಚರಿಸುತ್ತ ಬಂದಿದ್ದಾರೆ. ಯಾವುದೇ ಹಬ್ಬ ಮಾಡ್ತೀವಿ ಅಂದರೆ ಒಂದು ಜನಾಂಗ ಸೇರಿ ಮಾಡೋದಲ್ಲ. ಎಲ್ಲರೂ ಒಂದಾಗಿ ಸೇರಿ ಹಬ್ಬ ಮಾಡಬೇಕು. ಹಬ್ಬಗಳಲ್ಲೂ ಕೂಡ ಜಾತಿಯ ಭೂತವನ್ನು ಬಡಿದೆಬ್ಬಿಸಲಾಗುತ್ತಿದೆ. ಧಾರ್ಮಿಕ ಹಾಗೂ ರಾಜಕೀಯ ನಾಯಕ ರಿಂದಲೂ ಇದು ನಡೆಯುತ್ತಿದೆ. ಇವರ ಮಧ್ಯೆ ಕೆಲವು ಪುಂಡರೂ ಕೂಡ ಹುಟ್ಟಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣೇಶೋತ್ಸವಕ್ಕೆ ಭಯೋತ್ಪಾದಕರ ರೀತಿಯಲ್ಲಿ ಹಣ ವಸೂಲಿ ಮಾಡ್ತಾರೆ- ಪಂಡಿತಾರಾಧ್ಯ ಶ್ರೀ ಮತ್ತೊಂದು ಹೇಳಿಕೆ

https://newsfirstlive.com/wp-content/uploads/2023/11/Saanehalli.jpg

Load More