ಮೊದಲ ಬಾರಿಗೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಸ್ಟಾರ್ ಜೋಡಿ
Dance ಕರ್ನಾಟಕ Dance & ಮಹಾನಟಿ ಮಹಾಸಂಭ್ರಮ ವೇದಿಕೆ
ಡಿಕೆಡಿ ಶೋಗೆ ಬಂದ ತರುಣ್, ಸೋನಲ್ ಜೋಡಿಗೆ ಸರ್‌ಪ್ರೈಸ್
ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸ್ಟಾರ್ ಜೋಡಿಯ ಮದುವೆಗೆ ಕನ್ನಡ ಚಿತ್ರರಂಗದ ಹಲವು ತಾರೆಯರು, ಗಣ್ಯರು ಬಂದು ಶುಭ ಕೋರಿದ್ದರು.
ಇದನ್ನೂ ಓದಿ: ವೇದಿಕೆ ಮೇಲೆ ನಟಿಯನ್ನ ಎತ್ತಿ ಮುದ್ದಾಡಿದ ತರುಣ್; ಚಿನ್ನ, ಬಂಗಾರಿ ಎಂದಿದ್ದಕ್ಕೆ ನಾಚಿ ನೀರಾದ ಸೋನಲ್
ತರುಣ್ ಹಾಗು ಸೋನಲ್ ಜೋಡಿ ಮದುವೆಯಾದ ಬಳಿಕ ಮೊದಲ ಬಾರಿಗೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. Dance ಕರ್ನಾಟಕ Dance & ಮಹಾನಟಿ ಮಹಾಸಂಭ್ರಮ ವೇದಿಕೆಯಲ್ಲಿ ಸ್ಟಾರ್ ಜೋಡಿಯನ್ನು ಬರಮಾಡಿಕೊಳ್ಳಲಾಗಿದೆ.
ತರುಣ್ ಸುಧೀರ್ ಅವರು ಮಹಾನಟಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಡಿಕೆಡಿ ಶೋಗೆ ತರುಣ್ ಸುಧೀರ್ ಅವರು ಗೆಸ್ಟ್ ಆಗಿ ಬಂದಿದ್ದರು. ಇದೇ ಶೋಗೆ ಸೋನಲ್ ಅವರನ್ನು ಸರ್‌ಪ್ರೈಸ್ ಹಾಗೂ ತುಂಬಾ ಗ್ರ್ಯಾಂಡ್ ಆಗಿ ಬರಮಾಡಿಕೊಳ್ಳಲಾಗಿದೆ. ಸೋನಲ್ ಅವರನ್ನು ನೋಡಿದ ಕೂಡಲೇ ನಿರ್ದೇಶಕ ತರುಣ್ ಸುಧೀರ್ ಶಾಕ್ ಆಗಿದ್ದರು.
ಇದನ್ನೂ ಓದಿ: ಪುರೋಹಿತರು, ಹಿರಿಯರ ಸಮ್ಮುಖದಲ್ಲಿ ಗಂಡ-ಹೆಂಡತಿ ಅನ್ನೋದು ಮೊದಲ ಸುಳ್ಳು! ಮದುವೆ ಬಳಿಕ ತರುಣ್ ಹೀಗ್ಯಾಕಂದ್ರು?
ಮದುವೆಯಾದ ಮೇಲೆ ಮೊದಲ ಬಾರಿಗೆ ರಿಯಾಲಿಟಿ ಶೋಗೆ ಬಂದಿರುವ ಈ ಸ್ಟಾರ್ ಜೋಡಿಗೆ ಹಲವು ಸರ್‌ಪ್ರೈಸ್‌ಗಳನ್ನು ಡಿಕೆಡಿ ವೇದಿಕೆಯಲ್ಲಿ ನೀಡಲಾಗಿದೆ. ಸ್ಪೆಷಲ್ ಗೆಸ್ಟ್ ಆಗಿರುವ ತರುಣ್ ಹಾಗೂ ಸೋನಲ್‌ಗೆ ಡಿಕೆಡಿ ತಂಡ ಬಿಗ್ ಸರ್‌ಪ್ರೈಸ್ ಕೊಟ್ಟಿದೆ. ತರುಣ್ ಅವರಿಗೆ ಅವರ ತಂದೆ ದಿವಂಗತ ಸುಧೀರ್ ಅವರಿಂದಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಮದುವೆಯ ಶುಭಾಶಯ ಕೋರಲಾಗಿದೆ.
View this post on Instagram
AI ಅವತಾರದಲ್ಲಿ ಸುಧೀರ್ ಅವರ ಸ್ಪೆಷಲ್ ವಿಡಿಯೋ ರೆಡಿ ಮಾಡಲಾಗಿದ್ದು, ಅಪ್ಪನ ಆಶೀರ್ವಾದದ ಧ್ವನಿ ಕೇಳಿ ತರುಣ್ ಸುಧೀರ್ ಅವರು ಭಾವುಕರಾಗಿದ್ದಾರೆ. ನನ್ನ ಸೊಸೆ ಸೋನಲ್‌ಗೆ ನನ್ನ ಆಶೀರ್ವಾದ ಅಂತ ಸುಧೀರ್ ಅವರು ಹೇಳಿದ್ದಾರೆ. ಈ ಧ್ವನಿ ಹಾಗೂ ವಿಡಿಯೋ ನೋಡುತ್ತಿದ್ದಂತೆ ತರುಣ್ ಅವರು ಕಣ್ಣೀರು ಸುರಿಸಿದ್ದಾರೆ. ಪಕ್ಕದಲ್ಲಿದ್ದ ಸೋನಲ್ ಅವರು ಪತಿಯ ನೋಡಿ ಭಾವುಕರಾಗಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. ಇದರ ಜೊತೆಗೆ ಸುಧೀರ್ ಅವರ ಜೊತೆ ತರುಣ್ ಹಾಗೂ ಸೋನಲ್ ಜೋಡಿ ಇರುವ ಫ್ಯಾಮಿಲಿ ಫೋಟೋವನ್ನು ಗಿಫ್ಟ್ ಆಗಿ ಕೊಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ