ತರುಣ್ ಸುಧೀರ್, ಸೋನಲ್ ಮೊಂತೆರೊ ವಿವಾಹ ಸಮಾರಂಭ
ಅದ್ಧೂರಿ ಆರತಕ್ಷತೆಯಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಭಾಗಿ
ದರ್ಶನ್ ಅವರು ಇದೇ ಡೇಟ್ಗೆ ಮದ್ವೆ ಆಗಿ ಅಂತ ಹೇಳಿದ್ದಾರೆ
ಸ್ಯಾಂಡಲ್‌ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಅವರು ನಟಿ ಸೋನಲ್ ಮೊಂತೆರೊ ಅವರ ಕೈ ಹಿಡಿದಿದ್ದಾರೆ. ಸ್ಟಾರ್ ಜೋಡಿಯ ಮದುವೆ ಸಮಾರಂಭ ಜೋರಾಗಿದೆ.
ಇಂದು ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೊ ಅವರ ಆರತಕ್ಷತೆ ನಡೆದಿದ್ದು, ಸ್ಯಾಂಡಲ್‌ವುಡ್ ಸಾಕಷ್ಟು ಸೆಲಬ್ರಿಟಿಗಳು ಆಗಮಿಸಿದ್ದಾರೆ.
ಇದನ್ನೂ ಓದಿ: ತರುಣ್ ಸುಧೀರ್, ಸೋನಲ್ ಮೊಂತೆರೊ ಆರತಕ್ಷತೆ; ಯಾರೆಲ್ಲಾ ಸ್ಟಾರ್ ಬಂದ್ರು? ಫೋಟೋಗಳಲ್ಲಿ ನೋಡಿ!
ತರುಣ್ ಸುಧೀರ್, ಸೋನಲ್ ಆರತಕ್ಷತೆಗೆ ಬೆಳ್ಳಿತೆರೆಯ ಸಾಕಷ್ಟು ನಟ, ನಟಿಯರು ಆಗಮಿಸಿ ನವಜೋಡಿಗೆ ಶುಭ ಕೋರಿದ್ದಾರೆ.
ಸ್ಯಾಂಡಲ್‌ವುಡ್ ಸ್ಟಾರ್ ಜೋಡಿಯ ವಿವಾಹ ಸಮಾರಂಭಕ್ಕೆ ಇಡೀ ಚಂದನವನವೇ ಹಾಜರಾಗಿದ್ರೆ ನಟ ದರ್ಶನ್ ಅವರ ಅನುಪಸ್ಥಿತಿ ಈ ಸಂಭ್ರಮಕ್ಕೆ ಕಾಡಿದೆ. ದರ್ಶನ್ ಆಪ್ತ ಇಂಡವಾಳು ಸಚ್ಚಿದಾನಂದ್ ಅವರು ದರ್ಶನ್ ಅಣ್ಣಾ ಇಲ್ಲಿ ಇಲ್ಲದಿರೋದು ಬೇಜಾರು ತಂದಿದೆ. ಈ ಮದುವೆಗೆ ಬರಬೇಕು ಅನ್ನೋ ಆಸೆ ದರ್ಶನ್ ಅವರಿಗೆ ಸಿಕ್ಕಾಪಟ್ಟೆ ಇತ್ತು. ಅವ್ರು ಇವತ್ತು ಇಲ್ಲದಿರೋದೇ ಬೇಸರದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೋನಲ್, ತರುಣ್ ಸುಧೀರ್ ಹಳದಿ ಶಾಸ್ತ್ರ ಹೇಗಿತ್ತು? ಯಾರೆಲ್ಲಾ ಭಾಗಿಯಾಗಿದ್ರು?
ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಲವ್ ಸ್ಟೋರಿಗೆ ನಟ ದರ್ಶನ್ ಅವರು ಕಾರಣವಂತೆ. ರಾಬರ್ಟ್ ಸಿನಿಮಾ ಶೂಟಿಂಗ್ ವೇಳೆ ಇವರಿಬ್ಬರನ್ನು ನೋಡಿ ಮದುವೆ ಆಗಿ ಅಂತ ಮೊದಲು ದರ್ಶನ್ ಹೇಳಿದ್ರಂತೆ. ಇದೀಗ ತರುಣ್, ಸೋನಲ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ತರುಣ್ ಸುಧೀರ್, ಸೋನಲ್ ಮದುವೆ ದಿನಾಂಕ ನಿಗಧಿಯಾದ ಮೇಲೆ ದರ್ಶನ್ ಅವರನ್ನು ಜೈಲಿನಲ್ಲಿ ತರುಣ್ ಭೇಟಿಯಾಗಿದ್ದರು.
ದರ್ಶನ್ ಅವರಿಗಾಗಿ ಮದುವೆ ದಿನಾಂಕ ಮುಂದೂಡುವುದಾಗಿ ಕೇಳಿದ್ರಂತೆ ಆದರೆ ದರ್ಶನ್ ಅವರು ಇದೇ ಡೇಟ್ಗೆ ಮದ್ವೆ ಆಗಿ ಅಂತ ಹೇಳಿದ್ದಾರೆ. ಹೀಗಾಗಿ ದರ್ಶನ್ ಅವರ ಅನುಪಸ್ಥಿತಿಯಲ್ಲೇ ತರುಣ್ ಸುಧೀರ್, ಸೋನಲ್ ಅವರ ಮದುವೆ ಸಮಾರಂಭ ನೆರವೇರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ