newsfirstkannada.com

ಪರಚಿ ಹೋದ ಕಿಲಾಡಿ ಚಿರತೆ.. ಅರವಳಿಕೆ ಮದ್ದು ಕೊಡುವಾಗ ಟಾಸ್ಕ್‌ ಫೋರ್ಸ್‌ ಸಿಬ್ಬಂದಿಗಳಿಗೆ ಗಾಯ; ಆಪರೇಷನ್ ಹೇಗಿದೆ?

Share :

01-11-2023

    ಪಾಳು ಬಿದ್ದ ಕಟ್ಟಡದ ಹಿಂಭಾಗದಲ್ಲಿ ಜಂಪ್ ಮಾಡಿರುವ ಚಿರತೆ

    ಎರಡು ಬಾರಿ ಅರವಳಿಕೆ ಮದ್ದು ಹೊಡೆದ್ರೂ ಪರ್ಫೆಕ್ಟ್ ಆಗಿ ಬಿದ್ದಿಲ್ಲ

    ಅರವಳಿಕೆ ಮದ್ದು ಕೊಡುವ ಸಂದರ್ಭದಲ್ಲಿ ಇಬ್ಬರ ಮೇಲೆ ಅಟ್ಯಾಕ್‌

ಬೆಂಗಳೂರು: ಕೂಡ್ಲು ಗೇಟ್ ಬಳಿಯ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪ್ರತ್ಯಕ್ಷವಾಗಿರೋ ಚಿರತೆಗಳನ್ನ ಸೆರೆ ಹಿಡಿಯೋದು ಸವಾಲಾಗಿದೆ. ಪಾಳು ಬಿದ್ದ ಬಿಲ್ಡಿಂಗ್ ಬಳಿ ಬೋನ್ ಇಟ್ಟು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಪಾಳು ಬಿದ್ದ ಬಿಲ್ಡಿಂಗ್‌ನಲ್ಲಿ ಚಿರತೆ ಅವಿತಿದ್ದು ಅರವಳಿಕೆ ಮದ್ದು ಕೊಡುವಾಗ 2 ಸಲ ಚಿರತೆ ಎಸ್ಕೇಪ್ ಆಗಿದೆ. ಅಷ್ಟೇ ಅಲ್ಲ ಅರವಳಿಕೆ ಮದ್ದು ಕೊಡುವ ಸಂದರ್ಭದಲ್ಲಿ ಇಬ್ಬರ ಮೇಲೆ ಚಿರತೆ ಅಟ್ಯಾಕ್ ಕೂಡ ಮಾಡಿದೆ. ವೆಟರ್ನರಿ ಡಾಕ್ಟರ್ ಕಿರಣ್, ಹಾಗೇ ಟಾಸ್ಕ್ ಫೋರ್ಸ್ ಟೀಮ್ ಸದಸ್ಯ ಓರ್ವರ ಮೇಲೆ ಅಟ್ಯಾಕ್ ಮಾಡಲಾಗಿದೆ. ಕಿಲಾಡಿ ಚಿರತೆಯ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಭಾರೀ ಸರ್ಕಸ್ ನಡೆಸುತ್ತಿದ್ದಾರೆ.

ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ ಹಿಡಿಯಲು ನಾಲ್ಕು ಟೀಮ್‌ಗಳು ಎಂಟ್ರಿಯಾಗಿವೆ. ಆನೇಕಲ್ ಪ್ರಾದೇಶಿಕ ವಲಯ, ಆನೇಕಲ್ ವನ್ಯಜೀವಿ ವಲಯ, KR ಪೂರ ಪ್ರಾದೇಶಿಕ ವಲಯ, ಕಗ್ಲಿಪುರ ಪ್ರಾದೇಶಿಕ ವಲಯ ಹಾಗೂ ಬನ್ನೇರುಘಟ್ಟದಿಂದ ಕೂಡ ಒಂದು ಟೀಮ್ ಬಂದಿದ್ದು ಸೆರೆ ಹಿಡಿಯಲು ಪ್ರಯತ್ನ ಮಾಡಲಾಗಿದೆ. ಎಷ್ಟೇ ಸರ್ಕಸ್ ಮಾಡಿದ್ರು ಚಾಲಾಕಿ ಚಿರತೆ ಮಾತ್ರ ಬಲೆಗೆ ಬಂದಿಲ್ಲ.

ಸಾಮಾನ್ಯವಾಗಿ ಯಾವುದೇ ಪ್ರಾಣಿಗೆ ಅರವಳಿಕೆ ಮದ್ದು ನೀಡಬೇಕಾದ್ರೆ ಹೆಚ್ಚು ಮಾಂಸ ಇರೋ ಸ್ಥಳ ನೋಡಿ ಹೊಡೀಬೇಕು. ಆದ್ರೆ, ಇವತ್ತು ಅರವಳಿಕೆ ಅಟೆಂಪ್ಟ್‌ನಲ್ಲಿ ವೈದ್ಯರು ಫೇಲ್ ಆಗಿದ್ದಾರೆ. ಎರಡು ಬಾರಿ ಅರವಳಿಕೆ ಮದ್ದು ಹೊಡೆದ್ರೂ ಪರ್ಫೆಕ್ಟ್ ಆಗಿ ಬಿದ್ದಿಲ್ಲ. ಎರಡನೇ ಮದ್ದು ಸಕ್ಸಸ್ ಅಂದ್ಕೊಂಡು ವೈದ್ಯ ಕಿರಣ್ ಅವರು ಪರಿಶೀಲನೆಗೆ ಮುಂದಾಗಿದ್ದರು. ಅಷ್ಟರಲ್ಲಿ ಅಲರ್ಟ್ ಆಗಿ ಕಿರಣ್ ಮೇಲೆ ಚಿರತೆ ದಾಳಿ ಮಾಡಿ ಎಸ್ಕೇಪ್ ಆಗಿದೆ.
ಚಿರತೆ ದಾಳಿ ಮಾಡಿದ ವೇಳೆ ಕುತ್ತಿಗೇ ಭಾಗ ಮತ್ತು ಕೈಗೆ ಗಾಯಗಳಾಗಿದೆ. ವೈದ್ಯ ಕಿರಣ್‌ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿಕಿತ್ಸೆ ನೀಡಿದ್ದಾರೆ. ಇದಾದ ಬಳಿಕ ಮತ್ತೊಂದು ಹಂತದ ಆಪರೇಷನ್‌ಗೆ ಅರಣ್ಯಾಧಿಕಾರಿಗಳು ಆ್ಯಂಡ್ ಟೀಂ ತಯಾರಾಗಿದ್ದಾರೆ.

ನಿನ್ನೆ ಸಂಜೆ ಪಾಳು ಬಿದ್ದ ಬಿಲ್ಡಿಂಗ್‌ಗೆ ಎಂಟ್ರಿ ಕೊಟ್ಟಿದ್ದ ಚಿರತೆ ಪಕ್ಕದ ಬಿಲ್ಡಿಂಗ್‌ಗೆ ಜಿಗಿದಿರೋ ಸಾಧ್ಯತೆ ಇದೆ. ಪಾಳು ಬಿದ್ದ ಕಟ್ಟಡದ ಹಿಂಭಾಗದಲ್ಲಿ ಚಿರತೆ ಜಂಪ್ ಮಾಡಿದ್ದು, ಕಟ್ಟಡದ ಹಿಂಭಾಗ ಮಿನಿ ಫಾರೆಸ್ಟ್ ಆಗಿ ನಿರ್ಮಾಣವಾಗಿದೆ. ಕುರುಚಲು ಗಿಡ, ಸಾಕಷ್ಟು ಗಿಡ ಗಂಟಿಗಳ ರಾಶಿಯಿಂದ ತುಂಬಿರುವ ಜಾಗದಲ್ಲಿ ಚಿರತೆ ಅವಿತು ಕುಳಿತಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಜಾಗ ಕ್ಲಿಯರ್ ಮಾಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರಚಿ ಹೋದ ಕಿಲಾಡಿ ಚಿರತೆ.. ಅರವಳಿಕೆ ಮದ್ದು ಕೊಡುವಾಗ ಟಾಸ್ಕ್‌ ಫೋರ್ಸ್‌ ಸಿಬ್ಬಂದಿಗಳಿಗೆ ಗಾಯ; ಆಪರೇಷನ್ ಹೇಗಿದೆ?

https://newsfirstlive.com/wp-content/uploads/2023/11/Chirate-Attack.jpg

Load More