/newsfirstlive-kannada/media/post_attachments/wp-content/uploads/2024/08/tata-Ace.jpg)
ಟಾಟಾ ಎಸಿ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಮಗು ಸೇರಿ ಐವರು ಸಾವನ್ನಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ರಾಜಸ್ಥಾನದಲ್ಲಿ ಈ ದುರ್ಘಟನೆ ನಡೆದಿದೆ. ಚಿತ್ತೋರ್​ಗಢ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಮ್ಯಾಂಗ್ರೋಲ್​ ಮೋರಿ ಬಳಿ ಅಪರಿಚಿತ ವಾಹನ ಬೈಕ್​ಗೆ ಗುದ್ದಿ ಐವರು ಸಾವಿಗೀಡಾಗಿದ್ದಾರೆ.
ಸಾವನ್ನಪ್ಪಿದ ಐವರು ಬೈಕ್​ನಲ್ಲಿ ತೆರಳುತ್ತಿದ್ದರು. ಚಿತ್ತೋರ್​ಗಢದಿಂದ ನಿಂಬಹೇರಾ ಕಡೆಗೆ ಹೋಗುವ ವೇಳೆ ಅಪರಿಚತ ವಾಹನ ಬಂದು ಗುದ್ದಿದೆ. ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತರಲ್ಲಿ ಒಬ್ಬರನ್ನು ಭದೇಸರ್​​ ಪೊಲೀಸ್​ ಠಾಣೆ ವ್ಯಾಪ್ತಿಯ ಪೀಪಲ್​​ ವಾಸ್​ ಗ್ರಾಮದ ಜೀವನ್​ ಹರಿಜನ್​ ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವತಿಯನ್ನು ನಿಂಬಹೇರಾ ಜಿಲ್ಪಾಸ್ಪತ್ರೆಗೆ ದಾಖಲಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us