newsfirstkannada.com

ರಸ್ತೆ ಬದಿ ನಿಲ್ಲಿಸಿದ್ದ ಸಿಮೆಂಟ್​ ಬಲ್ಕರ್​ಗೆ ಟಾಟಾ ಸುಮೋ ಡಿಕ್ಕಿ; 13 ಜನರು ಸಾವು

Share :

26-10-2023

    ಚಿಕ್ಕಬಳ್ಳಾಪುರದ ಬಳಿ ನಡೆದ ಭೀಕರ ರಸ್ತೆ ಅಪಘಾತ

    ಚಿತ್ರಾವತಿ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದ ಅಪಘಾತ

    4 ಜನ ಮಹಿಳೆಯರು, 8 ಜನ ಪುರುಷರು, ಒಬ್ಬ ಬಾಲಕ ಸಾವು

ಚಿಕ್ಕಬಳ್ಳಾಪುರದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮೃತರನ್ನ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಗೋರೆಂಟ್ಲ ಭಾಗದವರು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗಿನ ಜಾವ ಈ ಅನಾಹುತ ಸಂಭಿವಿಸಿದೆ. ಚಿಕ್ಕಬಳ್ಳಾಪುರ ನಗರ ಹೊರವಲಯದ ಚಿತ್ರಾವತಿ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ  ಟಾಟಾ ಸುಮೋ ವಾಹನ ನಿಂತಿದ್ದ  ಸಿಮೆಂಟ್ ಬಲ್ಕರ್​ಗೆ ಡಿಕ್ಕಿ ಹೊಡೆದಿದೆ.  ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ನಡೆದಿರುವ ಭೀಕರ ಅಪಘಾತದಲ್ಲಿ ಅನೇಕರು ಅಸುನೀಗಿದ್ದಾರೆ.

ಬೆಳಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ಈ ಅಪಘಾತ ನಡೆದಿದೆ ಎನ್ನಲಾಗುತ್ತಿದೆ. ಸಿಮೆಂಟ್​ ಬಲ್ಕರ್​ಗೆ ಡಿಕ್ಕಿ ಹೊಡೆ ರಭಸಕ್ಕೆ ಎಪಿ 02 ಸಿ ಹೆಚ್ 1021 ಸಂಖ್ಯೆಯ ಟಾಟಾ ಸುಮೋ ನಜ್ಜುಗುಜ್ಜಾಗಿದೆ.

ಅಪಘಾತ ನಡೆದ ಸ್ಥಳದಲ್ಲೇ 12 ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಮತ್ತೋರ್ವ ಮಹಿಳೆ ಉಸಿರು ಚೆಲ್ಲಿದ್ದಾರೆ. ಈ ಘಟನೆಯಲ್ಲಿ ಒಟ್ಟು 4 ಜನ ಮಹಿಳೆಯರು 8 ಜನ ಪುರುಷರು ಒಬ್ಬ ಬಾಲಕ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿಸಿ ಪಿ ಎನ್ ರವೀಂದ್ರ, ಎಸ್ಪಿ ಡಿ ಎಲ್ ನಾಗೇಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ಬದಿ ನಿಲ್ಲಿಸಿದ್ದ ಸಿಮೆಂಟ್​ ಬಲ್ಕರ್​ಗೆ ಟಾಟಾ ಸುಮೋ ಡಿಕ್ಕಿ; 13 ಜನರು ಸಾವು

https://newsfirstlive.com/wp-content/uploads/2023/10/CHK-Accident.jpg

Load More