newsfirstkannada.com

ಜಾಗತಿಕ ಮಾರುಕಟ್ಟೆಗಾಗಿ ಭಾರತದಲ್ಲೇ TATA ಗ್ರೂಪ್​​ನಿಂದ ಐಫೋನ್ ಉತ್ಪಾದನೆ

Share :

28-10-2023

  ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಮಾಹಿತಿ

  Wistron Corp-ಟಾಟಾ ಗ್ರೂಪ್​ ಜೊತೆಗಿನ ಒಪ್ಪಂದ ರಿವೀಲ್

  ಟಾಟಾ ಗ್ರೂಪ್ ಮೂಲಕ ಮೇಡ್​ ಇನ್ ಇಂಡಿಯಾ ಐಫೋನ್

ಕೆಲವೇ ಕೆಲವು ಜನರ ಕೈಯಲ್ಲಿ ನೋಡಬಹುದಾಗಿದ್ದ ಐಫೋನ್,​​ ಇನ್ಮುಂದೆ ಹಾಗಲ್ಲ. ಟಾಟಾ ಗ್ರೂಪ್​ ಶೀಘ್ರದಲ್ಲಿಯೇ ಜಾಗತಿಕ ಮಾರುಕಟ್ಟೆಗಾಗಿ ಅದರ (iPhone) ಉತ್ಪಾದನೆಯನ್ನು ದೇಶದಲ್ಲಿ ಆರಂಭಿಸುತ್ತಿದೆ ಎಂದು ಕೇಂದು ಐಟಿ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಸಚಿವರು.. ಪ್ರಪಂಚದಾದ್ಯಂತ ಮಾರಾಟವಾಗುತ್ತಿದ್ದ ಹೆಚ್ಚಿನ ಐಫೋನ್​ಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತಿತ್ತು. ಇದೀಗ ನಮ್ಮ ದೇಶದಲ್ಲಿ ನಿಧಾನವಾಗಿ ಐಫೋನ್ ತಯಾರಿಕೆ ಆರಂಭವಾಗುತ್ತಿದೆ. ಸ್ವಲ್ಪ ಸಮಯದ ಹಿಂದೆ ಹಳೆಯ ಐಫೋನ್ ಮಾದರಿಗಳನ್ನು ದೇಶದಲ್ಲಿ ಜೋಡಿಸಲಾಗುತ್ತಿತ್ತು.

ಆದರೆ, ಈಗ ಹಾಗಲ್ಲ. ಭಾರತದಲ್ಲಿ ಇತ್ತೀಚೆಗಿನ ಎಲ್ಲಾ ಮಾದರಿ ಐಪಿಎಲ್ ಮಾದರಿಗಳನ್ನು ಪ್ರಾರಂಭಿಸುತ್ತಿದೆ. ಈ ಬಾರಿ ಬಿಡುಗಡೆಯಾಗಿರುವ iPhone15 ಭಾರತದಲ್ಲೂ ತಯಾರಾಗುತ್ತಿದ್ದು, ಮೊದಲ ದಿನದಿಂದಲೇ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇದೀಗ ಐಫೋನ್​ಗಳನ್ನು ತಯಾರಿಸಲು ಟಾಟ್ರಾ ಗ್ರೂಪ್​ ಹಕ್ಕುಸ್ವಾಮ್ಯ ಪಡೆದುಕೊಂಡಿದೆ. ಟಾಟಾ ಗ್ರೂಪ್ ಹಾಗೂ ವಿಸ್ಟ್ರಾನ್ ಕಾರ್ಪ್​ (Wistron Corp) ನಡುವೆ ಒಪ್ಪಂದ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸುಮಾರು 12 ಸಾವಿರ ಕೋಟಿಗೆ ಒಪ್ಪಂದ ಆಗಿದೆ ಎಂದು ಹೇಳಲಾಗಿದೆ. Wistron Corp ಆ್ಯಪಲ್​ ಪ್ರಾಡೆಕ್ಟ್​​ಗಳ ಪೂರೈಕೆದಾರ. ಟಾಟಾ ಗ್ರೂಪ್ ಉತ್ಪಾದನೆಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ Wistron Corp ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾಗತಿಕ ಮಾರುಕಟ್ಟೆಗಾಗಿ ಭಾರತದಲ್ಲೇ TATA ಗ್ರೂಪ್​​ನಿಂದ ಐಫೋನ್ ಉತ್ಪಾದನೆ

https://newsfirstlive.com/wp-content/uploads/2023/09/Iphone-15.jpg

Load More