ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಿರೋಧ ಪಕ್ಷಗಳ ಸಭೆ
ನಾಯಕರಿಗೆ IAS ಅಧಿಕಾರಿಗಳ ಮೂಲಕ ಸ್ವಾಗತ ಆರೋಪ
JDS, BJP ಆರೋಪಕ್ಕೆ ಟಿ.ಬಿ.ಜಯಚಂದ್ರ ಹೇಳಿದ್ದೇನು..?
ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ UPA (United Progressive Alliance)ನ ಪ್ರಮುಖ ನಾಯಕರು ನಿನ್ನೆಯಿಂದ ಬೆಂಗಳೂರಲ್ಲಿ ಟಿಕಾಣಿ ಹೂಡಿದ್ದಾರೆ. ವಿಪಕ್ಷಗಳ ನಾಯಕರು ಬೆಂಗಳೂರಿಗೆ ಬರುತ್ತಿದ್ದಂತೆಯೇ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಗಳು ಅವರನ್ನು ಸ್ವಾಗತಿಸಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ನಾಯಕರು ಕೂಡ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ ಅವರೇ, ಪರೋಕ್ಷವಾಗಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿರೋದು ತಪ್ಪು ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ.
ಉಳಿದ ಅಧಿಕಾರಿಗಳು ಹೋಗುವ ಅವಶ್ಯಕತೆ ಇಲ್ಲ
ಐಎಎಸ್ ಅಧಿಕಾರಿಗಳ ಬಳಕೆ ಬೇಕಿರಲಿಲ್ಲ. ಐಎಎಸ್ ಅಧಿಕಾರಿಗಳನ್ನ ನಿಯೋಜನೆ ಮಾಡಿ ರಕ್ಷಣೆ ಕೊಡೋದು ಕರ್ನಾಟಕ ಸರ್ಕಾರಕ್ಕೆ ಅವಶ್ಯಕತೆ ಇಲ್ಲ. ಅಲ್ಲಿ ಡಿ.ಕೆ.ಶಿವಕುಮಾರ್ ಹೋಗಿದ್ದಾರೆ, ಸಿಎಂ ಹೋಗಿರಬಹುದು. ಡಿ.ಕೆ.ಶಿವಕುಮಾರ್ ಜೊತೆಗಿನ ಸ್ಟಾಫ್ ಬಿಟ್ಟು, ಉಳಿದ ಅಧಿಕಾರಿಗಳು ಹೋಗುವ ಅವಶ್ಯಕತೆ ಇಲ್ಲ. ನಾವ್ಯಾರು ಹೋಗಿರಲಿಲ್ಲ ಅಂದಮೇಲೆ ಅಧಿಕಾರಿಗಳೂ ಹೋಗುವ ಅವಶ್ಯಕತೆ ಇರಲಿಲ್ಲ. ಯಾವುದೋ ಕಾರಣಕ್ಕೆ ಹೋಗಿರಬಹುದು. ಇದನ್ನ ಸಾರ್ವಜನಿಕವಾಗಿ ಆರೋಪ ಮಾಡೋದು ಸರಿಯಲ್ಲ. ಬೆಂಗಳೂರಿನಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಭೆ ಯಶಸ್ವಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ