ತಾಯಿಯೇ ಮೊದಲು ಗುರು, ಮನೆಯೇ ಮೊದಲ ಪಾಠ ಶಾಲೆ!
ಮನೆಯಲ್ಲಿ ತಾಯಿ ಗುರು ಆದರೆ, ಶಾಲೆಯಲ್ಲಿ ಶಿಕ್ಷಕಿ ಮಕ್ಕಳಿಗೆ ತಾಯಿ
ಇಂಥ ಟೀಚರ್ ವಿರುದ್ಧ ದೂರು ಕೊಟ್ಟ ವಿದ್ಯಾರ್ಥಿಗಳು; ಕಾರಣವೇನು?
ಇಟಲಿ: ತಾಯಿಯೇ ಮೊದಲು ಗುರು, ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತು ಕೇಳಿದ್ದೇವೆ. ಮನೆಯಲ್ಲಿ ತಾಯಿ ಮೊದಲು ಗುರು ಆದರೆ, ಶಾಲೆಯಲ್ಲಿರೋ ಶಿಕ್ಷಕಿ ಮಕ್ಕಳಿಗೆ ತಾಯಿ ಸಮಾನ. ಮಕ್ಕಳ ಪಾಲಿಗೆ 2ನೇ ತಾಯಿ ಎಂದರೆ ಅದು ಶಿಕ್ಷಕಿ. ಹೇಗೆ ಮನೆಯಲ್ಲಿ ಅಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುತ್ತಾರೋ, ಅದೇ ರೀತಿ ಶಿಕ್ಷಕಿ ಕೂಡ ತಾಯಿ ಹಾಗೇ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆ. ಮಕ್ಕಳು ಎಂದೂ ಶಿಕ್ಷಕರ ಬಗ್ಗೆ ಕಂಪ್ಲೈಂಟ್ ಮಾಡುವುದೇ ಇಲ್ಲ. ಆದರೆ, ಇಟಲಿಯಲ್ಲಿ ಮಾತ್ರ ಶಾಲಾ ಮಕ್ಕಳು ತಮ್ಮ ಟೀಚರ್ ವಿರುದ್ಧ ಪ್ರತಿಭಟನೆ ಮಾಡಿ ತಮ್ಮ ಜೀವನದಲ್ಲೇ ಕಂಡ ಕೆಟ್ಟ ಶಿಕ್ಷಕಿ ಎಂದು ದೂರಿದ್ದಾರೆ. ಕಾರಣ ಆಕೆ ಮಕ್ಕಳಿಗೆ ಪಾಠ ಮಾಡದೆ ಕ್ಲಾಸ್ನಲ್ಲೇ ಮೆಸೇಜ್ ಮಾಡುವುದು, ಮೊಬೈಲ್ನಲ್ಲಿ ಮಾತಾಡೋದು ಹೆಚ್ಚು. ವಿಚಿತ್ರ ಎಂದರೆ ಇದೇ ಶಿಕ್ಷಕಿಯನ್ನೇ ಇಟಲಿ ಸರ್ಕಾರ ಅತ್ಯಂತ ಕೆಟ್ಟ ಉದ್ಯೋಗಿ ಎಂದು ಬಿರುದು ಕೊಟ್ಟಿದೆ.
ಹೌದು, ತನ್ನ 24 ವರ್ಷಗಳ ಟೀಚಿಂಗ್ ಅವಧಿಯಲ್ಲಿ ಬರೋಬ್ಬರಿ 20 ವರ್ಷ ರಜೆ ಪಡೆದ ಶಿಕ್ಷಕಿ ಈಕೆ. ನನಗೆ ಹುಷಾರಿಲ್ಲ, ಆರೋಗ್ಯ ಕೆಟ್ಟಿದೆ ಎಂಬ ಕಾರಣ ನೀಡಿ ಈ ಶಿಕ್ಷಕಿ 20 ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗಿಲ್ಲ. ಜತೆಗೆ ಉಳಿದ ಪರ್ಯಾಯ ರಜೆಗಳನ್ನೂ ಅನುಮತಿ ಪಡೆದು ಹಾಕಿಕೊಂದು ಸಿನಿಮಾಗೆ ಹೋಗುವುದು, ಕಾನ್ಫೆರೆನ್ಸ್ನಲ್ಲಿ ಭಾಗಿಯಾಗುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಸರ್ಕಾರ ಈಕೆಗೆ ಈ ಬಿರುದು ನೀಡಿದೆ ಎಂದು ವರದಿಯಾಗಿದೆ.
ಈಕೆ ಹೆಸರು ಸಿಂಜಿಯೊ ಪಾವೊಲಿನಾ ಡಿ ಲಿಯೊ. ವೆನಿಸ್ನಲ್ಲಿರೋ ಶಾಲೆಯೊಂದರಲ್ಲಿ ಮಕ್ಕಳಿಗೆ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಕಲಿಸುತ್ತಿದ್ದರು. ಆದರೆ, 24 ವರ್ಷಗಳ ಅವಧಿಯಲ್ಲಿ ಈಕೆ ಕೆಲಸ ಮಾಡಿದ್ದು ಕೇವಲ 4 ವರ್ಷಗಳಷ್ಟೇ. ಅದರಲ್ಲೂ ಕ್ಲಾಸ್ನಲ್ಲಿ ಪಾಠ ಮಾಡದೆ ಈ ಶಿಕ್ಷಕಿ ಮೆಸೇಜ್ ಮಾಡುತ್ತಾ ಕಾಲಹರಣ ಮಾಡುತ್ತಿದ್ದರು ಎಂಬ ಆರೋಪ ಇದೆ.
ಕೆಲಸದಿಂದಲೇ ವಜಾಗೊಳಿಸಿ ಆದೇಶ
ಇನ್ನು, ಡಿ ಲಿಯೊ ಶಿಕ್ಷಕಿಯಾಗಲು ಲಾಯಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಕೆಲಸದಿಂದಲೇ ವಜಾಗೊಳಿಸಿ ಆದೇಶಿಸಿದೆ. ನೌಕರಿಯಿಂದ ವಜಾಗೊಂಡ ಬಗ್ಗೆ ಪ್ರಶ್ನೆ ಕೇಳಿದ್ರೂ ಉತ್ತರಿಸದೆ ಆಕೆ ಬೀಚ್ನಲ್ಲಿ ಕಾಲ ಕಳೆಯುತ್ತಿದ್ದಳು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ