newsfirstkannada.com

Teachers Day: ಶಿಕ್ಷಕರ ದಿನಾಚರಣೆ ಶುಭಾಶಯ; ರಾಷ್ಟ್ರೀಯ ಪ್ರಶಸ್ತಿ ವಿಜೇತರ ಜೊತೆ ಪ್ರಧಾನಿ ಮೋದಿ ಸಂವಾದ

Share :

05-09-2023

  ಶಿಕ್ಷಕರ ಜತೆ ಸಮಾಲೋಚನೆ ವೇಳೆ ಮೋದಿಯಿಂದ ನಗುವಿನ ಚಟಾಕಿ

  ಮಕ್ಕಳಿಗೆ ಹೆಚ್ಚು ಕ್ಯೂರಿಯಾಸಿಟಿ, ಪ್ರೋತ್ಸಾಹವನ್ನು ಶಿಕ್ಷಕರು ನೀಡಬೇಕು

  ತಾಯಿ ನಮಗೆ ಜನ್ಮ ನೀಡಿದ್ರೆ, ಗುರು ನಮಗೆ ಜೀವನ ನೀಡ್ತಾರೆ-ಮೋದಿ

ನವದೆಹಲಿ: ಶಿಕ್ಷಕರ ದಿನಾಚರಣೆ ಪ್ರಯುಕ್ತ 75 ಶಿಕ್ಷಕರಿಗೆ 2023ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಗುತ್ತದೆ. ಇದಕ್ಕೂ ಮುನ್ನ ಅಂದರೆ ನಿನ್ನೆ ಪ್ರಧಾನಿ ಮೋದಿಯವರು ಪ್ರಶಸ್ತಿ ವಿಜೇತರ ಜೊತೆ ಸಂವಾದ ನಡೆಸಿದ್ರು. ಈ ವೇಳೆ ತಾಯಿ ನಮಗೆ ಜನ್ಮ ನೀಡಿದ್ರೆ, ಗುರು ನಮಗೆ ಜೀವನ ನೀಡುತ್ತಾರೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತ ಶಿಕ್ಷಕರ ಜೊತೆ ಸಂವಾದ ನಡೆಸಿದ ಮೋದಿ ಅವರು ಎಲ್ಲರಿಗೂ ಸ್ವಾಗತ ಕೋರಿದರು. ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಮೋದಿ ಸಮಾಧಾನಕರವಾಗಿ ಉತ್ತರ ನೀಡಿದರು. ದೇಶ ನಿರ್ಮಾಣದಲ್ಲಿ ಶಿಕ್ಷಕರ ಕೆಲಸ ಪ್ರಮುಖವಾಗಿದೆ. ನೀವು ಇಡೀ ದೇಶವನ್ನೇ ಬದಲಾವಣೆ ಮಾಡಬಹುದು. ಟೀಚರ್ಸ್​ ನಿತ್ಯ ಮಕ್ಕಳಿಗೆ ಕ್ಯೂರಿಯಾಸಿಟಿ ಕೊಡುತ್ತಿರಬೇಕು. ಅವರಿಗೆ ಪ್ರೋತ್ಸಾಹ ಹೆಚ್ಚಿಗೆ ನೀಡಬೇಕು ಎಂದು ಹೇಳಿದರು.

ಪ್ರಶಸ್ತಿ ವಿಜೇತರ ಜೊತೆ ಪ್ರಧಾನಿ ಮೋದಿ ಫೋಟೋ ತೆಗೆಸಿಕೊಂಡರು.

ಶಾಲೆಯಲ್ಲಿ ಮಕ್ಕಳ ಓದು, ಬರಹ ಹೇಗಿರುತ್ತೆ ಎಂಬುದರ ಬಗ್ಗೆ ಚರ್ಚೆ ಮಾಡಿದರು. ಸಮಾಲೋಚನೆಯ ನಡುವೆ ಆಗಾಗ ನಗುವಿನ ಅಲೆ ತೇಲಿ ಬಂತು. ಸಭೆಯಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ಹಾಜರಿದ್ದರು. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 75 ಶಿಕ್ಷಕರಿಗೆ 2023ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಇನ್ನು ಭಾರತದ ಮಾಜಿ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣ ಅವರ ಹುಟ್ಟುಹಬ್ಬದ ಆಚರಣೆಯನ್ನು ದೇಶದ್ಯಾಂತ ಶಿಕ್ಷಕರ ದಿನಚರಣೆ ಎಂದು ಆಚರಣೆ ಮಾಡಲಾಗುತ್ತದೆ. ಇವರು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್​ 5 ರಂದು ಜನಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Teachers Day: ಶಿಕ್ಷಕರ ದಿನಾಚರಣೆ ಶುಭಾಶಯ; ರಾಷ್ಟ್ರೀಯ ಪ್ರಶಸ್ತಿ ವಿಜೇತರ ಜೊತೆ ಪ್ರಧಾನಿ ಮೋದಿ ಸಂವಾದ

https://newsfirstlive.com/wp-content/uploads/2023/09/MODI_TEACHER_DAY_1.jpg

Load More