newsfirstkannada.com

ವಿಶ್ವಕಪ್​ ಬಳಿಕ ರೋಹಿತ್​ ಶರ್ಮಾ, ವಿರಾಟ್‌ ಕೊಹ್ಲಿಗೆ ಗೇಟ್‌ಪಾಸ್‌?; BCCI ಲಿಸ್ಟ್​ನಲ್ಲಿ ಯಾಱರಿದ್ದಾರೆ ಗೊತ್ತಾ?

Share :

04-07-2023

    ಸೀನಿಯರ್​​ ಪ್ಲೇಯರ್ಸ್​ಗೆ ಗೇಟ್​​ಪಾಸ್​​ ನೀಡಲು BCCI ಬಿಗ್ ಪ್ಲಾನ್​​​

    ರೋಹಿತ್​, ಕೊಹ್ಲಿ ಸೇರಿ ಬಿಸಿಸಿಐ ಲಿಸ್ಟ್​ನಲ್ಲಿವೆ ಹಲವು ಹೆಸರುಗಳು..!

    2007, 2011ರ ಕಪ್​ ನಂತರ ಭಾರತಕ್ಕೆ ಯಾವುದೇ ವಿಶ್ವಕಪ್​ ಬಂದಿಲ್ಲ

ಏಕದಿನ ವಿಶ್ವಕಪ್ ವೇಳಾಪಟ್ಟಿ ಅನೌನ್ಸ್​​ ಆಗಿದ್ದೇ ಬಂತು. ಬಿಸಿಸಿಐ ಫುಲ್​ ಆ್ಯಕ್ಟಿವ್ ಆಗಿದೆ. 50 ಓವರ್​ಗಳ​​​​​ ಮಹಾಬ್ಯಾಟಲ್​ ಸಿದ್ಧತೆಯ ಮಧ್ಯೆ ಇನ್ನೊಂದು ಮೆಗಾ ಪ್ಲಾನ್ ಮಾಡ್ತಿದೆ. ಬಿಗ್​​ಬಾಸ್​ಗಳ ಆ ಪ್ಲಾನ್ ಆದ್ರು ಏನು?.

ಅಕ್ಟೋಬರ್​​​​ 5 ರಿಂದ ಬಹುನಿರೀಕ್ಷಿತ ಒನ್ಡೇ ವಿಶ್ವಕಪ್​​ ಫೆಸ್ಟಿವಲ್​​​ ಆರಂಭಗೊಳ್ಳಲಿದೆ. ತವರಿನಲ್ಲಿ ವಿಶ್ವಕಪ್ ನಡೆಯೋದ್ರಿಂದ ಟೀಮ್ ಇಂಡಿಯಾ ವರ್ಲ್ಡ್ ಕಪ್​ ಗೆಲ್ಲುವ ಫೇವರಿಟ್​ ತಂಡವೆನಿಸಿದೆ. ಈ 50 ಓವರ್​​ಗಳ ಬಿಗ್ ಬ್ಯಾಟಲ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ ಬೀಸಲಿದೆ.

ಏಕದಿನ ವಿಶ್ವಕಪ್​ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ ಟಾರ್ಗೆಟ್​​​​..!

ಒಂದೂವರೆ ತಿಂಗಳ ವಿಶ್ವಕಪ್ ಸಂಗ್ರಾಮ ಮುಗಿಯುತ್ತಿದ್ದಂತೆ ಬಿಸಿಸಿಐ ಫೋಕಸ್​​ 2024ರ ಟಿ20 ವಿಶ್ವಕಪ್​​​​​​​​​​​ ಕಡೆ ಶಿಫ್ಟ್ ಆಗಲಿದೆ. ಯಂಗ್ ​​ಇಂಡಿಯಾವನ್ನ ಕಟ್ಟುವ ದೃಷ್ಟಿಯಿಂದ ಕೆಲ ಆಟಗಾರರ ಭವಿಷ್ಯ ನಿರ್ಧರಿಸಲು ಸೆಲೆಕ್ಟರ್ಸ್​ ತೀಮಾರ್ನಿಸಿದ್ದಾರೆ. ನ್ಯೂ ಚೀಫ್ ಸೆಲೆಕ್ಟರ್ಸ್ ಆಯ್ಕೆಯಾದ್ಮೇಲೆ ನೇರವಾಗಿ ಮಾತನಾಡಿ, ನಿರ್ಧರಿಸಲು ತಯಾರಾಗಿದ್ದಾರೆ. ಹಾಗಾದ್ರೆ, ತಂಡದಿಂದ ಹೊರ ಬೀಳೋ ಆ ಆಟಗಾರರು ಯಾಱರು?.

ವಿರಾಟ್ ಕೊಹ್ಲಿ

3 ಫಾಮ್ಯಾಟ್​​​​ನ ಖಾಯಂ ಆಟಗಾರ ಎನಿಸಿಕೊಂಡಿದ್ದ ಕಿಂಗ್ ಕೊಹ್ಲಿಯನ್ನ ಕಳೆದ ಟಿ20 ವಿಶ್ವಕಪ್​ ಅಂತ್ಯದ ಬಳಿಕ ಟಿ20 ಮಾದರಿಗೆ ಪರಿಗಣಿಸ್ತಿಲ್ಲ. ಯುವ ಸೈನ್ಯವನ್ನ ಕಟ್ಟುವ ಉದ್ದೇಶದಿಂದ ರನ್​​​​​ ಮಷಿನ್​​​​​ರನ್ನ ಕೈ ಬಿಡಲಾಗಿದೆ. ಆದರೆ ಇಲ್ಲಿ ತನಕ ಬಿಸಿಸಿಐ, ಕೊಹ್ಲಿ ಟಿ20 ಭವಿಷ್ಯದ ಬಗ್ಗೆ ತುಟಿ ಬಿಚ್ಚಿಲ್ಲ. 2023 ರ ಒನ್ಡೇ ವಿಶ್ವಕಪ್​​ ಮುಗಿದ ಬೆನ್ನಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಬಿಸಿಸಿಐ ತೀರ್ಮಾನಿಸಿದೆ.

ರೋಹಿತ್ ಶರ್ಮಾ

ಕ್ಯಾಪ್ಟನ್ ರೋಹಿತ್ ಶರ್ಮಾರ ಟಿ20 ಫ್ಯೂಚರ್ ಕೂಡ ಏಕದಿನ ವಿಶ್ವಕಪ್​​ ಬಳಿಕವೇ ನಿರ್ಧಾರವಾಗಲಿದೆ. ಕೊಹ್ಲಿ ಹಾಗೂ ರೋಹಿತ್​​ 2022ರ ಟಿ20 ವಿಶ್ವಕಪ್​ ನಂತರ ಒಂದೂ ಟಿ20 ಪಂದ್ಯವನ್ನಾಡಿಲ್ಲ. ಇನ್ನೂ 4 ತಿಂಗಳಲ್ಲಿ ಇದಕ್ಕೆಲ್ಲ ಕ್ಲಾರಿಟಿ ಸಿಗಲಿದೆ.

ಕೆಎಲ್ ರಾಹುಲ್

72 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ಕನ್ನಡಿಗ ಕೆಲ್​ ರಾಹುಲ್​​​​​ರ ಟಿ20 ಭವಿಷ್ಯ ಸದ್ಯ ಅತಂತ್ರತೆಗೆ ಸಿಲುಕಿದೆ. ಕಳಪೆ ಫಾರ್ಮ್​ ಹಾಗೂ ಇಂಜುರಿ ತಂಡದಲ್ಲಿ ಸ್ಥಾನ ಕಸಿದುಕೊಂಡಿದೆ. ಆದರೆ ಇವರನ್ನ ಮತ್ತೆ ಚುಟುಕು ಕ್ರಿಕೆಟ್​ನಲ್ಲಿ ಆಡಿಸ್ಬೇಕಾ ಅಥವಾ ಬೇಡ ಅನ್ನೋದನ್ನ ಸೆಲೆಕ್ಟರ್ಸ್​ ನಿರ್ಧರಿಸಿದ್ದಾರೆ.

ಅಶ್ವಿನ್​​-ಶಮಿಗೆ ಕೊಕ್​​ ನೀಡಲು ಬಿಸಿಸಿಐ ಚಿಂತನೆ..!

ಬರೀ ಬ್ಯಾಟ್ಸ್​​​ಮನ್​​ಗಳೇ ಅಷ್ಟೇ ಅಲ್ಲ, ಸೀನಿಯರ್ ಬೌಲರ್​​ಗಳ ಫ್ಯೂಚರ್ ಕೂಡ ಶೀಘ್ರದಲ್ಲೇ ಡಿಸೈಡ್​ ಆಗಲಿದೆ. ಸ್ಪಿನ್ನರ್ ಆರ್​​.ಅಶ್ವಿನ್​​​​, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್​​​​​​ ಹಣೆಬರಹ ಒನ್ಡೇ ವಿಶ್ವಕಪ್​ ಬಳಿಕ ಗೊತ್ತಾಗಲಿದೆ.

ಕೆಲ ಆಟಗಾರರ ಟಿ20 ಭವಿಷ್ಯದ ಬಗ್ಗೆ ತೀರ್ಮಾನ

ನೂತನ ಮುಖ್ಯಸ್ಥರ ಆಯ್ಕೆ ಬಳಿಕ ಕೆಲ ಆಟಗಾರರ ಭವಿಷ್ಯದ ಬಗ್ಗೆ ತೀರ್ಮಾನಿಸಲಿದ್ದೇವೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಂತ ಸ್ಟಾರ್ ಆಟಗಾರರು ಸುದೀರ್ಘ ಕಾಲ ಆಡಲಿ ಎಂಬುದು ನಮ್ಮ ಬಯಕೆ. ಆದರೆ 3 ಮಾದರಿ ಕ್ರಿಕೆಟ್ ಜೊತೆ ಐಪಿಎಲ್ ಆಡುವುದು ಸುಲಭದ ಮಾತಲ್ಲ.

-ಬಿಸಿಸಿಐ ಅಧಿಕಾರಿ

2024ರ ಟಿ20 ವಿಶ್ವಕಪ್​​ ಮುಡಿಗೇರಿಸಿಕೊಳ್ಳಲು ಪಣ..!

2007ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದೇ ಕೊನೆ. ಆ ಬಳಿಕ ಟೀಮ್ ಚುಟುಕು ವಿಶ್ವಕಪ್​​ ಜಯಿಸಿಲ್ಲ. ಸೂಪರ್​ ಸ್ಟಾರ್ ಆಟಗಾರರನ್ನ ಹೊಂದಿದ್ರೂ, ವಿಶ್ವಕಪ್​ ಗೆದ್ದಿಲ್ಲ ಅಂದ್ರೆ ಏನು ಅರ್ಥ ಅನ್ನೋದು ಬಿಸಿಸಿಐಗಳ ವಾದ. ಹೀಗಾಗಿ ಈಗಿನಿಂದ ಸ್ಪಷ್ಟವಾದ ಬ್ಲೂಪ್ರಿಂಟ್​​ ತಯಾರಿಸುವ ಇರಾದೆಯಲ್ಲಿದ್ದಾರೆ.

ಟಿ20 ವಿಶ್ವಕಪ್​ ಗೆದ್ದಿಲ್ಲ ಅಂದ್ರೆ ಏನು ಅರ್ಥ..?

ಖಂಡಿತ ಏಕದಿನ ವಿಶ್ವಕಪ್​ ಬಳಿಕ ನಾವು ಟಿ20 ಬಗ್ಗೆ ಹೆಚ್ಚು ಗಮನ ಹರಿಸಲಿದ್ದೇವೆ. ಏಕೆಂದರೆ 2007ರ ಬಳಿಕ ಒಂದೂ ಟಿ20 ವಿಶ್ವಕಪ್​​ ಗೆದ್ದಿಲ್ಲ. ಐಪಿಎಲ್​ ವೇಗವಾಗಿ ಬೆಳೆಯುತ್ತಿದೆ. ಅಲ್ಲಿಂದ ಗುಣಮಟ್ಟದ ಆಟಗಾರರು ಬಂದಿದ್ದಾರೆ. ಆದರೆ ಟಿ20 ವಿಶ್ವಕಪ್​​ ಗೆದ್ದಿಲ್ಲ ಅಂದರೆ ಇದಕ್ಕೆ ಅರ್ಥವಿಲ್ಲ. ಹಾಗಾಗಿ ಟಿ20 ವಿಶ್ವಕಪ್​​ ಬಗ್ಗೆ ಸದ್ಯದಲ್ಲೇ ಬ್ಲೂಪ್ರಿಂಟ್ ಸಿದ್ಧಪಡಿಸಲಿದ್ದೇವೆ.

-ಬಿಸಿಸಿಐ ಅಧಿಕಾರಿ

ಏಕದಿನ ವಿಶ್ವಕಪ್​ ಬಳಿಕ ಟಿ20 ತಂಡದ ಬದಲಾವಣೆ​​​​ಗೆ ಬಿಸಿಸಿಐ ಸಿದ್ಧವಾಗಿದೆ. ಆದರೆ ಯಾವೆಲ್ಲ ಆಟಗಾರರು ಹೊಡಿಬಡಿ ಅಟದಿಂದ ಕಿಕೌಟ್​ ಆಗ್ತಾರೆ, ಯಾರು ಉಳಿದುಕೊಳ್ತಾರೆ ಅನ್ನೋದು ಗೊತ್ತಾಗಬೇಕಾದ್ರೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಬಳಿಕ ರೋಹಿತ್​ ಶರ್ಮಾ, ವಿರಾಟ್‌ ಕೊಹ್ಲಿಗೆ ಗೇಟ್‌ಪಾಸ್‌?; BCCI ಲಿಸ್ಟ್​ನಲ್ಲಿ ಯಾಱರಿದ್ದಾರೆ ಗೊತ್ತಾ?

https://newsfirstlive.com/wp-content/uploads/2023/07/VIRAT_KOHLI_ROHIT_SHARMA-1.jpg

Load More