newsfirstkannada.com

ಆ ಆಸೆ ನೆರವೇರುವ ಸಮಯ.. ವಿರಾಟ್​ ಕೊಹ್ಲಿಗಾಗಿ 2023ರ ವರ್ಲ್ಡ್​ಕಪ್​ ಗೆದ್ದು ಕೊಡುತ್ತಾ ಟೀಮ್​ ಇಂಡಿಯಾ?

Share :

28-06-2023

    ಅಂದು ಸಚಿನ್​ಗಾಗಿ ಕಪ್​, ಇಂದು ಕೊಹ್ಲಿಗಾಗಿ ವಿಶ್ವಕಪ್​ ಗೆಲ್ಲುತ್ತಾ?

    ಕೊಹ್ಲಿ ಕ್ರಿಕೆಟ್ ಜರ್ನಿಗೆ 16 ವರ್ಷಗಳು, ದಾಖಲೆಗಳೆಲ್ಲ ಉಡೀಸ್

    ರೋಹಿತ್​ ಪಡೆಗೆ ಹೀಗೊಂದು ಬಿಗ್​ ಚಾಲೆಂಜ್​ ವಿನ್ ಆಗ್ತಾರಾ?

2011ರ ಒನ್ಡೇ ವಿಶ್ವಕಪ್​ ಜಯಿಸಿ ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್​​​ಗೆ ಟೀಮ್​ ಇಂಡಿಯಾ ಬಿಗ್​​ ಗಿಫ್ಟ್​​​​​ ಕೊಟ್ಟಿತ್ತು. ಅಂತೆಯೇ ಈ ಬಾರಿ ವಿಶ್ವಕಪ್ ಗೆದ್ದು ಕಿಂಗ್ ಕೊಹ್ಲಿಗೆ ಉಡುಗೊರೆ ನೀಡ್ತಾರಾ? 2023ರ ಒನ್ಡೇ ವಿಶ್ವಕಪ್​ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಇಂತಹದೊಂದು ಚರ್ಚೆ ಮುನ್ನಲೆಗೆ ಬಂದಿದೆ.

ಭಾರತೀಯ ಕ್ರಿಕೆಟ್​ ವಿಶ್ವಾದ್ಯಂತ ಅನೇಕ ಗೆಲುವುಗಳನ್ನ ಕಂಡಿದೆ. ವಿಶ್ವದ ಪ್ರತಿ ಮೂಲೆಯಲ್ಲೂ ದಾಖಲೆಗಳನ್ನ ಬರೆದಿದೆ. ಇತಿಹಾಸದ ಪುಟ ತಿರುವಿ ಹಾಕಿದ್ರೆ, ಒಂದೊಂದು ಗೆಲುವು ಒಂದೊಂದು ಕಥೆಯನ್ನ ಹೇಳುತ್ತವೆ. ಆದ್ರೆ, ಈ ಎಲ್ಲ ಗೆಲುವುಗಳಿಗಿಂತ ಭಾರತೀಯರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿದಿರೋದು ಎರಡೇ ಗೆಲುವು.. ಒಂದು 1983ರ ವಿಶ್ವಕಪ್​, ಇನ್ನೊಂದು 2011 ವಿಶ್ವಕಪ್​. ಇವರೆಡು ಭಾರತೀಯರ ಪಾಲಿನ ಎವರ್​ಗ್ರೀನ್​ ವಿಕ್ಟರೀಸ್​.

2011ರ ವಿಶ್ವಕಪ್​ಗೆ ಪಣ ತೊಟ್ಟಿತ್ತು ಭಾರತ..!

ರವಿಶಾಸ್ತ್ರಿ ಬಾಯಿಂದ ಬಂದ ಈ ಮಾತುಗಳನ್ನ ವಾಂಖೆಡೆ ಅಂಗಳದಲ್ಲಿ ಲಾಂಗ್ ಆನ್​ನಲ್ಲಿ ಧೋನಿ ಬಾರಿಸಿದ ಸಿಕ್ಸರ್​​ ಅನ್ನ ಯಾರು ತಾನೆ ಮರೆಯೋಕೆ ಸಾಧ್ಯ. ಕೋಟಿ-ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಿದ ಕ್ಷಣ ಅದು. ಬರೋಬ್ಬರಿ 28 ವರ್ಷಗಳ ಬಳಿಕ ಹೆಮ್ಮೆಯ ಭಾರತದ ಮುಡಿಗೆ ವಿಶ್ವಕಪ್​ ಕಿರೀಟ ತೊಡಿಸಿದ ಕ್ಷಣ ಅದು.

ಕ್ರಿಕೆಟ್​ ದೇವರಿಗಾಗಿ ಆಗಿತ್ತು ಗೆಲುವಿನ ಶಪಥ.!

2011ರ ವಿಶ್ವಕಪ್​ ಟೂರ್ನಿಯಲ್ಲಿ ನಮ್ಮ ನೆಲದಲ್ಲಿ ನಡೆದಿತ್ತು ಅನ್ನೋದಕ್ಕಿಂತ ಕ್ರಿಕೆಟ್​ ದೇವರಿಗೆ ಕೊನೆಯ ಟೂರ್ನಿ ಎಂಬ ಕಾರಣಕ್ಕಾಗಿಯೇ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಭಾರತೀಯ ಕ್ರಿಕೆಟ್​ಗಾಗಿ 2 ದಶಕಗಳ ಕಾಲ ಸೇವೆ ಸಲ್ಲಿಸಿದ ಮಾಸ್ಟರ್​ಗೆ ಗೆಲುವಿನ ಉಡುಗೊರೆ ನೀಡಲೇಬೇಕು ಎಂದು ಇಡೀ ಭಾರತ ಪಣತೊಟ್ಟಿತ್ತು. ಕ್ರಿಕೆಟ್​​ ಅಭಿಮಾನಿಗಳ ಮನೆ-ಮನಗಳಲ್ಲಿ ಭಾರತ ಗೆಲ್ಲಲಿ ಅನ್ನೋ ಜಪ ನಿರಂತರವಾಗಿ ಸಾಗಿತ್ತು.

ಅಭಿಮಾನಿಗಳ ಆಶಯದಂತೆ, ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸ್ತು. ಕೊನೆಗೂ ಭಾರತ ಟ್ರೋಫಿಗೆ ಮುತ್ತಿಕ್ಕಿತು. ಧೋನಿ ಸಿಕ್ಸರ್​ ಸಿಡಿಸುತ್ತಿದ್ದಂತೆ ಆರಂಭವಾದ ಗೆಲುವಿನ ವಿಜಯಯಾತ್ರೆ ಕೊನೆಗೆ ಅಂತ್ಯವಾಗಿದ್ದು ಕ್ರಿಕೆಟ್​​ ದೇವರನ್ನ ಹೊತ್ತು ಮೈದಾನದ ತುಂಬೆಲ್ಲಾ ಮೆರೆಸಿತ್ತು.

ಅಂದು ಸಚಿನ್​, ಇಂದು ಕೊಹ್ಲಿ. ಅದೇ ಗೆಲುವಿನ ಕೂಗು.!

2011ರಲ್ಲಿ ಸಚಿನ್​ಗೆ TRIBUTE ನೀಡೋ ಹಂಬಲ ಎಷ್ಟಿತ್ತೋ, ಈ ಸಲದ ಒನ್ಡೇ ವಿಶ್ವಕಪ್​​​​ ಕಿಂಗ್ ಕೊಹ್ಲಿಗಾಗಿ ಅನ್ನೋ ಮಾತು ಎಲ್ಲೆಡೆ ಮಾರ್ದನಿಸಿದೆ. ಅಂದು ಸಚಿನ್​ಗಾಗಿ ವಿಶ್ವಕಪ್​ ಗೆಲ್ಲಿಸಿಕೊಟ್ಟಂತೆ ಈ ಸಲ ವಿಶ್ವಕಪ್​​ ಜಯಿಸಿ ಸೆಂಚುರಿ ಸಾಮ್ರಾಟನಿಗೆ ಗಿಫ್ಟ್ ನೀಡ್ಬೇಕು ಅನ್ನೋ ಆಶಯ ಎಲ್ಲೆಡೆ ವ್ಯಕ್ತವಾಗ್ತಿದೆ. ಅದಕ್ಕಾಗಿ ರೋಹಿತ್ ಶರ್ಮಾ ಪಡೆ ಕೊಹ್ಲಿಗಾಗಿ ಕಪ್​​​​​ ಅನ್ನೋ ಶಪಥ ಮಾಡಬೇಕಿದೆ.

ಕಿಂಗ್ ಕೊಹ್ಲಿ ಕ್ರಿಕೆಟ್ ಜರ್ನಿ ಆರಂಭಿಸಿ 16 ವರ್ಷಗಳು ಕಳೆದಿವೆ. ಇರೋ ಬರೋ ದಾಖಲೆಗಳನ್ನ ಅಳಿಸಿ ಹಾಕಿದ್ದಾರೆ. ಮಾಡ್ರನ್ ಡೇ ಕ್ರಿಕೆಟ್​ನ ಸಾಮ್ರಾಟ ಅನ್ನೋ ಪಟ್ಟ ಸಿಕ್ಕಿದೆ. 75 ಶತಕಗಳನ್ನ ಹೊಡೆದಿದ್ದಾರೆ. ಒಂದೇ ಮಾತಲ್ಲಿ ಹೇಳೋದಾದ್ರೆ ಕೊಹ್ಲಿ ಸಾಧಿಸಿಬೇಕಾದಿದ್ದನ್ನೆಲ್ಲ ಸಾಧಿಸಿ ಆಗಿದೆ. ಹಾಗಿದ್ರೂ, ಅಭಿಮಾನಿಗಳ ಮಹತ್ತರ ಕನಸನ್ನ ಈಡೇರಿಸಿಲ್ಲ ಅನ್ನೋ ಕೊರಗು ಕಾಡ್ತಿದೆ. ಎಷ್ಟೇ ಆಡಿದ್ರೂ ಕಳೆದ 10 ವರ್ಷದಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲರಾಗ್ತಿದ್ದೇವೆ ಎಂಬ ನೋವು ಕೊಹ್ಲಿಯನ್ನ ಕಾಡ್ತಿದೆ.

ತವರಿನಲ್ಲಿ ನಡೆಯುವ ವಿಶ್ವಕಪ್​ ಕೊಹ್ಲಿ ಪಾಲಿಗೆ ಕೊನೆ ?

ಇನ್ನು ಈ ಒಂದು ಕಾರಣಕ್ಕಾದ್ರು ಭಾರತ ತಂಡ ಈ ಬಾರಿ ಒನ್ಡೇ ವಿಶ್ವಕಪ್ ಗೆಲ್ಲಬೇಕಿದೆ. ತವರಿನಲ್ಲಿ ನಡೆಯುವ ಒನ್ಡೇ ಮಹಾಬ್ಯಾಟಲ್​ ಕಿಂಗ್ ಕೊಹ್ಲಿ ಪಾಲಿಗೆ ಬಹುತೇಕ ಕೊನೆ ಆಗಲಿದೆ. ಯಾಕಂದ್ರೆ ಕೊಹ್ಲಿಗೆ ಹೀಗಾಗಲೇ 34 ವರ್ಷ. ಮುಂದಿನ ಒನ್ಡೇ ವಿಶ್ವಕಪ್ ವೇಳೆಗೆ 38 ದಾಟಿರಲಿದೆ. ನಿವೃತ್ತಿಯ ಸಂಧ್ಯಾಕಾಲದಲ್ಲಿರೋ ವಿರಾಟ್ ಮತ್ತೊಂದು ವಿಶ್ವಕಪ್ ಆಡೋದೆ ಡೌಟ್​​​​. ಹೀಗಾಗಿ ತವರಿನಲ್ಲಿ ಕೊಹ್ಲಿಗೆ ವಿಶ್ವಕಪ್​​​​​​ ಗಿಫ್ಟ್ ಕೊಡಲು ಇದುವೇ ಸಕಾಲ.

ಅಂದು ಕ್ರಿಕೆಟ್ ದೇವರು ಸಚಿನ್​​ಗಾಗಿ ವಿಶ್ವಕಪ್​ ಗೆಲ್ಲಿಸಿಕೊಟ್ಟಂತೆ ಇಂದು ಕಿಂಗ್ ಕೊಹ್ಲಿಗಾಗಿ ಒನ್ಡೇ ವಿಶ್ವಕಪ್​ ಗೆಲ್ಲಿಸಿಕೊಟ್ಟರೆ ವಿರಾಟ್​​​ ಮಾಡಿದ ಸಾಧನೆ ಭಾರತೀಯ ಕ್ರಿಕೆಟ್​ಗೆ ಕೊಟ್ಟ ಕೊಡುಗೆ ಎಲ್ಲವೂ ಅಜರಾಮರವಾಗಿ ಉಳಿಯುತ್ತೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆ ಆಸೆ ನೆರವೇರುವ ಸಮಯ.. ವಿರಾಟ್​ ಕೊಹ್ಲಿಗಾಗಿ 2023ರ ವರ್ಲ್ಡ್​ಕಪ್​ ಗೆದ್ದು ಕೊಡುತ್ತಾ ಟೀಮ್​ ಇಂಡಿಯಾ?

https://newsfirstlive.com/wp-content/uploads/2023/06/KOHLI_ASHWIN.jpg

Load More