newsfirstkannada.com

Super Six: ಆಟಗಾರರಿಗೆ ರೋಹಿತ್ ಶರ್ಮಾ​ ಕ್ಲಾಸ್​.. ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡ್ತಾರೆ ಎಂದ ಕ್ಯಾಪ್ಟನ್​!

Share :

22-08-2023

  ಮೋದಿಯನ್ನ​​ ಸ್ವಾಗತಿಸಿದ ಸೌತ್​ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್

  ಟೀಂ ಇಂಡಿಯಾದ ಆಟಗಾರರಿಗೆ ಎಚ್ಚರಿಕೆ ಕೊಟ್ಟ ನಾಯಕ ರೋಹಿತ್​ ಶರ್ಮಾ

  ವಿಶ್ವಕಪ್​ ವೇಳಾಪಟ್ಟಿಯಲ್ಲಿ ಬದಲಾವಣೆ ಇದೆಯಾ? ಇಲ್ಲಿದೆ ಮಾಹಿತಿ

ವಿಶ್ವಕಪ್​ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲ್ಲ..!

ವಿಶ್ವಕಪ್​ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಕೋರಿದ್ದ ಹೈದರಾಬಾದ್​ ಕ್ರಿಕೆಟ್​ ಅಸೋಸಿಯೇಶನ್​ನ ಮನವಿಯನ್ನ ಬಿಸಿಸಿಐ ತಿರಸ್ಕರಿಸಿದೆ. ಪರಿಷ್ಕೃತ ವೇಳಾಪಟ್ಟಿಯಲ್ಲಿ ಸತತವಾಗಿ 2 ದಿನ ಅಕ್ಟೋಬರ್​ 9 ಹಾಗೂ 10ರಂದು ಹೈದರಾಬಾದ್​ನಲ್ಲಿ ಪಂದ್ಯಗಳನ್ನ ಆಯೋಜನೆ ಮಾಡಲಾಗಿತ್ತು. ಭದ್ರತಾ ದೃಷ್ಟಿಯಿಂದ ಇದರಲ್ಲಿ ಪರಿಷ್ಕರಣೆ ಮಾಡಬೇಕೆಂದು ಹೈದ್ರಾಬಾದ್​ ಕ್ರಿಕೆಟ್​ ಸಂಸ್ಥೆ ಬಿಸಿಸಿಐಗೆ ಮನವಿ ಮಾಡಿತ್ತು. ಈ ಮನವಿಯನ್ನ ಬಿಸಿಸಿಐ ತಿರಸ್ಕರಿಸಿದ್ದು, ನಿಗದಿತ ದಿನದಂತೆ ಪಂದ್ಯ ನಡೆಸಲು ಸೂಕ್ತ ಭದ್ರತೆ ಕೈಗೊಳ್ಳುವಂತೆ ಸೂಚಿಸಿದೆ.

3ನೇ ಕ್ರಮಾಂಕದಲ್ಲೇ ವಿರಾಟ್​ ಕೊಹ್ಲಿ ಆಡ್ತಾರೆ..!

ವಿಶ್ವಕಪ್​ ಟೂರ್ನಿಗೂ ಮುನ್ನ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಕ್ರಮಾಂಕದ ಚರ್ಚೆಗೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ತೆರೆ ಎಳೆದಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿರುವ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾ ಪರ ಆಡ್ತಿರೋದು 3ನೇ ಕ್ರಮಾಂಕದಲ್ಲಿ. ಇದ್ರಲ್ಲಿ ಯಾವುದೇ ಬದಲಾವಣೆ ಮಾಡೋ ಅಗತ್ಯವಿಲ್ಲ. ಅವರು 3ನೇ ಕ್ರಮಾಂಕದಲ್ಲೇ ಆಡ್ತಾರೆ ಎಂದು ರೋಹಿತ್​ ಹೇಳಿದ್ದಾರೆ. ಟೀಮ್​ ಇಂಡಿಯಾಗೆ ಸದ್ಯ 4ನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್​ಮನ್​ ಕೊರತೆ ಕಾಡ್ತಿದ್ದು, ಕೊಹ್ಲಿಯನ್ನ ಆ ಸ್ಲಾಟ್​ನಲ್ಲಿ ಆಡಿಸಬೇಕು ಎಂದು ರವಿ ಶಾಸ್ತ್ರಿ ಸೇರಿದಂತೆ ಹಲವರು ಹೇಳಿದ್ರು.

ಆಟಗಾರರಿಗೆ ವಾರ್ನಿಂಗ್​ ಕೊಟ್ಟ ರೋಹಿತ್​ ಶರ್ಮಾ

ಏಷ್ಯಾಕಪ್ ಟೂರ್ನಿಗೆ ತಂಡ ಪ್ರಕಟಿಸಿದ ಬಳಿಕ ನಡೆದ ಪತ್ರಿಕಾಗೋಷ್ಟಿಯಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ, ಆಟಗಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಬ್ಯಾಟ್ಸ್​ಮನ್​ಗಳ ಬಗ್ಗೆ ಮಾತನಾಡಿರುವ ನಾಯಕ, ತಂಡದ ಎಲ್ಲಾ ಆಟಗಾರರು ಯಾವುದೇ ಕ್ರಮಾಂಕದಲ್ಲಿ ಬೇಕಾದ್ರೂ ಆಡಲು ರೆಡಿಯಿರಬೇಕು ಎಂದು ನಾನು ಬಯಸುತ್ತೇನೆ. ಇದು ಮುಖ್ಯ. ಹಾರ್ದಿಕ್​ ಪಾಂಡ್ಯ ಬೇಕಿದ್ರೆ ಇನ್ನಿಂಗ್ಸ್​ ಓಪನ್​ ಮಾಡಬಹುದು, ಓಪನರ್ಸ್​​ 8ನೇ ಕ್ರಮಾಂಕದಲ್ಲಿ ಆಡಬೇಕಾಗಬಹುದು ಎಲ್ಲದಕ್ಕೂ ಸಿದ್ಧವಿರಬೇಕು ಎಂದು ರೋಹಿತ್​ ಹೇಳಿದ್ದಾರೆ.

MI ಎಮಿರೇಟ್ಸ್​ ಪರ ಕಣಕ್ಕಿಳಿಯಲು ರಾಯುಡು ಸಜ್ಜು

ಭಾರತೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿರುವ ಅಂಬಟಿ ರಾಯುಡು ಇದೀಗ ವಿದೇಶಿ ಲೀಗ್​ಗಳಲ್ಲಿ ಆಡಲು ಮುಂದಾಗಿದ್ದಾರೆ. ಕೆರಬಿಯನ್​ ಪ್ರೀಮಿಯರ್​ ಲೀಗ್​ ಪರ ಆಡ್ತಿರುವ ರಾಯುಡು, ಅದಾದ ಬಳಿಕ ಯುಎಇನ ILT20 ಟೂರ್ನಿಯಲ್ಲಾಡಲು ಮುಂದಾಗಿದ್ದಾರೆ. ILT20 ಲೀಗ್​ನಲ್ಲಿ MI ಎಮಿರೇಟ್ಸ್​ ಪರ ಕಣಕ್ಕಿಳಿಯಲಿದ್ದಾರೆ. MI ಎಮಿರೇಟ್ಸ್, ಐಪಿಎಲ್​ನ ಮುಂಬೈ ಇಂಡಿಯನ್ಸ್​ ಮಾಲೀಕರ ಒಡೆತನದ ಫ್ರಾಂಚೈಸಿಯಾಗಿದೆ. ಈ ಹಿಂದೆ ರಾಯುಡು ಐಪಿಎಲ್​ನಲ್ಲೂ ಮುಂಬೈ ಪರ ಆಡಿದ್ರು.

ನಮಸ್ಕಾರ ಮೋದಿಜಿ ಎಂದ ಜಾಂಟಿ ರೋಡ್ಸ್​​​

ಇಂದಿನಿಂದ 3 ದಿನಗಳವರೆಗೆ ನಡೆಯಲಿರುವ 15ನೇ ಬ್ರಿಕ್ಸ್​​ ಸಮ್ಮೇಳನದಲ್ಲಿ ಭಾಗವಹಿಸಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನ ಸೌತ್​ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್​​ ಸ್ವಾಗತಿಸಿದ್ದಾರೆ. ನಮಸ್ಕಾರ ಮೋದಿಜಿ, ಭಾರತಕ್ಕೆ ನಮ್ಮ ಕುಟುಂಬ ಹಲವು ಬಾರಿ ಭೇಟಿ ನೀಡಿದೆ. ಭಾರತದ ಜೊತೆ ಭಾವನಾತ್ಮಕ ಸಂಬಂಧ ನನಗಿದೆ. ನಮ್ಮ ದೇಶಕ್ಕೆ ಬರುತ್ತಿರುವ ನಿಮಗೆ ಹೃದಯಸ್ಪರ್ಶಿ ಸ್ವಾಗತ ಎಂದು ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್​​ ಸ್ವಾಗತಿಸಿದ್ದಾರೆ. ಭಾರತದ ಮೇಲೆ ವಿಶೇಷವಾದ ಅಭಿಮಾನ ಹೊಂದಿರುವ ಜಾಂಟಿ ರೋಡ್ಸ್​​, ಆಗಾಗ ಭಾರತಕ್ಕೆ ಭೇಟಿ ನೀಡ್ತಾರೆ.

ಅಬ್ಬಬ್ಬಾ.. ಏನ್​ ಶಾಟ್​​ ಗುರು..!

ಇಂಗ್ಲೆಂಡ್​ನಲ್ಲಿ ನಡೀತಾ ಇರೋ ದಿ ಹಂಡ್ರೆಂಡ್​ ಲೀಗ್​ನಲ್ಲಿ ಇನ್ನೋವೇಟಿವ್​ ಶಾಟ್​ಗಳ ಭರಾಟೆ ಜೋರಾಗಿದೆ. ಪಂದ್ಯದಿಂದ ಪಂದ್ಯಕ್ಕೆ ವಿಭಿನ್ನ ಶಾಟ್​ಗಳನ್ನ ಬ್ಯಾಟ್ಸ್​ಮನ್​ಗಳು ಪ್ಲೇ ಮಾಡ್ತಿದ್ದಾರೆ. ಲಂಡನ್​ ಸ್ಪಿರಿಟ್​ ವಿರುದ್ಧದ ಪಂದ್ಯದಲ್ಲಿ ವೆಲ್ಶ್​​ ಫೈರ್​ ತಂಡದ ಸ್ಟೀವನ್​ ಎಸ್ಕಿನಾಝಿ ಸ್ಕೂಪ್​ ಶಾಟ್​ ಹೊಡೆದು ಎಲ್ಲರನ್ನೂ ದಂಗಾಗಿಸಿದ್ದಾರೆ. ಈ ಶಾಟ್​ ನೋಡಿರುವ ಫ್ಯಾನ್ಸ್​​, ನಂಬಲಸಾಧ್ಯವಾದ ಬ್ಯಾಟಿಂಗ್​ ಎಂದು ಕೊಂಡಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Super Six: ಆಟಗಾರರಿಗೆ ರೋಹಿತ್ ಶರ್ಮಾ​ ಕ್ಲಾಸ್​.. ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡ್ತಾರೆ ಎಂದ ಕ್ಯಾಪ್ಟನ್​!

https://newsfirstlive.com/wp-content/uploads/2023/08/Rohit-And-Kohli.jpg

Load More