2023ರ ಐಸಿಸಿ ಏಕದಿನ ವಿಶ್ವಕಪ್ ಮಹಾ ಸಮರ
ಫೈನಲ್ ಸ್ಟೇಜ್ನಲ್ಲಿ ವಿಶ್ವಕಪ್ ಬಿಗ್ ಬ್ಯಾಟಲ್..!
ಸೆಮೀಸ್ನಲ್ಲಿ ಭಾರತ, ನ್ಯೂಜಿಲೆಂಡ್ ಮುಖಾಮುಖಿ
ಬಹುನಿರೀಕ್ಷಿತ 2023ರ ಐಸಿಸಿ ಏಕನದಿ ವಿಶ್ವಕಪ್ ಟೂರ್ನಿಯೂ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಇಂದು ಬಲಿಷ್ಠ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡದ ನಡುವಿನ ಕಾದಾಟಕ್ಕೆ ರಣರಂಗ ಸಜ್ಜಾಗಿದೆ. ಇಂದಿನ ಸೆಮಿಫೈನಲ್ ಪಂದ್ಯ ಕೇವಲ ಪಂದ್ಯವಾಗಿ ಮಾತ್ರ ಉಳಿದಿಲ್ಲ, ಬದಲಿಗೆ ಸೇಡಿನ ಸಮರ ಎಂಬುದು ವಿಶೇಷ.
ಹೌದು, ಏಕದಿನ ವಿಶ್ವಕಪ್ ಲೀಗ್ ಹಂತದ ಪಂದ್ಯಗಳು ಮುಕ್ತಾಯ ಕಂಡಿವೆ. ಹೀಗಾಗಿ ಎಲ್ಲರ ಚಿತ್ತ ನಾಕೌಟ್ನತ್ತ ನೆಟ್ಟಿದೆ. ವಿಶ್ವಕಪ್ ಗದ್ದುಗೇರಲು ಕೇವಲ 2 ಪಂದ್ಯ ಮಾತ್ರ ಗೆಲ್ಲಬೇಕು. ಯಾವ ಟೀಂ ಈ ಜಿದ್ದಾಜಿದ್ದಿ ಹೋರಾಟದಲ್ಲಿ 2 ಪಂದ್ಯ ಗೆಲ್ಲಲಿದೆಯೇ ಅದಕ್ಕೆ ಏಕದಿನ ವಿಶ್ವಕಪ್ ಟ್ರೋಫಿ.
ಇಂದು ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಲಿವೆ. ಬಲಿಷ್ಠರ ಕಾಳಗ ಭಾರೀ ಕುತೂಹಲವನ್ನೇ ಹುಟ್ಟಿಹಾಕಿದೆ.
ಹೋಮ್ ಗ್ರೌಂಡ್ನಲ್ಲೇ ಈ ಮಹಾ ಸಮರ ನಡೆಯುತ್ತಿರುವುದು ಭಾರತ ತಂಡಕ್ಕೆ ಬಹಳ ಅಡ್ವಾಂಟೇಜ್. ಅದರಲ್ಲೂ ವಾಂಖೆಡೆ ಕ್ಯಾಪ್ಟನ್ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಅವರಿಗೆ ಹೋಮ್ ಗ್ರೌಂಡ್. ತವರಿನಲ್ಲೇ ನಡೆಯುತ್ತಿರೋ ಕಾರಣ ಈ ಮೂವರ ಮೇಲೆ ಬಹಳ ಒತ್ತಡ ಇದೆ.
ಇವರೇ ಟೀಂ ಇಂಡಿಯಾ ಪಿಲ್ಲರ್ಸ್..!
ಟಾಪ್ ಆರ್ಡರ್ ಬ್ಯಾಟಿಂಗ್ ಟೀಂ ಇಂಡಿಯಾದ ಬ್ಯಾಕ್ಬೋನ್. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಎಲ್ಲರೂ ಫಾರ್ಮ್ನಲ್ಲೇ ಇದ್ದಾರೆ. ಇನ್ನೂ ಬೌಲಿಂಗ್ ವಿಭಾಗದಲ್ಲಂತೂ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರಿತ್ ಬೂಮ್ರಾ ಮೋಡಿ ಮಾಡಲಿದ್ದಾರೆ. ಜಡೇಜಾ ಕೂಡ ಕಮಾಲ್ ಮಾಡಲಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ ಎಲೆವೆನ್
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.
ನ್ಯೂಜಿಲೆಂಡ್ ಪ್ಲೇಯಿಂಗ್ ಎಲೆವೆನ್
ಡಿವೋನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಥಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಟೀಮ್ ಸೌಥಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ