ಬಹುನಿರೀಕ್ಷಿತ 2023ರ ಏಕದಿನ ಏಷ್ಯಾಕಪ್ ಟೂರ್ನಿ
ನಾಳೆಯೇ ಭಾರತ, ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ
ಒಂದು ವೇಳೆ ಪಂದ್ಯ ರದ್ದಾದ್ರೆ ಮುಂದಿನ ಕಥೆಯೇನು..?
ಬಹುನಿರೀಕ್ಷಿತ 2023ರ ಏಕದಿನ ಏಷ್ಯಾಕಪ್ ಟೂರ್ನಿ ಈಗಾಗಲೇ ಶುರುವಾಗಿದೆ. ನಾಳೆ ನಡೆಯಲಿರೋ ಭಾರತ, ಪಾಕ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ನೋಡಲು ಇಡೀ ಕ್ರೀಡಾ ಲೋಕವೇ ಕಾದು ಕುಳಿತಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಏಕದಿನ ಮಾದರಿಯಲ್ಲಿ ಪಾಕ್ ಮತ್ತು ಭಾರತ ತಂಡಗಳು ಮುಖಾಮುಖಿ ಆಗುತ್ತಿವೆ.
4 ವರ್ಷಗಳ ಹಿಂದೆ 2019 ಜೂನ್ ತಿಂಗಳಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಭಾರತ, ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿದ್ದವು. ಅಂದು ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಗಿದ್ದರು. ತಂಡದಲ್ಲಿ ಕೂಲ್ ಕ್ಯಾಪ್ಟನ್ ಕೂಡ ಇದ್ದರು. ಅಂದು ಪಾಕ್ ತಂಡದ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಈಗ ಆ ಸೇಡನ್ನು ಪಾಕ್ ತೀರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಪಂದ್ಯದ ರೋಚಕತೆ ಇನ್ನೂ ಹೆಚ್ಚಾಗಿದೆ.
ಕೇವಲ ಇಷ್ಟು ಮಾತ್ರವಲ್ಲ ಮುಂದಿನ ವಿಶ್ವಕಪ್ ದೃಷ್ಟಿಯಿಂದಲೂ ನಾಳೆಯ ಪಂದ್ಯ ಮಹತ್ವ ಪಡೆದುಕೊಂಡಿದೆ. ಆದರೆ, ಈ ಪಂದ್ಯದ ರೋಚಕತೆಗೆ ಮಳೆರಾಯ ಅಡ್ಡಿಪಡಿಸೋ ಸಾಧ್ಯತೆ ಇದೆ. ಹೀಗಾಗಿ ಈ ಮ್ಯಾಚ್ ನಡೆಯೋದು ಬಹುತೇಕ ಡೌಟ್ ಎನ್ನಬಹುದು. ಈ ಸುದ್ದಿ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಮುಂದಿನ ಕಥೆಯೇನು..?
ಇನ್ನು, ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ರಿಸರ್ವ್ಡ್ ಡೇ ಇಲ್ಲ. ಒಂದು ವೇಳೆ ಮಳೆ ಕಾರಣಕ್ಕೆ ಪಂದ್ಯ ರದ್ದಾದಲ್ಲಿ ಎರಡು ತಂಡಗಳು ಅಂಕಗಳನ್ನು ಸಮಾನವಾಗಿ ಹಂಚಿಕೊಳ್ಳಲಿವೆ. ಕಡಿಮೆ ಮಳೆ ಬಂದಲ್ಲಿ ಕಡಿಮೆ ಓವರ್ ಮಾಡಿ ಪಂದ್ಯ ಆಡಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ