newsfirstkannada.com

ಆರಂಭದಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್.. ಟ್ರೋಫಿ ಗೆಲ್ಲುವ ಕನಸು ನನಸು ಮಾಡಿಕೊಂಡಿದ್ದೇಗೆ?

Share :

Published June 30, 2024 at 9:52am

    ಕಿಕ್​ ಸ್ಟಾರ್ಟ್​ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್​ ಶಾಕ್

    9 ರನ್​​ಗೆ ರೋಹಿತ್​.. ಶೂನ್ಯಕ್ಕೆ ಪಂತ್ ಔಟ್

    ದುಬೆ 27 ರನ್.. ಹರಿಣಗಳಿಗೆ ಸ್ಪರ್ಧಾತ್ಮಕ ಟಾರ್ಗೆಟ್..!

ರಣರೋಚಕ ಟಿ20 ವಿಶ್ವಕಪ್​ನ​ ಫೈನಲ್​ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲಾಸ್ಟ್​ ಬಾಲ್​ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 7 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 17 ವರ್ಷಗಳ ಬಳಿಕ ಎರಡನೇ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡು, ಸತತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿದೆ.

ಮೊದಲ​ ಓವರ್​ನಲ್ಲೇ ವಿರಾಟ ದರ್ಶನ
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾಗೆ ಮೊದಲ ಓವರ್​ನಲ್ಲೇ ಸಾಲಿಡ್ ಸ್ಟಾರ್ಟ್ ಸಿಕ್ತು. ಮೊದಲ ಓವರ್​ನಲ್ಲೇ ಮೂರು ಬೌಂಡರಿ ಬಾರಿಸಿದ ವಿರಾಟ್, ವೀರಾವೇಶದ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿದರು. ಅತ್ತ ರೆಡ್​ ಹಾಟ್​​ ಫಾರ್ಮ್​ನಲ್ಲಿದ್ದ ರೋಹಿತ್, 2ನೇ ಓವರ್​ನ ಮೊದಲೆರೆಡು ಬಾಲ್​ಗಳಲ್ಲೇ ಬೌಂಡರಿ ಬಾರಿಸಿ ಬಿಗ್ ಇನ್ನಿಂಗ್ಸ್ ಕಟ್ಟೋ ಲೆಕ್ಕಚಾರದಲ್ಲಿದ್ದರು. ಆದರೆ 4ನೇ ಎಸೆತದಲ್ಲೇ ಕ್ಯಾಚ್ ನೀಡಿದ ರೋಹಿತ್, 9 ರನ್​ಗೆ ನಿರ್ಗಮಿಸಿ ನಿರಾಸೆ ಮೂಡಿಸಿದ್ರೆ, ಈ ಬೆನ್ನಲ್ಲೇ ಕ್ರೀಸ್​ಗೆ ಬಂದ ಪಂತ್, ಬಂದಷ್ಟೇ ವೇಗವಾಗಿ ಹಿಂತಿರುಗಿದರು.

ಇದನ್ನೂ ಓದಿ:ವಿಶ್ವಕಪ್ ಗೆಲ್ಲಿಸಿಕೊಟ್ಟು ವಿದಾಯ.. 31 ತಿಂಗಳು, ಅಮೂಲಾಗ್ರ ಬದಲಾವಣೆ.. ಕನ್ನಡದ ಕಣ್ಮಣಿಗೆ ಬಿಗ್ ಸೆಲ್ಯೂಟ್​..!

ಫೈನಲ್​ನಲ್ಲಿ ಪ್ರಜ್ವಲಿಸಲಿಲ್ಲ ಸೂರ್ಯ
ಏಕದಿನ ವಿಶ್ವಕಪ್​ ಫೈನಲ್ಸ್​ನಲ್ಲಿ ಭಾರೀ ನಿರಾಸೆ ಮೂಡಿಸಿದ್ದ ಸೂರ್ಯ, ಟಿ20 ವಿಶ್ವಕಪ್​ನ ಫೈನಲ್ಸ್​ನಲ್ಲಿ ಪ್ರಜ್ವಲಿಸುವ ನಿರೀಕ್ಷೆ ಇತ್ತು. 3 ರನ್​ಗಳಿಗೆ ವಿಕೆಟ್ ಒಪ್ಪಿಸಿದ ಸೂರ್ಯ ಎಲ್ಲರ ನಿರೀಕ್ಷೆ ಹುಸಿಯಾಗಿಸಿದರು.

4ನೇ ವಿಕೆಟ್​ಗೆ ಕೊಹ್ಲಿ-ಅಕ್ಷರ್ ಜುಗಲ್​ಬಂದಿ
34 ರನ್​​ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ವಿರಾಟ್ ಜೊತೆಗೂಡಿದ ಅಕ್ಷರ್ ಪಟೇಲ್, 4ನೇ ವಿಕೆಟ್​ಗೆ ಅದ್ಬುತ ಇನ್ನಿಂಗ್ಸ್ ಕಟ್ಟಿದ್ರು. 72 ರನ್​​ಗಳ ಜೊತೆಯಾಟವಾಡಿದ ಈ ಜೋಡಿ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದರು. 31 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್​ ಒಳಗೊಂಡ 47 ರನ್ ಸಿಡಿಸಿದ್ದ ಅಕ್ಷರ್, ರನೌಟ್​​ಗೆ ಬಲಿಯಾದರು.

ಇದನ್ನೂ ಓದಿ:ಕಣ್ಣಲ್ಲಿ ನೀರು ಮತ್ತು ವಿಜಯದ ಸಂಭ್ರಮ.. ಹೇಗಿತ್ತು ಟೀಂ ಇಂಡಿಯಾ ಆಟಗಾರರ ಗೆಲುವಿನ ಸಂಭ್ರಮ..! Photos

ಕಿಂಗ್​​ ಕೊಹ್ಲಿ ಫಿಫ್ಟಿ.. ಫ್ಯಾನ್ಸ್​ ಬಹುಪರಾಕ್
ಹೈಫ್ರೆಷರ್ ಗೇಮ್​ನಲ್ಲಿ ಕ್ಲಾಸಿ ಇನ್ನಿಂಗ್ಸ್​ ಕಟ್ಟಿದ ವಿರಾಟ್, 47 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಅಷ್ಟೇ ಅಲ್ಲ. ದುಬೆ ಜೊತೆ 5ನೇ ವಿಕೆಟ್​​ಗೆ 57 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ರನ್​ ಗಳಿಕೆಯ ವೇಗ ಹೆಚ್ಚಿಸಿದ ಕೊಹ್ಲಿ, 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಒಳಗೊಂಡ 76 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

3 ಬೌಂಡರಿ, 1 ಸಿಕ್ಸರ್​ ಒಳಗೊಂಡ 27 ರನ್​​ ಸಿಡಿಸಿದ ಶಿವಂ ದುಬೆ, ಆಟ ಮುಗಿಸಿದರು. ಕೊನೆಯಲ್ಲಿ ಬಂದ ಹಾರ್ದಿಕ್, 2 ಎಸೆತಕ್ಕೆ ಅಜೇಯ 5 ರನ್, ಜಡೇಜಾ 2 ರನ್​ ಗಳಿಸಿದರು. ಇದರೊಂದಿಗೆ ನಿಗದಿತ 20 ಓವರ್​ಗಳಲ್ಲಿ ಟೀಮ್ ಇಂಡಿಯಾ 7 ವಿಕೆಟ್​ ನಷ್ಟಕ್ಕೆ 176 ರನ್ ದಾಖಲಿಸಿತು. ಆ ಮೂಲಕ ಸೌತ್ ಆಫ್ರಿಕಾಗೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಯ್ತು.

ಇದನ್ನೂ ಓದಿ:‘ನೀನೇ ನಾಯಕ..’ ಹಾರ್ದಿಕ್ ಪಾಂಡ್ಯರನ್ನು ತಬ್ಬಿ ಮುತ್ತಿಟ್ಟು ಕಣ್ಣೀರು ಇಟ್ಟ ರೋಹಿತ್ ಶರ್ಮಾ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರಂಭದಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್.. ಟ್ರೋಫಿ ಗೆಲ್ಲುವ ಕನಸು ನನಸು ಮಾಡಿಕೊಂಡಿದ್ದೇಗೆ?

https://newsfirstlive.com/wp-content/uploads/2024/06/VIRAT-KOHLI-15.jpg

Load More