newsfirstkannada.com

ಟೀಮ್​ ಇಂಡಿಯಾದಿಂದ ಸ್ಫೋಟಕ ಬ್ಯಾಟಿಂಗ್​​.. ಅಬ್ಬಬ್ಬಾ! ಜಿಂಬಾಬ್ವೆಗೆ 235 ರನ್​​ ಬಿಗ್​ ಟಾರ್ಗೆಟ್​​!

Share :

Published July 7, 2024 at 6:32pm

    ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಟಿ20

    2ನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಟೀಮ್​ ಇಂಡಿಯಾ ಸಿಡಿಲಬ್ಬರದ ಬ್ಯಾಟಿಂಗ್​​..!

    ಅಭಿಷೇಕ್ ಶರ್ಮಾ​​​ಗೆ ರುತುರಾಜ್​​ ಗಾಯಕ್ವಾಡ್​​, ರಿಂಕು ಸಿಂಗ್​ ಅತ್ಯುತ್ತಮ ಸಾಥ್​ ಕೊಟ್ರು​​​

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2ನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾದ ಯುವ ಕ್ರಿಕೆಟರ್​​ ಅಭಿಶೇಕ್​ ಶರ್ಮಾ ಶತಕ ಬಾರಿಸಿದ್ದಾರೆ. ಟೀಮ್​ ಇಂಡಿಯಾಗೆ ಡೆಬ್ಯೂಟ್​ ಮಾಡಿದ 2ನೇ ಪಂದ್ಯದಲ್ಲೇ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಇನ್ನಿಂಗ್ಸ್​ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್​ಗಳ ಬೆಂಡೆತ್ತಿದ ಅಭಿಷೇಕ್​ ಶರ್ಮಾ ಸ್ಫೋಟಕ ಬ್ಯಾಟಿಂಗ್​ ಮಾಡಿದ್ರು. ತಾನು ಎದುರಿಸಿದ ಕೇವಲ 47 ಬಾಲ್​ನಲ್ಲಿ ಬರೋಬ್ಬರಿ 8 ಸಿಕ್ಸರ್​​, 7 ಫೋರ್​ ಜತೆಗೆ 100 ರನ್​ ಚಚ್ಚಿದ್ರು.

ಕೊನೆ 13 ಬಾಲ್​ನಲ್ಲಿ 50 ರನ್​​ ಚಚ್ಚಿದ ಅಭಿಷೇಕ್​​​!

ಇನ್ನು, ಮೊದಲ 33 ಬಾಲ್​​ನಲ್ಲಿ ಅರ್ಧಶತಕ ಸಿಡಿಸಿದ್ದ ಅಭಿಷೇಕ್​​​ ಬಳಿಕ ಅಬ್ಬರಿಸಿದ್ರು. ನಂತರ ಕೇವಲ 13 ಬಾಲ್​​ನಲ್ಲಿ 50 ರನ್​ ಸಿಡಿಸಿ 100 ರನ್​ ಗಳಿಸಿದ್ರು. ಕೊನೆ 13 ಬಾಲ್​​ನಲ್ಲಿ 5 ಸಿಕ್ಸರ್​​, 4 ಫೋರ್​​ ಸಿಡಿಸಿದ್ರು. ಇವರು ಕ್ರೀಸ್​ನಲ್ಲಿದ್ದಾಗ ಬೌಂಡರಿಗಳ ಸುರಿಮಳೆ ಇತ್ತು.

ಅತ್ತ ಅಭಿಷೇಕ್​​ಗೆ ಸಾಥ್​ ನೀಡಿದ ರುತುರಾಜ್​ ಗಾಯಕ್ವಾಡ್​ ಕೂಡ ಅಬ್ಬರಿಸಿದ್ರು. ತಾನು ಆಡಿದ 47 ಬಾಲ್​ನಲ್ಲಿ 1 ಸಿಕ್ಸರ್​​, 11 ಫೋರ್​ ಸಮೇತ 77 ರನ್​ ಗಳಿಸಿದ್ರು. ಕೊನೆಗೆ ಬಂದ ರಿಂಕು ಸಿಂಗ್​ ಕೂಡ ಮಿಂಚಿದ್ರು. ಕೇವಲ 22 ಬಾಲ್​ನಲ್ಲಿ 5 ಸಿಕ್ಸರ್​​, 2 ಫೋರ್​ ಸಮೇತ 48 ರನ್​​​ ಸಿಡಿಸಿ ಫಿನಿಶ್​ ಮಾಡಿದ್ರು. ಕ್ಯಾಪ್ಟನ್​ ಗಿಲ್​ ಕೇವಲ 2 ರನ್​ಗೆ ಔಟಾಗಿದ್ರು. ಟೀಮ್​ ಇಂಡಿಯಾ ನಿಗದಿತ 20 ಓವರ್​​ನಲ್ಲಿ 236 ರನ್​​ ಕಲೆ ಹಾಕಿದ್ರು.

ಇದನ್ನೂ ಓದಿ: 6,6,6,6,6,4,4,4,4; ಕೊನೆ 13 ಬಾಲ್​ನಲ್ಲಿ 50 ರನ್​ ಚಚ್ಚಿದ ಟೀಮ್​ ಇಂಡಿಯಾದ ಅಭಿಷೇಕ್​ ಯಾರು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾದಿಂದ ಸ್ಫೋಟಕ ಬ್ಯಾಟಿಂಗ್​​.. ಅಬ್ಬಬ್ಬಾ! ಜಿಂಬಾಬ್ವೆಗೆ 235 ರನ್​​ ಬಿಗ್​ ಟಾರ್ಗೆಟ್​​!

https://newsfirstlive.com/wp-content/uploads/2024/07/IND-vs-ZIM-3.jpg

Load More