ಬೆಸ್ಟ್ ಬೌಲಿಂಗ್ ಅಟ್ಯಾಕ್.. ಮ್ಯಾನೇಜ್ಮೆಂಟ್ಗೆ ತಲೆನೋವು
ಹೇಗಿರಲಿದೆ ಭಾರತದ ಬೌಲಿಂಗ್ ಕಾಂಬಿನೇಷನ್..?
ಶಮಿಯನ್ನೇ ಓವರ್ ಟೇಕ್ ಮಾಡ್ತಾರಾ ಶಾರ್ದೂಲ್..?
ಏಷ್ಯಾಕಪ್ ಕಿಕ್ ಸ್ಟಾರ್ಟ್ ಆಗಿದಾಯ್ತು. ಟೀಮ್ ಇಂಡಿಯಾ ಸಿಂಹಳೀಯರ ನಾಡಿಗೆ ತೆರಳಿದ್ದೂ ಆಯ್ತು. ಇನ್ನೇನಿದ್ದರೂ ಮಹಾ ಸಂಗ್ರಾಮದಲ್ಲಿ ಅಖಾಡಕ್ಕಿಳಿಯೋದೊಂದೇ ಬಾಕಿ. ಈ ಮಹಾ ಸಮರಕ್ಕೂ ಮುನ್ನ ಟೀಮ್ ಇಂಡಿಯಾ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಬ್ಯಾಟಿಂಗ್ನದ್ದು ಒಂದು ಕಥೆಯಾದ್ರೆ, ಬೌಲಿಂಗ್ನದ್ದು ಮತ್ತೊಂದು ಕಥೆ..!
ಏಷ್ಯಾಕಪ್ಗೆ ಅದ್ದೂರಿ ಚಾಲನೆ ಸಿಕ್ಕಿದೆ. ನಿರೀಕ್ಷೆಯಂತೆ ಮೊದಲ ಪಂದ್ಯದಲ್ಲಿ ಪಾಕ್, ನೇಪಾಳ ಎದುರು ಗೆದ್ದು ಬೀಗಿದೆ. ಇತ್ತ ಬೆಂಗಳೂರಿನಲ್ಲಿ ಕ್ಯಾಂಪ್ ಮುಗಿಸಿ ಸಿಂಹಳೀಯರ ನಾಡಲ್ಲಿ ಘರ್ಜಿಸಲು ಟೀಮ್ ಇಂಡಿಯಾ ಕಾಲಿಟ್ಟಿದ್ದು, ಏಷ್ಯನ್ ಅಧಿಪತಿಯಾಗಿ ಮೆರೆಯೋಕೆ ಸಕಲ ಸಿದ್ಧತೆ ನಡೆಸಿದೆ. ಆದರೆ ಆರಂಭಕ್ಕೂ ಮುನ್ನವೇ ಒಂದಿಲ್ಲೊಂದು ಗೊಂದಲಕ್ಕೆ ಸಿಲುಕಿರುವ ಟೀಮ್ ಇಂಡಿಯಾಗೆ, ಫಾಸ್ಟ್ ಬೌಲಿಂಗ್ ಕಾಂಬಿನೇಷನ್ ಸೆಟ್ ಮಾಡೋದು ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ.
ಬೆಸ್ಟ್ ಬೌಲಿಂಗ್ ಯುನಿಟ್ನೊಂದಿಗೆ ಏಷ್ಯಾಕಪ್ ಸಮರಕ್ಕಿಳಿದಿರುವ ಟೀಮ್ ಇಂಡಿಯಾಗೆ ವೈರೆಟಿ ಆಫ್ ಬೌಲಿಂಗ್ ಇದೆ. ಕಾಂಬಿನೇಷನ್ನಲ್ಲೂ ಹಲವು ಆಯ್ಕೆಗಳಿವೆ. ಬ್ಯಾಲೆನ್ಸಿಂಗ್ ಬೌಲಿಂಗ್ ಅಟ್ಯಾಕ್ನ ಹೊಂದಿರುವ ಟೀಮ್ ಇಂಡಿಯಾ, ಬಲಿಷ್ಠವಾಗೇ ಕಾಣ್ತಿದೆ. ಆದರೆ, ಯಾವ ಕಾಂಬಿನೇಷನ್ನಲ್ಲಿ ಕಣಕ್ಕಿಳಿಯಬೇಕು ಅನ್ನೋದೆ ಈಗ ಯಕ್ಷಪ್ರಶ್ನೆಯಾಗಿದೆ.
ಏಷ್ಯಾಕಪ್ನಲ್ಲಿ ಯಾವ ಡಿಪಾಟ್ಮೆಂಟ್ ಹೇಗಿದೆಯೋ ಏನೋ? ಆದರೆ, ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಡಿಪಾರ್ಟ್ಟ್ಮೆಂಟ್ ಮಾತ್ರ. ಆನ್ ಪೇಪರ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಇದೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಜೊತೆಗೆ ಕಮ್ಬ್ಯಾಕ್ ಸ್ಟಾರ್ಗಳಾದ ಜಸ್ಪ್ರಿತ್ ಬೂಮ್ರಾ, ಪ್ರಸಿದ್ಧ್ ಕಷ್ಣ ಬಲ ಹೆಚ್ಚಿಸಿದ್ದಾರೆ.
ಬೂಮ್ರಾ ಜೊತೆ ಮೊಹಮ್ಮದ್ ಸಿರಾಜ್ ಫಿಕ್ಸ್..!
ಸದ್ಯದ ಪ್ರಶ್ನೆ ಇರೋ ನಾಲ್ವರ ಪೈಕಿ ಬೂಮ್ರಾಗೆ ಸ್ಥಾನ ಫಿಕ್ಸ್. ಬೂಮ್ರಾ ಜೊತೆಗಾರ ಯಾರು ಅನ್ನೋ ಪ್ರಶ್ನೆಗೆ ಮೊದಲ ಉತ್ತರವೇ ಮೊಹಮ್ಮದ್ ಸಿರಾಜ್ ಆಗಿದ್ದಾರೆ. ಪೇಸ್ ಅಟ್ಯಾಕರ್ ಆಗಿ ಪವರ್ ಪ್ಲೇನಲ್ಲಿ ಮಾಡಿದ್ದ ಪವರ್ಫುಲ್ ಸ್ಪೆಲ್ ಜೊತೆಗೆ ವಿಕೆಟ್ ಟೇಕರ್ ಬೌಲಿಂಗ್ ಆಪ್ಷನ್ ಆಗಿ ಸಿರಾಜ್ ಇದ್ದಾರೆ.
2022ರಿಂದ ಸಿರಾಜ್ ಬೌಲಿಂಗ್
2022ರಿಂದ ಏಕದಿನ ಫಾರ್ಮೆಟ್ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡ್ತಿರುವ ಸಿರಾಜ್, ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ಮೂಲಕ 26 ವಿಕೆಟ್ ಉರುಳಿಸಿದ್ರ, 4.3ರ ಏಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಮಿಡಲ್ ಓವರ್ನಲ್ಲಿ 12 ವಿಕೆಟ್ ಉರುಳಿಸಿರುವ ಸಿರಾಜ್, ಪ್ರತಿ ಓವರ್ಗೆ 4.8ರಂತೆ ರನ್ ನೀಡಿದ್ದಾರೆ. ಡೆತ್ ಓವರ್ಗಳಲ್ಲಿ 5 ವಿಕೆಟ್ ಉರುಳಿಸಿರುವ ಸಿರಾಜ್, 6.7ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ ಮೂರನೇ ಆಯ್ಕೆಯ ಬೌಲರ್ ಆಗಿ ಸದ್ಯ ಗುರುತಿಸಿಕೊಂಡಿದ್ದಾರೆ. 2022ರಿಂದ ಸಿರಾಜ್ ಜೊತೆ ಪ್ರಸಿದ್ಧ್ ಏಕದಿನ ಫಾರ್ಮೆಟ್ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮೂರೂ ಹಂತಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ..
2022ರಿಂದ ಪ್ರಸಿದ್ಧ್ ಬೌಲಿಂಗ್
ಪವರ್ ಪ್ಲೇನಲ್ಲಿ ಪ್ರಸಿದ್ಧ್, 5.8ರ ಏಕಾನಮಿ ಕಾಯ್ದುಕೊಂಡು 2 ವಿಕೆಟ್ ಉರುಳಿಸಿದ್ರೆ. ಮಿಡಲ್ ಓವರ್ಗಳಲ್ಲಿ 16 ವಿಕೆಟ್ ಬೇಟೆಯಾಡಿ, 5.1ರ ಏಕಾನಮಿ ಕಾಯ್ದಕೊಂಡಿದ್ದಾರೆ. ಇಷ್ಟೇ ಅಲ್ಲ. ಡೆತ್ ಓವರ್ನಲ್ಲಿ 5.3ರ ಏಕಾನಮಿ ಕಾಯ್ದುಕೊಂಡಿರುವ ಕನ್ನಡಿಗ 7 ವಿಕೆಟ್ ಉರುಳಿಸಿದ್ದಾರೆ. ಅಂಕಿ-ಅಂಶದ ಲೆಕ್ಕಾಚಾರ ನೋಡಿದ್ರೆ ಪೇಸ್ ಅಟ್ಯಾಕರ್ಗಳಾಗಿ ಬೂಮ್ರಾ-ಸಿರಾಜ್-ಪ್ರಸಿದ್ಧ್ ಕಣಕ್ಕಿಳಿಯುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ. ಮತ್ತೆರಡು ಪ್ರಶ್ನೆ ಕಾಡುತ್ತಿದೆ.
ಅನುಭವಿ ಮೊಹಮ್ಮದ್ ಶಮಿ-ಶಾರ್ದೂಲ್ ಕಥೆ ಏನು..?
ಬೂಮ್ರಾ, ಸಿರಾಜ್, ಹಾಗೂ ಪ್ರಸಿದ್ಧ್ ಜೋಡಿ ಕಣಕ್ಕಿಳಿದ್ರೆ, ಅನುಭವಿ ಮೊಹಮ್ಮದ್ ಶಮಿ ಹಾಗೂ ಶಾರ್ದೂಲ್ ಬೆಂಚ್ ಕಾಯಬೇಕಾಗುತ್ತೆ. ಆದ್ರೆ, ಶಮಿಯನ್ನ ಡ್ರಾಪ್ ಮಾಡೋ ಕೈ ಸುಟ್ಟುಕೊಂಡಂತೆ. ಹೊಸ ಬಾಲ್ನಲ್ಲಿ ಕಮಾಲ್ ಮಾಡೋ ಮೊಹಮ್ಮದ್ ಶಮಿ, ಕಂಡೀಷನ್ ಅನುಗುಣವಾಗಿ ಬೌಲಿಂಗ್ ಮಾಡಬಲ್ಲರು. ಜೊತೆಗೆ ಬ್ಯಾಟಿಂಗ್ಗೆ ವಿಭಾಗಕ್ಕೆ ಒಂದಿಷ್ಟು ಕೊಡುಗೆಯನ್ನು ನೀಡಬಲ್ಲರು.
ಆಲ್ರೌಂಡರ್ ಶಾರ್ದೂಲ್ ರನ್ನೂ ತಳ್ಳಿಹಾಕುವಂತಿಲ್ಲ. ಯಾಕಂದ್ರೆ, ಮಿಡಲ್ ಓವರ್ಗಳಲ್ಲಿ ವಿಕೆಟ್ ಟೇಕಿಂಗ್ ಎಬಿಲಿಟಿ ಹೊಂದಿರುವ ಶಾರ್ದೂಲ್, ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದ ಬಲವನ್ನೂ ಹೆಚ್ಚಿಸಬಲ್ಲರು. ಹೀಗಾಗಿ ಮೊಹಮ್ಮದ್ ಶಮಿ ಹಾಗೂ ಪ್ರಸಿದ್ಧ್ ಕೃಷ್ಣರನ್ನ ಓವರ್ ಟೇಕ್ ಮಾಡಿ ಶಾರ್ದೂಲ್ ಠಾಕೂರ್ ಚೆಂಡು ಹಂಚಿಕೊಂಡರು ಅಚ್ಚರಿ ಇಲ್ಲ.
ಟೀಮ್ ಇಂಡಿಯಾ ಬತ್ತಳಿಕೆಯಲ್ಲಿ ವೈರೈಟಿ ಆಫ್ ಬೌಲಿಂಗ್ ಅಪ್ಷನ್ ಇದೆ. ಹೀಗಾಗಿ ಇಂಜುರಿ ಮ್ಯಾನೇಜ್ಮೆಂಟ್ ಗಮನದಲ್ಲಿರಿಸಿಕೊಂಡು ರೊಟೇಶನ್ ಆಧಾರದಲ್ಲಿ ಚಾನ್ಸ್ ನೀಡೋ ಸಾಧ್ಯತೆ ದಟ್ಟವಾಗಿದೆ. ಟೀಮ್ ಮ್ಯಾನೇಜ್ಮೆಂಟ್ ವೇಗಿಗಳಿಗೆ ಯಾವ ಲೆಕ್ಕಾಚಾರದಲ್ಲಿ ಚಾನ್ಸ್ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್