ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಗೆಲುವು
18 ವರ್ಷಗಳ ಹಳೆಯ ದಾಖಲೆ ಮುರಿದ ಭಾರತ ತಂಡ
ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ಸಾಧನೆ
ಬ್ರಿಯಾನ್ ಲಾರಾ ಸ್ಟೇಡಿಯಮ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 200 ರನ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ ಮೂರನೇ ಮ್ಯಾಚ್ನಲ್ಲಿ 350ಕ್ಕೂ ರನ್ ಕಲೆ ಹಾಕಿತ್ತು. ಟೀಂ ಇಂಡಿಯಾ ಪರ ಇಶಾನ್ ಕಿಶನ್ 77, ಶುಭ್ಮನ್ ಗಿಲ್ 85, ಸಂಜು ಸ್ಯಾಮ್ಸನ್ 51, ಹಾರ್ದಿಕ್ ಪಾಂಡ್ಯ 70 ರನ್ ಬಾರಿಸಿದ್ದರು.
18 ವರ್ಷಗಳ ಹಳೇ ದಾಖಲೆ ಉಡೀಸ್
ವೆಸ್ಟ್ ಇಂಡೀಸ್ ಕೇವಲ 151 ರನ್ಗೆ ಆಲೌಟ್ ಆದ ಕಾರಣ ಟೀಂ ಇಂಡಿಯಾ 200 ರನ್ಗಳಿಂದ ಗೆದ್ದಿದೆ. ಗಮನಾರ್ಹ ಎಂದರೆ ಭಾರತ ತಂಡದ ಯಾರು ಶತಕ ಸಿಡಿಸಿರಲಿಲ್ಲ. ಈ ಮುನ್ನ 2005ರಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 350 ರನ್ ಗಳಿಸಿತ್ತು. ಅಂದು ಕೂಡ ಯಾವುದೇ ಬ್ಯಾಟ್ಸ್ಮನ್ ಶತಕ ಬಾರಿಸಿರಲಿಲ್ಲ. ಈಗ ಮತ್ತದೇ ಸೀನ್ ರಿಪೀಟ್ ಹಾಕಿದ್ದು, 18 ವರ್ಷಗಳ ಹಿಂದಿನ ದಾಖಲೆಯನ್ನು ಟೀಂ ಇಂಡಿಯಾ ಮುರಿದಿದೆ.
ಈ ಹಿಂದೆ 2004ರಲ್ಲಿ ಪಾಕಿಸ್ತಾನ ವಿರುದ್ಧ 349 ರನ್, ಅದೇ ವರ್ಷ ಬಾಂಗ್ಲಾದೇಶ ವಿರುದ್ಧ 348 ರನ್ ಗಳಿಸಿದ್ರೂ ಟೀಂ ಇಂಡಿಯಾದ ಪರ ಯಾವ ಬ್ಯಾಟ್ಸ್ಮನ್ ಕೂಡ ಶತಕ ದಾಖಲಿಸಿರಲಿಲ್ಲ. ಈಗ 18 ವರ್ಷಗಳ ಬಳಿಕ ಈ ದಾಖಲೆಯನ್ನು ಭಾರತ ತಂಡ ಬ್ರೇಕ್ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ