ಈತ ಸೆಂಚುರಿ ಸಿಡಿಸಿದ್ರೆ ಭಾರತಕ್ಕೆ ಸೋಲು ಅನ್ನೋದೇ ಇಲ್ಲ
ಸಿಡಿಸಿದ 10 ಸೆಂಚುರಿಯಲ್ಲಿ ಟೀಮ್ ಇಂಡಿಯಾ ವಿನ್ ಆಗಿದೆ
ಲಕ್ಕಿಮ್ಯಾನ್ ರಾಹುಲ್, ರೋಹಿತ್, ವಿರಾಟ್ ಇವರಲ್ಲಿ ಯಾರು?
ಟೀಮ್ ಇಂಡಿಯಾದಲ್ಲಿ ಓರ್ವ ಲಕ್ಕಿ ಪ್ಲೇಯರ್ ಇದ್ದಾನೆ. ಈತ ಯಾವಗೆಲ್ಲ ಸೆಂಚುರಿ ಸೆಂಚುರಿ ಸಿಡಿಸಿದ್ದಾನೋ ಆವಾಗೆಲ್ಲ ಭಾರತ ಗೆದ್ದಿದೆ. ಒಂದೂ ಸೋಲು ಅನ್ನೋದನ್ನೆ ಕಂಡಿಲ್ಲ. ಅಷ್ಟಕ್ಕೂ ಆ ಲಕ್ಕಿಮ್ಯಾನ್ ಯಾರು..? ಹೇಗೆಲ್ಲ ಲಕ್ ತಂದು ಕೊಟ್ಟಿದ್ದಾರೆ..?
ಮೊದಲ ಬ್ಯಾಟಲ್ನಲ್ಲೇ ಕೆರಿಬಿಯನ್ನರನ್ನ ಬೇಟೆಯಾಡುವಲ್ಲಿ ರೋಹಿತ್ ಶರ್ಮಾ ಆ್ಯಂಡ್ ಗ್ಯಾಂಗ್ ಯಶಸ್ವಿಯಾಗಿದೆ. ಜಸ್ಟ್ 3ನೇ ದಿನದಲ್ಲಿ ವಿಂಡೀಸ್ ಕಥೆ ಮುಗಿಸಿತು. ಇನ್ನಿಂಗ್ಸ್ ಹಾಗೂ 141 ರನ್ಗಳ ಪ್ರಚಂಡ ಗೆಲುವು ದಾಖಲಿಸಿದ ಭಾರತ ಸರಣಿಯಲ್ಲಿ 1-0 ಶುಭಾರಂಭ ಮಾಡಿದೆ. ಅಷ್ಟಕ್ಕೂ ಡೊಮಿನಿಕಾದಲ್ಲಿ ಭಾರತದಿಂದ ಡಾಮಿನೇಟಿಂಗ್ ಪ್ರದರ್ಶನ ಮೂಡಿ ಬರಲು ಕಾರಣ ಕ್ಯಾಪ್ಟನ್ ರೋಹಿತ್ ಸೂಪರ್ ಸೆಂಚುರಿ ಅನ್ನೋದನ್ನ ಮರೆಯುವಂತಿಲ್ಲ.
ಸೋಲಿನ ಮಾತೇ ಇಲ್ಲ, ಬರೀ ಗೆಲುವು ಎಲ್ಲ..!
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಓರ್ವ ಮ್ಯಾಚ್ ವಿನ್ನರ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಹಿಟ್ಮ್ಯಾನ್ ಒಮ್ಮೆ ಗಟ್ಟಿಯಾಗಿ ಕ್ರೀಸ್ಗಚ್ಚಿ ನಿಂತ್ರೆ ಸಾಕು ಭಾರತಕ್ಕೆ ಗೆಲುವು ಫಿಕ್ಸ್. ಇದಕ್ಕೆ ಡೊಮಿನಿಕಾ ಟೆಸ್ಟ್ ಬೆಸ್ಟ್ ಎಕ್ಸಾಂಪಲ್. ವಿಂಡೀಸ್ ಬೌಲರ್ಗಳನ್ನ ಬೆಂಡೆತ್ತಿದ ರೋಹಿತ್ ಅಮೋಘ 103 ರನ್ ಗಳಿಸಿ ಶೈನ್ ಆದ್ರು.
ಟೆಸ್ಟ್ ಕ್ರಿಕೆಟ್ನಲ್ಲಿ ಹಿಟ್ಮ್ಯಾನ್ 10 ಶತಕ..!
ಇದು ನಿಮಗೆ ಕೇಳೋಕೆ ಅಚ್ಚರಿ ಅನ್ನಿಸಿದ್ರೂ ಸತ್ಯ. ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಇಲ್ಲಿತನಕ ಒಟ್ಟು 10 ಶತಕಗಳನ್ನ ಬಾರಿಸಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ರೋಹಿತ್ ಶತಕ ಬಾರಿಸಿದ ಪ್ರತಿ ಪಂದ್ಯವನ್ನ ಟೀಮ್ ಇಂಡಿಯಾ ಗೆದ್ದಿದೆ. ಒಂದೇ ಒಂದು ಪಂದ್ಯವನ್ನ ಸೋತಿಲ್ಲ. ಬರೀ ಗೆಲುವಿನ ಸರಮಾಲೆಯನ್ನ ಕಟ್ಟಿದೆ.
ಟೆಸ್ಟ್ನಲ್ಲಿ ರೋಹಿತ್ ಸೆಂಚುರಿ ಸಾಧನೆ
ರೋಹಿತ್ ಶರ್ಮಾ ವೆಸ್ಟ್ಇಂಡೀಸ್ ಎದುರು ಟೆಸ್ಟ್ನಲ್ಲಿ ಚೊಚ್ಚಕ ಶತಕ ಸಿಡಿಸಿದ್ರು. ಈ ಪಂದ್ಯವನ್ನ ಭಾರತ ಗೆದ್ದಿತ್ತು. ಬಳಿಕ ಅದೇ ತಂಡದ ವಿರುದ್ಧ 111 ರನ್ ಬಾರಿಸಿದ್ರು. ಆ ಪಂದ್ಯವನ್ನೂ ಭಾರತ ಜಯಿಸಿತ್ತು. ಬಳಿಕ ಶ್ರೀಲಂಕಾ ವಿರುದ್ಧ ಕ್ರಮವಾಗಿ 102 ಹಾಗೂ 176 ರನ್ ಹೊಡೆದಿದ್ರು. ಎರಡೂ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿತ್ತು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಒಮ್ಮೆ 127 ಹಾಗೂ 212 ರನ್ ಬಾರಿಸಿದ್ರು. ಆಗಲೂ ಭಾರತ ಗೆದ್ದಿತ್ತು. ಇಂಗ್ಲೆಂಡ್ ಎದುರು ಕ್ರಮವಾಗಿ 161 ಹಾಗೂ 127 ರನ್ ಹೊಡೆದಿದ್ರು. ಆ ಎರಡು ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿತು. ಆಸ್ಟ್ರೇಲಿಯಾ ವಿರುದ್ಧ 120 ಹೊಡೆದಾಗಲೂ ಟೀಮ್ ಇಂಡಿಯಾ ವಿಕ್ಟರಿ ದಾಖಲಿಸಿತ್ತು. ಇನ್ನು ಡೊಮಿನಿಕಾದಲ್ಲಿ ವಿಂಡೀಸ್ ವಿರುದ್ಧ ಇತ್ತೀಚೆಗಷ್ಟೇ 103 ರನ್ ಬಾರಿಸಿದಾಗ ಪ್ರಚಂಡ ಗೆಲುವು ಕಂಡಿತ್ತು.
2019 ರಿಂದ ನಿಲ್ಲದ ರೋಹಿತ್ ಸೆಂಚುರಿ ಭರಾಟೆ..!
2019 ರಲ್ಲಿ ಹಿಟ್ಮ್ಯಾನ್ ಓಪನರ್ ಆಗಿ ಬಡ್ತಿ ಪಡೆದಿದ್ದೇ ಬಂತು. ರೋಹಿತ್ ಶರ್ಮಾ ಅಕ್ಷರಶಃ ರನ್ ಸುನಾಮಿಯನ್ನೆ ಎಬ್ಬಿಸಿದ್ದಾರೆ. ಸೆಂಚುರಿಗಳ ಮೇಲೆ ಸೆಂಚುರಿ ಸಿಡಿಸಿ ಎದುರಾಳಿ ತಂಡವನ್ನ ಬೆಚ್ಚಿ ಬೀಳಿಸ್ತಿದ್ದಾರೆ.
ಟೆಸ್ಟ್ನಲ್ಲಿ 2019 ರಿಂದ ರೋಹಿತ್ ಶರ್ಮಾ..!
2019 ರ ಅಕ್ಟೋಬರ್ನಿಂದ ರೋಹಿತ್ ಈವರೆಗೆ ಒಟ್ಟು 39 ಇನ್ನಿಂಗ್ಸ್ ಆಡಿದ್ದಾರೆ. ಆ ಪೈಕಿ 52.83 ರ ಎವರೇಜ್ನಲ್ಲಿ ಬರೋಬ್ಬರಿ 1,955 ರನ್ ಚಚ್ಚಿದ್ದಾರೆ. ಇದ್ರಲ್ಲಿ 7 ಅಮೋಘ ಸೆಂಚುರಿ ಹಾಗೂ 4 ಹಾಫ್ಸೆಂಚುರಿ ಮೂಡಿಬಂದಿವೆ.
ಸದ್ಯ ರೋಹಿತ್ ಶರ್ಮಾ ಕೆರಳಿದ ಸಿಂಹವಾಗಿದ್ದು, ಎದುರಾಳಿ ಮೇಲೆ ಸವಾರಿ ನಡೆಸಿ ರನ್ ಗುಡ್ಡೆ ಹಾಕ್ತಿದ್ದಾರೆ. ಸೆಂಚುರಿ ಸಿಡಿಸಿ ತಂಡವನ್ನ ಗೆಲ್ಲಿಸಿ ಕೊಡೋದಲ್ಲದೇ ತಾನೋರ್ವ ಲಕ್ಕಿಮ್ಯಾನ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ