newsfirstkannada.com

ರೋಹಿತ್​, ದ್ರಾವಿಡ್​ಗೆ ಟೆನ್ಷನ್ ಶುರು.. 12 ಗೇಮ್​ನಲ್ಲಿ ವಿಶ್ವಕಪ್​ಗೆ ಬಲಿಷ್ಠ ಟೀಮ್ ರೆಡಿ ಮಾಡೋದು ಹೇಗೆ..?

Share :

28-07-2023

    12 ಪಂದ್ಯದಲ್ಲಿ ತಂಡ ಸೆಲೆಕ್ಟ್​​ ಮಾಡೋಕೆ ಆಗುತ್ತಾ ಇವರಿಗೆ?

    ಬೇಕಿರೋದು 15 ಆಟಗಾರರು ಮಾತ್ರ, ರೇಸ್​​ನಲ್ಲಿ 43 ಪ್ಲೇಯರ್ಸ್​

    ವಿಕೆಟ್ ಕೀಪಿಂಗ್, ಮಿಡಲ್ ಆರ್ಡರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ

ಒನ್ಡೇ ವಿಶ್ವಕಪ್​ ಫೆಸ್ಟಿವಲ್ ಬಂದೇ ಬಿಡ್ತು. ಇನ್ನೆರಡು ತಿಂಗಳಲ್ಲಿ ವಿಶ್ವಕಪ್​ ಬ್ಯಾಟಲ್​​​ಗೆ ಗ್ರ್ಯಾಂಡ್​ ಕಿಕ್ ಸಿಗಲಿದೆ. ಆದರೆ ಮಹಾಸಮರ ಸಮೀಪಿಸ್ತಿದ್ದಂತೆ ಕ್ಯಾಪ್ಟನ್​ ರೋಹಿತ್ ಶರ್ಮಾ, ಹೆಡ್​ಕೋಚ್​ ರಾಹುಲ್​ ದ್ರಾವಿಡ್​ಗೆ ಟೆನ್ಷನ್ ಶುರುವಾಗಿದೆ. ಜಸ್ಟ್​ 12 ಗೇಮ್​​​ನಲ್ಲಿ ವಿಶ್ವಕಪ್​ಗೆ ಬಲಿಷ್ಠ ತಂಡವನ್ನು ಕಟ್ಟುವ ಇಕ್ಕಟ್ಟಿಗೆ ಸಿಲುಕಿದ್ದಾರೆ.

2023ರ ಒನ್ಡೇ ವಿಶ್ವಕಪ್​​ಗೆ ಡೇಟ್ ಆಲ್​ರೆಡಿ ಅನೌನ್ಸ್ ಆಗಿದೆ. ವೆಸ್ಟ್​ ಇಂಡೀಸ್ ಎದುರಿನ ಏಕದಿನ ಸರಣಿಯಿಂದ ಟೀಮ್ ಇಂಡಿಯಾ ವಿಶ್ವಕಪ್ ಅಖಾಡಕ್ಕೆ ಧುಮುಕಿದ್ದೂ ಆಗಿದೆ. ವಿಶ್ವಕಪ್​​ನಲ್ಲಿ ಭಾರತದ ಮೊದಲ ಎದುರಾಳಿ ಯಾರು ಅನ್ನೋದು ಗೊತ್ತಾಗಿದೆ. ಆದರೆ ವಿಶ್ವಕಪ್​​ ಆಡುವ ಫೈನಲ್​​ 15 ಆಟಗಾರರು ಯಾರು ಅನ್ನೋದು ಮಾತ್ರ ಇನ್ನೂ ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿದಿದೆ.

ಟೀಮ್ ಇಂಡಿಯಾ ಸದ್ಯ ವಿಶ್ವಕಪ್​ ಎಂಡ್​ಗೇಮ್​​​​ನಲ್ಲಿದೆ. ರೋಹಿತ್ ಶರ್ಮಾ ಪಡೆ ಮಹಾ ಅಖಾಡಕ್ಕೂ ಮುನ್ನ ಕರೆಕ್ಟಾಗಿ 12 ಒನ್ಡೇ ಮ್ಯಾಚಸ್ ಆಡಲಿದೆ. ವಿಂಡೀಸ್​ ಎದುರು 3, ಏಷ್ಯಾಕಪ್​​​​​​​​ ಸೂಪರ್​​​​​​ 4 ಹಾಗೂ ಫೈನಲ್​​ ಆಡಿದ್ರೆ 6 ಮತ್ತು ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಬಳಿಕ ನೇರವಾಗಿ ವಿಶ್ವಕಪ್​​​​​​ ಕದನಕ್ಕೆ ಎಂಟ್ರಿಕೊಡಲಿದೆ. ಆದರೆ ಕ್ರಿಕೆಟ್​ ಮಹಾಜಾತ್ರೆ ಸಮೀಪಿಸ್ತಿದ್ರೂ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಮಾತ್ರ ವಿಶ್ವಕಪ್ ಆಡುವ ಅಂತಿಮ ತಂಡದ ಬಗ್ಗೆ ಇನ್ನೂ ಕ್ಲಾರಿಟಿನೇ ಇಲ್ಲ.

‘ವಿಶ್ವಕಪ್​ ಮುನ್ನ 11-12 ಪಂದ್ಯ ಆಡಲಿದ್ದೇವೆ’

ವಿಂಡೀಸ್ ವಿರುದ್ಧ 3 ಏಕದಿನ ಸರಣಿ ಆಡುತ್ತೇವೆ. ಏಷ್ಯಾಕಪ್​​ನಲ್ಲಿ 5-6 ಪಂದ್ಯ ಆಡುವ ಅವಕಾಶ ಸಿಗಲಿದೆ. ಬಳಿಕ ಆಸ್ಟ್ರೇಲಿಯಾ ವಿರುದ್ಧ, ಒಟ್ಟಾರೆ ವಿಶ್ವಕಪ್ ಮುನ್ನ 11-12 ಏಕದಿನ ಪಂದ್ಯಗಳನ್ನ ಆಡಲಿದ್ದೇವೆ. ಯಾರು ತಂಡದಲ್ಲಿ ಇರಬೇಕು ಎಂಬುದನ್ನ ಅರ್ಥಮಾಡಿಕೊಳ್ಳಲು ಇದು ಯೋಗ್ಯ ಸಮಯ. ವಿಂಡೀಸ್ ಸರಣಿ ಬಹಳ ಮುಖ್ಯ. ಏಕೆಂದರೆ ಅನಾನುಭವಿ ಆಟಗಾರರು ಇರುವುದರಿಂದ ಅವರಿಗೆ ಯಾವ ಪಾತ್ರ ನೀಡಬೇಕು? ಏನು ಅಗತ್ಯವಿದೆ ಎಂಬುದನ್ನ ಅರ್ಥೈಸಿಕೊಳ್ಳಲು ಸಹಕಾರಿ ಆಗಲಿದೆ.

ಆಯ್ಕೆನೆ ತಲೆನೋವು, ಫೈನಲಿ ಯಾರಿಗೆ ಹಾಕ್ತಾರೆ ಮಣೆ..?

ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದಂತೆ ವಿಶ್ವಕಪ್​​ಗೆ ತಂಡವನ್ನ ಸೆಲೆಕ್ಟ್ ಮಾಡೋದು ಸುಲಭದ ಮಾತಲ್ಲ. ವೆರಿ ವೆರಿ ಟಫ್ ಚಾಲೆಂಜ್​​. ಯಾಕಂದ್ರೆ ರೇಸ್​​ನಲ್ಲಿ 43 ಆಟಗಾರರಿದ್ದಾರೆ. ಆದ್ರೆ ಫೈನಲಿ ಆಯ್ಕೆಯಾಗೋದು ​ಜಸ್ಟ್​​​​ 15 ಪ್ಲೇಯರ್ಸ್​ ಮಾತ್ರ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರೋದು ಟೀಮ್​ ಮ್ಯಾನೇಜ್​​ಮೆಂಟ್​​​ ಮತ್ತು ಆಯ್ಕೆ ಸಮಿತಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದೊಂದು ಸ್ಥಾನಕ್ಕೆ ಎರಡರಿಂದ ಮೂರು ಆಟಗಾರರ ನಡುವೆ ಪೈಪೋಟಿ ಇದೆ. ಇವರಲ್ಲಿ ಯಾರನ್ನ ಆಯ್ಕೆ ಮಾಡಬೇಕು? ಯಾರನ್ನ ಕೈಬಿಡಬೇಕು? ಅನ್ನೋದು ದೊಡ್ಡ ಹೆಡ್​​​​​ಹೆಕ್​ ಆಗಿದೆ.

ಯಾವೆಲ್ಲ ಕೀ ಪ್ಲೇಯರ್ಸ್​ ವಿಶ್ವಕಪ್​​ನಲ್ಲಿ ಆಡ್ತಾರೆ..?

ಇನ್ನು ವಿಶ್ವಕಪ್ ಸಮೀಪಿಸಿದ್ರೂ ಕೀ ಪ್ಲೇಯರ್​ ಲಭ್ಯತೆ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಜಸ್​​ಪ್ರೀತ್ ಬುಮ್ರಾ, ಕೆ.ಎಲ್ ರಾಹುಲ್​​​​​, ಶ್ರೇಯಸ್ ಅಯ್ಯರ್​​​​​, ರಿಷಬ್​ ಪಂತ್ ಹಾಗೂ ಪ್ರಸಿದ್ಧ್​ ಕೃಷ್ಣ ಆಯ್ಕೆ ನಿಗೂಢವಾಗಿದೆ. ಇವರನ್ನ ವಿಶ್ವಕಪ್​​ನಲ್ಲಿ ಆಡಿಸಿದ್ರೂ ಕಷ್ಟ, ಆಡಿಸದಿದ್ರು ಕಷ್ಟ. ಯಾಕಂದ್ರೆ ಕಮ್​ಬ್ಯಾಕ್ ಬಳಿಕ ಇವರೆಲ್ಲ ಎಷ್ಟರ ಮಟ್ಟಿಗೆ ಫಿಟ್ ಆಗಿರ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ. ಆತುರವಾಗಿ ಆಡಿಸಿದ್ರೆ ಮತ್ತೆ ಇಂಜುರಿಗೆ ತುತ್ತಾಗುವ ಸಾಧ್ಯತೆ ಇರುತ್ತೆ. ಹಾಗಂತ ಆಡಿಸದೇ ಬಿಟ್ರೆ ಟೀಮ್ ಬ್ಯಾಲೆನ್ಸ್​​ ತಪ್ಪಲಿದೆ.

ಮಿಡಲ್ ಆರ್ಡರ್​​​ ಆಯ್ಕೆನೇ ಕಗ್ಗಂಟು

ಸದ್ಯ 15 ಆಟಗಾರರ ಪೈಕಿ ಕ್ಯಾಪ್ಟನ್ ರೋಹಿತ್ ಶರ್ಮಾ, ಶುಭ್​​ಮನ್ ಗಿಲ್​ ಹಾಗೂ ವಿರಾಟ್ ಕೊಹ್ಲಿ ಟಾಪ್-ತ್ರಿ ನಲ್ಲಿ ಆಡೋದು ಫಿಕ್ಸ್​​. ಅದನ್ನ ಹೊರತಪಡಿಸಿದ್ರೆ ಮಿಡಲ್ ಆರ್ಡರ್​​​​​​​ ಹಾಗೂ ವಿಕೆಟ್ ಕೀಪಿಂಗ್​​ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಶ್ರೇಯಸ್, ರಾಹುಲ್​ ವಿಶ್ವಕಪ್ ಆಡ್ತಾರಾ ? ಒಂದು ವೇಳೆ ಆಡಿದ್ರೆ ಸೂರ್ಯಕುಮಾರ್​ ಯಾದವ್ ಕಥೆ ಏನು ? ಅನ್ನೋದು ಯಕ್ಷಪ್ರಶ್ನೆಯಾಗಿದೆ.

ಇನ್ನು ವಿಕೆಟ್​​​ ಕೀಪರ್ ಆಯ್ಕೆನೂ ಕಗ್ಗಂಟಾಗಿದೆ. ಒಂದು ವೇಳೆ ಕೆಎಲ್ ರಾಹುಲ್​ ವಿಶ್ವಕಪ್​​​​​​​ ಆಡಿದ್ರೆ ಕೀಪಿಂಗ್ ಸ್ಥಾನಕ್ಕಾಗಿ ರಾಹುಲ್​​​​, ಸಂಜು ಸ್ಯಾಮ್ಸನ್​ ಹಾಗೂ ಇಶಾನ್ ಕಿಶನ್​ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಕನ್ನಡಿಗ ರಾಹುಲ್ ಫಸ್ಟ್ ಚಾಯ್ಸ್​ ಅನ್ನಿಸಿದ್ರೂ ಬ್ಯಾಕ್​​​​​​ಅಪ್​ಗಾಗಿ ಸ್ಯಾಮ್ಸನ್ ಹಾಗೂ ಕಿಶನ್​​​ ನಡುವೆ ಬಿಗ್​ ಫೈಟ್ ನಡೆಯೋದು ಗ್ಯಾರಂಟಿ.

ವಿಶ್ವಕಪ್​​ ಎಂಡ್​​ಗೇಮ್​​​ನಲ್ಲಿರೋ ಭಾರತಕ್ಕೆ ಟೀಮ್​​​​ ಆಯ್ಕೆ ಉರುಳಾಗಿ ಪರಿಣಮಿಸಿದೆ. ಉಳಿದಿರೋ 12 ಪಂದ್ಯದಲ್ಲೇ ತಂಡವನ್ನ ಫೈನಲ್ ಮಾಡಬೇಕಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ಹೆಡ್​ಕೋಚ್ ರಾಹುಲ್​ ದ್ರಾವಿಡ್​ ಹಾಗೂ ಚೀಫ್​​​ ಸೆಲೆಕ್ಟರ್ ಅಜಿತ್​​ ಅಗರ್ಕರ್ ಈ ಹೊರೆಯನ್ನ ಹೇಗೆ ನಿಭಾಯಿಸ್ತಾರೆ ಅನ್ನೋದೇ ಸದ್ಯಕ್ಕಿರೋ ಯಕ್ಷಪ್ರಶ್ನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​, ದ್ರಾವಿಡ್​ಗೆ ಟೆನ್ಷನ್ ಶುರು.. 12 ಗೇಮ್​ನಲ್ಲಿ ವಿಶ್ವಕಪ್​ಗೆ ಬಲಿಷ್ಠ ಟೀಮ್ ರೆಡಿ ಮಾಡೋದು ಹೇಗೆ..?

https://newsfirstlive.com/wp-content/uploads/2023/07/ROHIT_SHARMA_RAHUL_DRAVID.jpg

Load More