ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಖಡಕ್ ಎಚ್ಚರಿಕೆ
ದೇಶೀಯ ಕ್ರಿಕೆಟ್ ಆಡುವಂತೆ ವಾರ್ನಿಂಗ್ ಕೊಟ್ಟ ಬಿಸಿಸಿಐ..!
ಬಿಸಿಸಿಐ ವಾರ್ನಿಂಗ್ ಬೆನ್ನಲ್ಲೇ ಎಚ್ಚೆತ್ತ ಕ್ಯಾಪ್ಟನ್ ರೋಹಿತ್ ಶರ್ಮಾ
ಟೀಮ್ ಇಂಡಿಯಾ ಇತ್ತೀಚೆಗಷ್ಟೇ ಶ್ರೀಲಂಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದೆ. ಶ್ರೀಲಂಕಾ ಪ್ರವಾಸ ಮುಗಿಯುತ್ತಿದ್ದಂತೆ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ 5 ವಾರಗಳ ರೆಸ್ಟ್ ನೀಡಿದೆ. ಹಾಗಾಗಿ ಈ ಸಂದರ್ಭವನ್ನು ಸದುಪಯೋಗ ಮಾಡಿಕೊಳ್ಳಲು ಟೀಮ್ ಇಂಡಿಯಾ ಆಟಗಾರರು ತಮ್ಮದೇ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕೆಲವರು ಸ್ಟಾರ್ ಆಟಗಾರರು ದೇಶೀಯ ಕ್ರಿಕೆಟ್ ಆಡಲು ಮುಂದಾಗಿದ್ದಾರೆ.
ಸದ್ಯ ಲಭ್ಯವಾಗಿರೋ ಮಾಹಿತಿ ಪ್ರಕಾರ ಟೀಮ್ ಇಂಡಿಯಾ ಆಟಗಾರರು ವಿಶ್ರಾಂತಿ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆದ್ದರಿಂದ ಸ್ಟಾರ್ ಆಟಗಾರರೇ ದೇಶೀಯ ಟೂರ್ನಿಯಲ್ಲಿ ಭಾಗವಹಿಸಲು ಸಿದ್ಧರಾಗುತ್ತಿದ್ದಾರೆ. ಸೆಪ್ಟಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯಾವಳಿ ಆರಂಭವಾಗಲಿದೆ. ಇದಕ್ಕೂ ಮುನ್ನ ದುಲೀಪ್ ಟ್ರೋಫಿ ನಡೆಯಲಿದ್ದು, ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ!
ಸುಮಾರು 8 ವರ್ಷಗಳ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ ಗೌತಮ್ ಗಂಭೀರ್ ಕ್ಯಾಪ್ಟನ್ಸಿಯಲ್ಲಿ 2016ರಲ್ಲಿ ಇಂಡಿಯಾ ಬ್ಲ್ಯೂ ತಂಡದ ಪರ ಬ್ಯಾಟ್ ಮಾಡಿದ್ದರು. ಈ ಬಾರಿ ಎಲ್ಲ ಸ್ಟಾರ್ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡುವ ಮೂಲಕ ಮಹತ್ವದ ಪಂದ್ಯಗಳಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಬಿಸಿಸಿಐನಿಂದ ಖಡಕ್ ವಾರ್ನಿಂಗ್
ದುಲೀಪ್ ಟ್ರೋಫಿಗೆ ಎಲ್ಲಾ ಆಟಗಾರರು ಲಭ್ಯ ಇರಬೇಕು ಎಂದು ಬಿಸಿಸಿಐ ಈಗಾಗಲೇ ಖಡಕ್ ವಾರ್ನಿಂಗ್ ನೀಡಿದೆ. ಸದ್ಯದಲ್ಲೇ ಭಾರತ ಎ, ಇಂಡಿಯಾ ಬಿ, ಇಂಡಿಯಾ ಸಿ ಮತ್ತು ಇಂಡಿಯಾ ಡಿ ತಂಡಗಳನ್ನು ರಚನೆ ಮಾಡಲಾಗುವದು. ಹಾಗಾಗಿ ಈ ಟೂರ್ನಿಯಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಸೂಚನೆ ಕೊಡಲಾಗಿದೆ. ಹಾಗಾಗಿ ಎಚ್ಚೆತ್ತ ರೋಹಿತ್ ಶರ್ಮಾ ಕೂಡ ಈ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಬಿಸಿಸಿಐ ಖಡಕ್ ವಾರ್ನಿಂಗ್ ಬೆನ್ನಲ್ಲೇ ಎಚ್ಚೆತ್ತ ವಿರಾಟ್.. ಕೊಹ್ಲಿಯಿಂದ ಮಹತ್ವದ ನಿರ್ಧಾರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ