newsfirstkannada.com

ಧೋನಿ-ಕೊಹ್ಲಿ​ಗೆ ಹೋಲಿಸಿದ್ರೆ ರೋಹಿತ್​ ಶರ್ಮಾ​​ ಆಸ್ತಿ ಎಷ್ಟು? ಕ್ರಿಕೆಟ್​ನಿಂದ ಕೋಟಿ, ಕೋಟಿ ಗಳಿಸ್ತಾರೆ ಕ್ಯಾಪ್ಟನ್​

Share :

14-08-2023

  ಕ್ರಿಕೆಟ್​ನಿಂದ ಮಾತ್ರವಲ್ಲ, ಜಾಹೀರಾತುಗಳಿಂದ ಹಣ ಗಳಿಕೆ

  ವರ್ಷಕ್ಕೆ ಎಷ್ಟು ಕೋಟಿ ರೂಪಾಯಿ ಜೇಬಿಗಿಳಿಸ್ತಾರೆ ಕ್ಯಾಪ್ಟನ್?

  ವರ್ಷದಿಂದ ವರ್ಷಕ್ಕೆ ಆಕಾಶಕ್ಕೇರ್ತಿದೆ ಮುಂಬೈಕರ್ ಸಂಪತ್ತು

ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್​​ನ ಹಿಟ್​ಮ್ಯಾನ್​. ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅಸಾಧ್ಯವಾದ ದಾಖಲೆಗಳನ್ನ ಬರೆದಿರುವ ಮಹಾವೀರ. ಲೆಕ್ಕ ವಿಲ್ಲದಷ್ಟು ದಾಖಲೆ, ಅಸಾಧ್ಯವಾದುದನ್ನ ಸಾಧಿಸಿರುವ ರೋಹಿತ್​, ಖ್ಯಾತಿ ವಿಶ್ವದಗಲಕ್ಕೂ ಹರಡಿದೆ. ಇದ್ರ ಜೊತೆಗೆ ಮುಂಬೈಕರ್​​ ಗಳಿಕೆಯು ವರ್ಷದಿಂದ ವರ್ಷಕ್ಕೆ ಆಕಾಶಕ್ಕೇರಿದೆ. ಅಷ್ಟಕ್ಕೂ ರೋಹಿತ್​ರ​ ಒಟ್ಟು ಆಸ್ತಿ ಎಷ್ಟು?

ರೋಹಿತ್ ಶರ್ಮಾ​.. ಕ್ರಿಕೆಟ್​ ಜಗತ್ತಿನ ಒನ್​ ಆ್ಯಂಡ್ ಒನ್ಲಿ ಹಿಟ್​​ಮ್ಯಾನ್​.. ಮಾಡ್ರನ್ ಡೇ ಕ್ರಿಕೆಟ್​ನ ಲೆಂಜೆಂಡರಿ ಕ್ರಿಕೆಟರ್​.. ವೈಟ್​ ಬಾಲ್​​​ ಕ್ರಿಕೆಟ್​ನ ಬೆಸ್ಟ್​ ಸ್ಟ್ರೈಕರ್ ಆಗಿರೋ ರೋಹಿತ್, ವಿಶ್ವ ಕ್ರಿಕೆಟ್​ನಲ್ಲಿ ಮಾಡಿರೋ ಮೋಡಿ ನಿಜಕ್ಕೂ ಅದ್ಭುತ.

ಕ್ಯಾಪ್ಟನ್​ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

ಡಬಲ್ ಸೆಂಚುರಿಗಳ ಸಾಮ್ರಾಟನಾಗಿ ಪರಿಚಿತನಾಗಿರುವ ರೋಹಿತ್, ಕ್ರಿಕೆಟ್​ ಲೋಕದ ಮೋಸ್ಟ್​ ಡೇಂಜರಸ್ ಬ್ಯಾಟ್ಸ್​ಮನ್​ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸಕ್ಸಸ್​​ಫುಲ್ ಓಪನರ್ ಆಗಿ ನಾಯಕನಾಗಿ ಗುರುತಿಸಿಕೊಂಡಿರುವ ರೋಹಿತ್​ ಖ್ಯಾತಿ ವಿಶ್ವದಲ್ಲೆಲ್ಲ ಹರಡಿದೆ. ಐಪಿಎಲ್​​ನಲ್ಲಿ 5 ಬಾರಿ ಮುಂಬೈ ಇಂಡಿಯನ್ಸ್​ಗೆ ಟ್ರೋಫಿ ಗೆದ್ದು ಕೊಟ್ಟಿರುವ ಹಿಟ್​ಮ್ಯಾನ್, ಈಗ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರರಲ್ಲಿ ಒಬ್ಬರು.

ಎಷ್ಟು ಕೋಟಿ ಒಡೆಯ ಟೀಮ್ ಇಂಡಿಯಾ ನಾಯಕ​..?

ಹಿಟ್​ಮ್ಯಾನ್​ ರೋಹಿತ್​ ಓರ್ವ ಸಕ್ಸಸ್​​ಫುಲ್ ಕ್ಯಾಪ್ಟನ್ ಮಾತ್ರವಲ್ಲ. ಟೀಮ್ ಇಂಡಿಯಾದ ಶ್ರೀಮಂತ ಕ್ರಿಕೆಟರ್​​ ಕೂಡ. ವಿರಾಟ್ ಕೊಹ್ಲಿ ಹಾಗೂ ಧೋನಿಯ ಆಸ್ತಿ ಮೌಲ್ಯ 1,000 ಕೋಟಿಗೂ ಅಧಿಕವಾಗಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಕಿಂಗ್ ಕೊಹ್ಲಿಗೆ ಹೋಲಿಸಿದ್ರೆ. ರೋಹಿತ್ ಶರ್ಮಾ ಗಳಿಕೆ, ಸರಿ ಸುಮಾರು 5 ಪಟ್ಟು ಕಡಿಮೆ. ಸದ್ಯದ ಮಾಹಿತಿ ಪ್ರಕಾರ ರೋಹಿತ್​ ಒಟ್ಟಾರೆ ಆಸ್ತಿ ಮೌಲ್ಯ ಸುಮಾರು 214 ಕೋಟಿ ರೂಪಾಯಿ ಆಗಿದೆ.

ಬ್ಯುಸಿನೆಸ್​​​​​​​​​, ಎಂಡೋರ್ಸ್​ಮೆಂಟ್​​ಗಳಿಂದ ಕೋಟಿ ಕೋಟಿ ಹಣ ರೋಹಿತ್​ ಖಜಾನೆ ಸೇರುತ್ತೆ. ಒಂದೊಂದು ಕ್ರಿಕೆಟ್​ ಪಂದ್ಯದಿಂದ ಲಕ್ಷ-ಲಕ್ಷ ಹಣಗಳಿಸೋ ಹಿಟ್​ಮ್ಯಾನ್​​, ಕ್ರಿಕೆಟ್​ ಮೂಲದಿಂದ ವಾರ್ಷಿಕವಾಗಿ ಕೋಟಿ – ಕೋಟಿ ಹಣವನ್ನ ಗಳಿಸ್ತಾರೆ.

ಕ್ರಿಕೆಟ್ ಮೂಲದ ಆದಾಯ ಎಷ್ಟು..?

ಬಿಸಿಸಿಐ ಕಾಂಟ್ರಾಕ್ಟ್​​ನಲ್ಲಿ ಎ+ ಗ್ರೇಡ್​​​ನಲ್ಲಿರುವ ರೋಹಿತ್​, ವಾರ್ಷಿಕ 7 ಕೋಟಿ ಸ್ಯಾಲರಿ ಜೇಬಿಗೆ ಇಳಿಸಿದ್ರೆ, ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ, ಏಕದಿನ ಪಂದ್ಯಕ್ಕೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ಪಡೆಯುತ್ತಾರೆ. ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್​​, ಪ್ರತಿ ಆವೃತ್ತಿಗೆ 16 ಕೋಟಿ ರೂಪಾಯಿ ಜೇಬಿಗಿಳಿಸುತ್ತಾರೆ. ಒಟ್ಟಾರೆ ಕ್ರಿಕೆಟ್‌ನಿಂದ ವಾರ್ಷಿಕ 30 ಕೋಟಿ ಗಳಿಸುತ್ತಿದ್ದಾರೆ.

ಕ್ರಿಕೆಟ್​ನಿಂದ ಮಾತ್ರವೇ ಅಲ್ಲ, ಕ್ರಿಕೆಟ್ ಹೊರತಾಗಿಯೂ ಹಿಟ್​​ಮ್ಯಾನ್ ಕೋಟಿ ಕೋಟಿ ಗಳಿಸುತ್ತಾರೆ. ಬರೋಬ್ಬರಿ 28 ಬ್ರಾಂಡ್​​ಗಳ ರಾಯಭಾರಿಯಾಗಿರುವ ರೋಹಿತ್​, ಜಾಹೀರಾತುಗಳಿಂದ ವಾರ್ಷಿಕ ಗಳಿಕೆ ಕೋಟಿ ಲೆಕ್ಕದಲ್ಲೆ ಇದೆ. ಅಡಿಡಾಸ್​, HUBLOT, CEAT, Go IBIBO ಸೇರಿದಂತೆ ಹಲವು ಪ್ರತಿಷ್ಟಿತ ಕಂಪನಿಗಳ ಬ್ರ್ಯಾಂಡ್​ ಅಂಬಾಸಿಡರ್​​ ಆಗಿದ್ದಾರೆ.

ರೋಹಿತ್ ಹೂಡಿಕೆ ಎಲ್ಲೆಲ್ಲಿ..?

ಇನ್ನು, ಸ್ವತಃ ಬ್ಯುಸಿನೆಸ್​ ಮ್ಯಾನ್​ ಆಗಿರುವ ರೋಹಿತ್​, ಹಲವು ಮೂಲಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಮುಂಬೈನ ವೊರ್ಲಿಯಲ್ಲಿ 30 ಕೋಟಿ ರೂ. ಮೌಲ್ಯದ 4BHK ಅಪಾರ್ಟ್ಮೆಂಟ್​​ವೊಂದಿರುವ ರೋಹಿತ್, ಈ ಹಿಂದೆ ಲೋನಾವಾಲದಲ್ಲಿ 5 ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನ ಮಾರಾಟ ಮಾಡಿದ್ದಾರೆ. ಇದಿಷ್ಟೇ ಅಲ್ಲ.! ರಾಪಿಡ್​ಬೊಟಿಕ್ಸ್ ಹಾಗೂ ವೆರೊಟ್ಸ್ ವೆಲ್ನೆಸ್ ಸೊಲ್ಯೂಷನ್ಸ್ ಎಂಬ ಹೆಲ್ತ್‌ಕೇರ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಮಾಜಿ ಕ್ಯಾಪ್ಟನ್ ಧೋನಿ

ಒಂದು ವರ್ಷಕ್ಕೆ ಆನ್​ಫೀಲ್ಡ್​ ಹಾಗೂ ಆಫ್​ ಫೀಲ್ಡ್​ನಿಂದ ಕೋಟಿ ಕೋಟಿಗಳಿಸೋ ರೋಹಿತ್​ ಜೀವನ ಕೂಡ ಭಾರೀ ಐಷಾರಾಮಿಯಾಗಿದೆ. ಲ್ಯಾಂಬೋರ್ಗಿನಿ ಉರಸ್, ಮರ್ಸಿಡಿಸ್ ಬೆಂಜ್ GLS 350 d, A BMW X3 ನಂತಹ ಐಷಾರಾಮಿ ಕಾರುಗಳ ಜೊತೆ ಮಾರುತಿ ಸುಜುಕಿಯ 2 ಕಾರುಗಳಿಗೂ ಹಿಟ್​ಮ್ಯಾನ್​​ ಮಾಲೀಕರಾಗಿದ್ದಾರೆ.

ಬ್ಯಾಟಲ್​ ಫೀಲ್ಡ್​​ನಲ್ಲಿ ಎದುರಾಳಿ ಪಡೆಯನ್ನ ಸಿಂಹ ಸ್ವಪ್ನದಂತೆ ಕಾಡೋ ರೋಹಿತ್​ ಶರ್ಮಾ, ಅಸಾಧ್ಯವಾದ ಸಾಧನೆ ಮಾಡಿದ್ದಾರೆ. ಐಪಿಎಲ್​ ಅಖಾಡದಲ್ಲಿ ಸಕ್ಸಸ್​ಫುಲ್​ ಕ್ಯಾಪ್ಟನ್​ ಅನ್ನೋ ಪಟ್ಟ ದಕ್ಕಿಸಿಕೊಂಡಿದ್ದಾರೆ. ಆನ್​​ಫೀಲ್ಡ್​​ನಲ್ಲಿ ಕಂಡ ಯಶಸ್ಸಿಗೆ ಸಿಕ್ಕ ರಿವಾರ್ಡೇ ಈ ದಾಖಲೆಯ ಆದಾಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ-ಕೊಹ್ಲಿ​ಗೆ ಹೋಲಿಸಿದ್ರೆ ರೋಹಿತ್​ ಶರ್ಮಾ​​ ಆಸ್ತಿ ಎಷ್ಟು? ಕ್ರಿಕೆಟ್​ನಿಂದ ಕೋಟಿ, ಕೋಟಿ ಗಳಿಸ್ತಾರೆ ಕ್ಯಾಪ್ಟನ್​

https://newsfirstlive.com/wp-content/uploads/2023/08/ROHIT_KOHLI_DHONI.jpg

Load More