newsfirstkannada.com

ಟೀಮ್​ ಇಂಡಿಯಾ ಕ್ಯಾಪ್ಟನ್​​ ಆಗಲು ಕೆ.ಎಲ್​​ ರಾಹುಲ್​​ ಪರ ಕೋಚ್​​ ಗಂಭೀರ್​​ ಒಲವು.. ಕಾರಣವೇನು?

Share :

Published July 10, 2024 at 5:46pm

  ಜಿಂಬಾಬ್ವೆ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ

  ಭಾರತ, ಶ್ರೀಲಂಕಾ ಮಧ್ಯೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ!

  ಟೀಮ್​ ಇಂಡಿಯಾ ನಾಯಕತ್ವಕ್ಕಾಗಿ ರಾಹುಲ್​​, ಹಾರ್ದಿಕ್​ ಮಧ್ಯೆ ಫೈಟ್​​

ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶ್ರೀಲಂಕಾ ಪ್ರವಾಸದಲ್ಲಿ ಟೀಮ್​​ ಇಂಡಿಯಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೆ ರೋಹಿತ್​ ಶರ್ಮಾ ಅಲಭ್ಯರಾಗಿದ್ದು, ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಬ್ಯಾಟರ್​​ ಕೆ.ಎಲ್​​ ರಾಹುಲ್​​​ ಕ್ಯಾಪ್ಟನ್​ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಜುಲೈ 27ನೇ ತಾರೀಕಿನಿಂದ ಶುರುವಾಗಲಿರೋ ಪ್ರವಾಸಕ್ಕೆ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಈಗಾಗಲೇ ಟೀಮ್​ ಇಂಡಿಯಾ ಹೊಸ ಕೋಚ್​​ ಆಗಿ ಗೌತಮ್​​ ಗಂಭೀರ್​ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್​ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ರೆಸ್ಟ್​ ನೀಡಿರೋ ಕಾರಣ ತಂಡದ ಆಯ್ಕೆಯಲ್ಲಿ ಹೆಚ್ಚು ಬದಲಾವಣೆ ಇರಲಿದೆ.

ಸದ್ಯದ ಮಾಹಿತಿ ಪ್ರಕಾರ ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಹಾರ್ದಿಕ್​ ಪಾಂಡ್ಯ ಮುನ್ನಡೆಸಲಿದ್ದಾರೆ. ಏಕದಿನ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾದ ಕ್ಯಾಪ್ಟನ್​​ ಕೆ.ಎಲ್​ ರಾಹುಲ್​ ಆಗಲಿದ್ದಾರೆ. ಹಾರ್ದಿಕ್​​, ರಾಹುಲ್​ ಇಬ್ಬರು ಬಿಸಿಸಿಐ ಮೊದಲ ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಉಪ ನಾಯಕ ಹಾರ್ದಿಕ್​ ಪಾಂಡ್ಯ ಅವರೇ ಎರಡು ಫಾರ್ಮೇಟ್​ಗಳಲ್ಲಿ ಕ್ಯಾಪ್ಟನ್​ ಆಗಲಿ ಅನ್ನೋ ಚರ್ಚೆ ಕೂಡ ಇದೆ. ಹಾಗಾಗಿ ಈ ವಿಚಾರವಾಗಿ ಟೀಮ್​ ಇಂಡಿಯಾದ ಹೊಸ ಕೋಚ್​​ ಗೌತಮ್​ ಗಂಭೀರ್​​ ವೀಕೆಂಡ್​ ಮೀಟಿಂಗ್ ಕರೆದಿದ್ದಾರೆ.

ಯಾರ ಪರ ಗಂಭೀರ್​​ ಒಲವು..!

ಕೆ.ಎಲ್​ ರಾಹುಲ್​​ ಮತ್ತು ಗೌತಮ್​ ಗಂಭೀರ್​​ ಮಧ್ಯೆ ಆರಂಭದಿಂದಲೂ ಒಳ್ಳೆ ಟೆಂಪೋ ಇದೆ. ಇಬ್ಬರು ಒಟ್ಟಿಗೆ ಲಕ್ನೋ ಸೂಪರ್​ ಜೈಂಟ್ಸ್​ ತಂಡದಲ್ಲಿ ಕೆಲಸ ಮಾಡಿದ್ದಾರೆ. ಗಂಭೀರ್​​ ಲಕ್ನೋ ತಂಡದ ಮೆಂಟರ್​ ಆಗಿದ್ದಾಗ ಕ್ಯಾಪ್ಟನ್​ ರಾಹುಲ್​​ ನೇತೃತ್ವದಲ್ಲಿ ತಂಡ ಸೆಮಿ ಫೈನಲ್​ ಹೋಗಿತ್ತು. ರಾಹುಲ್​ ಅವರೇ ಲಕ್ನೋ ತಂಡದ ಕ್ಯಾಪ್ಟನ್​ ಆಗಲಿ ಎಂದು ಪಂಜಾಬ್​ ತಂಡದಿಂದ ಕರೆದುಕೊಂಡು ಬಂದಿದ್ರು. ಹಾಗಾಗಿ ಗಂಭೀರ್​ ಒಲವು ರಾಹುಲ್​ ಪರವಾಗಿ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹಾರ್ದಿಕ್​ ಪಾಂಡ್ಯ ಈ ಹಿಂದೆ ಎಲ್ಲೂ ಗಂಭೀರ್​ ಜೊತೆ ಕೆಲಸ ಮಾಡಿಲ್ಲ ಅನ್ನೋದು ಕೂಡ ವಾಸ್ತವ.

ಇದನ್ನೂ ಓದಿ: ಕ್ಯಾಪ್ಟನ್​ ಆಗಲು ಹಾರ್ದಿಕ್​​, ರಾಹುಲ್​ ಮಧ್ಯೆ ಫೈಟ್​​.. ಗಂಭೀರ್​​ ಬಂದ್ಮೇಲೆ ಎಲ್ಲಾ ಚೇಂಜ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾ ಕ್ಯಾಪ್ಟನ್​​ ಆಗಲು ಕೆ.ಎಲ್​​ ರಾಹುಲ್​​ ಪರ ಕೋಚ್​​ ಗಂಭೀರ್​​ ಒಲವು.. ಕಾರಣವೇನು?

https://newsfirstlive.com/wp-content/uploads/2024/07/Rahul_Gambhir.jpg

Load More