newsfirstkannada.com

4 ಮ್ಯಾಚ್​ ಗೆದ್ದರೂ ತಂಡದಲ್ಲಿ ಟೆನ್ಶನ್, ಟೆನ್ಯನ್​: ಅವರಾ? ಇಲ್ಲ ಇವರಾ? ಗೊಂದಲದ ಗೂಡಿನಲ್ಲಿ ರೋಹಿತ್ ಪಡೆ..!

Share :

22-10-2023

  ನ್ಯೂಜಿಲೆಂಡ್ ವಿರುದ್ಧ ಭಾರತ ಇಂದು ಸೆಣಸಾಟ

  ಹಳೇ ಸೇಡು ತೀರಿಸಿಕೊಳ್ಳುವ ಛಲದಲ್ಲಿ ರೋಹಿತ್ ಟೀಂ

  ಕಿವೀಸ್ ಮಣಿಸಲು ಭಾರತಕ್ಕೆ ಬೇಕಿದೆ ಬಲಿಷ್ಠ ಪ್ಲೇಯಿಂಗ್-11

ಟೀಮ್​ ಇಂಡಿಯಾದಲ್ಲಿ ಎಲ್ಲಾ ಸರಿಹೋಯ್ತು ಅನ್ನೋವಾಗಲೇ ಹೊಸ ಟೆನ್ಶನ್​ ಶುರುವಾಗಿದೆ. ಮೆಗಾ ಟೂರ್ನಿಯಲ್ಲಿ 4 ಪಂದ್ಯಗಳನ್ನ ಆಡಿದ್ದೂ ಆಯ್ತು. ಗೆದ್ದಿದ್ದೂ ಆಯ್ತು… ಆದ್ರೂ ತಂಡದಲ್ಲಿ ಗೊಂದಲ ಮಾತ್ರ ಬಗೆಹರಿದಿಲ್ಲ. ಇಂದಿನ ಪಂದ್ಯಕ್ಕೂ ಮುನ್ನ ರೋಹಿತ್-ದ್ರಾವಿಡ್​​ ಇಬ್ಬರ ಮುಂದೆ ಬಿಗ್​ ಟಾಸ್ಕ್​ ಇದೆ. ಆ ಸವಾಲನ್ನು ಗೆಲ್ಲೋದು ಸುಲಭದ ವಿಚಾರ ಅಲ್ಲವೇ ಅಲ್ಲ.

ಗೊಂದಲದ ಗೂಡಾದ ಟೀಮ್​ ಇಂಡಿಯಾ..!

ವಿಶ್ವಕಪ್​ ಮಹಾಸಮರದಲ್ಲಿಂದು ಬಿಗ್​ ಫೈಟ್​​. ಟೇಬಲ್​ ಟಾಪರ್ಸ್​ ನಡುವಿನ ಕದನಕ್ಕೆ ಧರ್ಮಶಾಲಾದಲ್ಲಿ ಅಖಾಡ ಸಜ್ಜಾಗಿದೆ. ಟೂರ್ನಿಯಲ್ಲಿ ಈವರೆಗೆ ಸೋಲೆ ಕಾಣದ ಟೀಮ್​ ಇಂಡಿಯಾ ಹಾಗೂ ನ್ಯೂಜಿಲೆಂಡ್​​ ತಂಡಗಳು ಮುಖಾಮುಖಿಯಾಗಲಿವೆ. ಆದ್ರೆ, ಇಂತಾ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ಗೊಂದಲದ ಗೂಡಾಗಿದೆ.

ಹಾರ್ದಿಕ್​ ಔಟ್​.. ಸೆಲೆಕ್ಷನ್​ ಹೆಡ್ಡೇಕ್​..!

ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಇಂಜುರಿಗೆ ತುತ್ತಾದ ಹಾರ್ದಿಕ್​ ಪಾಂಡ್ಯ ಇಂದಿನ ಪಂದ್ಯದಿಂದ ಹೊರ ಬಿದ್ದಿದ್ದಾರೆ. ನ್ಯೂಜಿಲೆಂಡ್​​ ಎದುರಿನ ಪಂದ್ಯದಲ್ಲಿ ಹಾರ್ದಿಕ್​ ಔಟ್​ ಆದ ಬೆನ್ನಲ್ಲೇ, ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​​, ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ರಿಪ್ಲೇಸ್​ಮೆಂಟ್​ ಆಯ್ಕೆ ಇನ್ನಿಲ್ಲದ ಟೆನ್ಶನ್​ ತಂದಿಟ್ಟಿದೆ. ಅಷ್ಟರಮಟ್ಟಿಗೆ ಹಾರ್ದಿಕ್​ ಅಲಭ್ಯತೆ ಟೀಮ್​ ಬ್ಯಾಲೆನ್ಸ್​ಗೆ​​ ದೊಡ್ಡ ಹೊಡೆತ ಕೊಟ್ಟಿದೆ.

ಐವರ ನಡುವೆ ಫೈಟ್​​.. ಯಾರಿಗೆ ಚಾನ್ಸ್​..?

ಹಾರ್ದಿಕ್​ ಪಾಂಡ್ಯ ಅಲಭ್ಯತೆಯಲ್ಲಿ ಯಾರಿಗೆ ಚಾನ್ಸ್​ ನೀಡಬೇಕು ಅನ್ನೋದು ತಂಡಕ್ಕಿರೋ ದೊಡ್ಡ ಟೆನ್ಶನ್​ ಆಗಿದೆ. ಸೂರ್ಯ ಕುಮಾರ್​​, ಇಶಾನ್​ ಕಿಶನ್​, ಮೊಹಮ್ಮದ್​ ಶಮಿ ಹಾಗೂ ಆರ್​.ಅಶ್ವಿನ್ ನಡುವೆ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ರೆ, ಶಾರ್ದೂಲ್​ ಠಾಕೂರ್​ ಸ್ಥಾನ ಉಳಿಸಿಕೊಳ್ಳೋ ಸರ್ಕಸ್​ಗೆ ಬಿದ್ದಿದ್ದಾರೆ.

ಸೂರ್ಯಗೆ ಮಣೆ ಹಾಕ್ತಾರಾ.? ಕಿಶನ್​ ಚಾನ್ಸ್​ ಕೊಡ್ತಾರಾ.?

6ನೇ ಕ್ರಮಾಂಕದಲ್ಲಿ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾ ಬ್ಯಾಟಿಂಗ್​ ಬಲದವಾಗಿದ್ರು. ಬ್ಯಾಟಿಂಗ್​ ಡೆಪ್ತ್​ ಇದ್ದ ಒಂದು ಕಾರಣದಿಂದಲೇ ಟೂರ್ನಿಯಲ್ಲಿ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಫಿಯರ್​ಲೆಸ್​​ ಬ್ಯಾಟಿಂಗ್​ ನಡೆಸ್ತಿದ್ರು. ಆದ್ರೆ, ಇಂದಿನ ಪಂದ್ಯಕ್ಕೆ ಹಾರ್ದಿಕ್​ ಅಲಭ್ಯರಾಗಿದ್ದಾರೆ. ಹೀಗಾಗಿ ಬ್ಯಾಟಿಂಗ್​ ಡೆಪ್ತ್​​ ಹೆಚ್ಚಿಸಬೇಕಂದ್ರೆ, ಸೂರ್ಯ ಕುಮಾರ್​ ಅಥವಾ ಇಶಾನ್​ ಕಿಶನ್​ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್​​ ನೀಡಬೇಕಿದೆ. ಲೆಫ್ಟ್​ ಹ್ಯಾಂಡರ್​​ ಕಿಶನ್​ಗಿಂತ ಫಿನಿಷಿರ್​​​​ ರೋಲ್​ಗೆ ಪರ್ಫೆಕ್ಟ್​ ಆಗಿ ಸೂಟ್​ ಆಗೋ ಸೂರ್ಯ ರೇಸ್​ನಲ್ಲಿ ಮುಂದಿದ್ದಾರೆ.

ಬ್ಯಾಟಿಂಗ್​ಗೆ ಬಲ ಬಂದ್ರೆ ಬ್ಯಾಲೆನ್ಸ್​ ತಪ್ಪುತ್ತೆ ಬೌಲಿಂಗ್

ಬ್ಯಾಟಿಂಗ್​ ಡೆಪ್ತ್​​ ಹೆಚ್ಚಿಸಲು ರೋಹಿತ್​ ಮುಂದಾದ್ರೆ ಬೌಲಿಂಗ್​ ಬ್ಯಾಲೆನ್ಸ್​ ತಪ್ಪೋದು ಕನ್​​ಫರ್ಮ್​. ಇರೋ ಐವರು​ ಬೌಲರ್​ಗಳಿಗೆ ಫುಲ್​ ಓವರ್​ ಕೋಟಾ ಕಂಪ್ಲೀಟ್​ ಮಾಡೋ ಜವಾಬ್ದಾರಿ ಬೀಳಲಿದೆ. ಹಾಗೇನಾದ್ರೂ ಆದರೆ ಶಾರ್ದೂಲ್​ ಠಾಕೂರ್​ಗೆ ಕೊಕ್​ ಕೊಡೋದು ಪಕ್ಕಾ. ಯಾಕಂದ್ರೆ 10 ಓವರ್​ ಕೋಟಾವನ್ನು ಶಾರ್ದೂಲ್​ ಪೂರೈಸ್ತಾರಾ ಎಂಬ ಪ್ರಶ್ನೆಗೆ ತಂಡದಲ್ಲೇ ಉತ್ತರ ಇಲ್ಲ.

ಧರ್ಮಶಾಲಾದಲ್ಲಿ ಅಶ್ವಿನ್​ ವರ್ಕೌಟ್​ ಆಗಲ್ಲ

ಧರ್ಮಶಾಲಾ ಪಿಚ್​ನಲ್ಲಿ ಸ್ಪಿನ್​ ವರ್ಕೌಟ್​ ಆಗೋದು ಡೌಟೇ. ಹೀಗಾಗಿ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯೋದು ಬೆಸ್ಟ್​ ಆಯ್ಕೆಯಾಗಿದೆ. ಬೂಮ್ರಾ, ಸಿರಾಜ್​ ಜೊತೆಗೆ ಶಮಿ ಕಣಕ್ಕಿಳಿಯೋ ಸಾಧ್ಯತೆ ದಟ್ಟವಾಗಿದೆ. ಶಾರ್ದೂಲ್​ ಬದಲು ಶಮಿ ಹಾಗೂ ಹಾರ್ದಿಕ್​ ಸ್ಥಾನದಲ್ಲಿ ಸೂರ್ಯನಿಗೆ ಚಾನ್ಸ್ ನೀಡೋದು ಸದ್ಯಕ್ಕಿರೋ ಬೆಸ್ಟ್​ ಆಪ್ಷನ್​. ಇದ್ರಿಂದ ಬ್ಯಾಟಿಂಗ್​ ಡೆಪ್ತ್​ ಕೂಡ ಸಿಗುತ್ತೆ. ಬೌಲಿಂಗ್​ ಬಲವೂ ಹೆಚ್ಚುತ್ತೆ.

ಒಟ್ಟಿನಲ್ಲಿ, ನ್ಯೂಜಿಲೆಂಡ್​ ವಿರುದ್ಧದ ಕದನಕ್ಕೆ ಟೀಮ್​ ಇಂಡಿಯಾದ ಟೀಮ್​ ಕಾಂಬಿನೇಷನ್​ ಏನಿರುತ್ತೆ ಅನ್ನೋದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ರೋಹಿತ್​-ದ್ರಾವಿಡ್​ ನಡೆ ಏನು? ಯಾರಿಗೆ ಚಾನ್ಸ್​.? ಯಾರಿಗೆ ಕೊಕ್​​.? ಅನ್ನೋ ಪ್ರಶ್ನೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

4 ಮ್ಯಾಚ್​ ಗೆದ್ದರೂ ತಂಡದಲ್ಲಿ ಟೆನ್ಶನ್, ಟೆನ್ಯನ್​: ಅವರಾ? ಇಲ್ಲ ಇವರಾ? ಗೊಂದಲದ ಗೂಡಿನಲ್ಲಿ ರೋಹಿತ್ ಪಡೆ..!

https://newsfirstlive.com/wp-content/uploads/2023/10/ROHIT-7.jpg

Load More