newsfirstkannada.com

ಪಾಕ್​ ಆಟಗಾರನ ಮುಗಿಸಲು ಹೋದ ರವಿಶಾಸ್ತ್ರಿ.. ಅಟ್ಟಾಡಿಸಿಕೊಂಡು ಡ್ರೆಸ್ಸಿಂಗ್ ರೂಮ್​ಗೆ ಹೋದಾಗ ಏನಾಯ್ತು?

Share :

29-07-2023

    1987ರಲ್ಲಿ ಏಕದಿನ ಪಂದ್ಯದಲ್ಲಿ ನಡೆದಿತ್ತಾ ಭಯಾನಕ ಪ್ಲಾನ್​

    ಸಂಚು ರೂಪಾಸಿದ ಸುದ್ದಿ ರಿವೀಲ್​ ಆಗಿರೋದು ಹೇಗೆ ಗೊತ್ತಾ?

    ರವಿಶಾಸ್ತ್ರಿಯನ್ನು ಸಮಾಧಾನ ಮಾಡಿದ್ದ ಇಮ್ರಾನ್ ಖಾನ್

ಮಾಜಿ ಕ್ರಿಕೆಟರ್‌ ರವಿ ಶಾಸ್ತ್ರಿ ಅಗ್ರೆಸ್ಸಿವ್​ನೆಸ್​ ಯಾರಿಗೆ ಗೊತ್ತಿಲ್ಲ. ಯಾವುದೇ ವಿಚಾರವನ್ನಾಗಲಿ ನೇರವಾಗಿ ಹೇಳುವ ಮನುಷ್ಯ. ಒಮ್ಮೆ ಸಿಕ್ಕಾಪಟ್ಟೆ ಕೋಪಗೊಂಡಿದ್ದ ಶಾಸ್ತ್ರಿ, ಪಾಕ್​ ಆಟಗಾರನ ಕೊಲೆಗೆ ಮುಂದಾಗಿದ್ದೇಕೆ ಎಂಬ ವಿಚಾರವನ್ನ ಇವತ್ತಿನ ಸಖತ್ ಸ್ಟೋರಿಯಲ್ಲಿ ನೋಡೋಣ.

ರವಿ ಶಾಸ್ತ್ರಿ, ಟೀಮ್ ಇಂಡಿಯಾದ ಸಕ್ಸಸ್​ ಫುಲ್ ಕೋಚ್​​. ಕಾಮೆಂಟೇಟರ್ ಆ್ಯಂಡ್ ಭಾರತ ತಂಡದ ಮಾಜಿ ಕ್ಯಾಪ್ಟನ್. ರವಿಶಾಸ್ತ್ರಿ ಅವರು 1987ರಲ್ಲಿ ಪಾಕ್​​ನ ಜಾವೇದ್ ಮಿಯಾಂದಾದ್​​​ ಸಾಯಿಸಲು ಮುಂದಾಗಿದ್ದರಂತೆ.

1987ರಲ್ಲಿ ಪಾಕ್, ಭಾರತ ಪ್ರವಾಸ ಕೈಗೊಂಡಿತ್ತು. 5 ಟೆಸ್ಟ್​, 6 ಪಂದ್ಯಗಳ ಏಕದಿನ ಸರಣಿಯಾಡಿತ್ತು. ಏಕದಿನ ಸರಣಿಯ 3ನೇ ಪಂದ್ಯಕ್ಕೆ ಹೈದ್ರಾಬಾದ್​ನ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂ ವೇದಿಕೆಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 44 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತ್ತು.

ಜಾವೇದ್ ಮಿಯಾಂದಾದ್ ಮತ್ತು ಇಮ್ರಾನ್ ಖಾನ್

ಭಾರತ ಆಟಗಾರರ ವಿರುದ್ಧ ಕೂಗಾಡಿದ್ದ ಜಾವೇದ್ 

ಈ ಟಾರ್ಗೆಟ್ ಬೆನ್ನತ್ತಿದ್ದ ಪಾಕ್ ಕೊನೆ ಎಸೆತದಲ್ಲಿ 2 ರನ್​ ಗಳಿಸಬೇಕಿತ್ತು. ಆದರೆ ಅಬ್ದುಲ್ ಖಾದಿರ್ ರನ್​ ಔಟ್​ನಿಂದಾಗಿ 1 ರನ್ ಪೂರ್ಣಗೊಳಿಸಲಷ್ಟೇ ಶಕ್ತವಾಗಿ ಪಂದ್ಯ ಟೈ ಮಾಡಿಕೊಳ್ತು. ಐಸಿಸಿ ನಿಯಮದ ಅನ್ವಯ 7 ವಿಕೆಟ್ ಕಳೆದುಕೊಂಡಿದ್ದ ಪಾಕ್ ಸೋಲೊಪ್ಪಿಕೊಂಡ್ರೆ. 6 ವಿಕೆಟ್ ಮಾತ್ರ ಕಳೆದುಕೊಂಡಿದ್ದ ಭಾರತ ಗೆದ್ದು ಬೀಗಿತ್ತು. ಆದರೆ ಸೋಲನ್ನ ಅರಗಿಸಿಕೊಳ್ಳದ ಪಾಕ್ ಕ್ರಿಕೆಟರ್​ ಜಾವೇದ್ ಮಿಯಾಂದಾದ್ ಜೋರಾಗಿ ಚೀಟರ್ಸ್ ಎಂದು ಭಾರತ ಆಟಗಾರರ ವಿರುದ್ಧ ಕೂಗಾಡಿದ್ದರು.

ಇದಕ್ಕೆ ಕುಪಿತಗೊಂಡಿದ್ದ ರವಿ ಶಾಸ್ತ್ರಿ, ಶೂ ತೆಗೆದುಕೊಂಡು ಮಿಯಾಂದಾದ್ ಕೊಲ್ಲಲು ಅಟ್ಟಾಡಿಸಿಕೊಂಡು ಪಾಕ್ ಡ್ರೆಸ್ಸಿಂಗ್ ರೂಮ್​ಗೆ ಎಂಟ್ರಿ ನೀಡಿದ್ದರು. ರವಿ ಶಾಸ್ತ್ರಿಯ ಕೋಪವನ್ನ ಕಂಡ ಇಮ್ರಾನ್ ಖಾನ್​​​​​​​​​​​​​​​​​​​​​​​​​​​​​, ಸಮಾಧಾನ ಮಾಡಿಸಿದ್ರಂತೆ. ಈ ವಿಚಾರವನ್ನ ರವಿ ಶಾಸ್ತ್ರಿ, Stargazing.. The Players in My Life ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಕ್​ ಆಟಗಾರನ ಮುಗಿಸಲು ಹೋದ ರವಿಶಾಸ್ತ್ರಿ.. ಅಟ್ಟಾಡಿಸಿಕೊಂಡು ಡ್ರೆಸ್ಸಿಂಗ್ ರೂಮ್​ಗೆ ಹೋದಾಗ ಏನಾಯ್ತು?

https://newsfirstlive.com/wp-content/uploads/2023/07/RAVI_SHASTRI_INDIA.jpg

Load More