newsfirstkannada.com

ಟೀಮ್​ ಇಂಡಿಯಾಕ್ಕೆ ಬಿಗ್​ ಶಾಕ್​.. ಭಾರತಕ್ಕೆ ಮರಳಲಿರೋ ಶುಭ್​ಮನ್ ಗಿಲ್, ಆವೇಶ್ ಖಾನ್; ಕಾರಣ?

Share :

Published June 15, 2024 at 6:53pm

  ಅಮೆರಿಕದಲ್ಲಿ ನಡೆಯುತ್ತಿರುವ T20 ವಿಶ್ವಕಪ್​ ಲೀಗ್ ಪಂದ್ಯಗಳು

  ಆವೇಶ್, ಶುಭ್​ಮನ್​ ಗಿಲ್​ರನ್ನ ವಾಪಸ್ ಕಳುಹಿಸ್ತಿರುವುದು ಏಕೆ?

  ರಿಂಕು ಸಿಂಗ್, ಕಲೀಲ್ ಅಹ್ಮದ್​​ರನ್ನೂ ವಾಪಸ್ ಕಳುಹಿಸುತ್ತಾರಾ?

ಇಂದು ಕೆನಡಾ ವಿರುದ್ಧದ ಪಂದ್ಯದ ಬಳಿಕ ಪಂಜಾಬ್ ಪುತ್ತರ್ ಶುಭ್​ಮನ್ ಗಿಲ್ ಹಾಗೂ ಆವೇಶ್​ ಖಾನ್ ಅವರು ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಇದು ರೋಚಕ ಕಿಡ್ನಾಪ್ ಕಹಾನಿ.. ದರ್ಶನ್​ ಜೊತೆ ಫೋಟೋ ತೆಗೆಸ್ತೀವಿ ಅಂತ ಕರೆದು, ಕೊಂದು ಹಾಕಿದ್ರಾ?

T20 ವಿಶ್ವಕಪ್​ನ ಲೀಗ್ ಹಂತ ಮುಕ್ತಾಯ ಆಗುವುದರಿಂದ ಭಾರತ ತಂಡದಲ್ಲಿ 19 ಪ್ಲೇಯರ್​​ಗಳ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ವರ್ಲ್ಡ್​​ಕಪ್​ನಲ್ಲಿ ರಿಸರ್ವ್​ ಪ್ಲೇಯರ್​ ಆಗಿ ಅಮೆರಿಕಕ್ಕೆ ತೆರಳಿರುವ ಶುಭ್​ಮನ್ ಗಿಲ್ ಮತ್ತು ಆವೇಶ್​ ಖಾನ್​ರನ್ನ ಬಿಸಿಸಿಐ ವಾಪಸ್ ಭಾರತಕ್ಕೆ ಕರೆಯಿಸಿಕೊಳ್ಳುತ್ತಿದೆ. ಈ ಇಬ್ಬರು ಆಟಗಾರರು ವಿಂಡೀಸ್​ಗೆ ತೆರಳದೇ ಅಮೆರಿಕದಿಂದ ತವರಿಗೆ ಮರಳಲಿದ್ದಾರೆ. ಇನ್ನೇನು ಸೂಪರ್-8 ಹಂತದ ಪಂದ್ಯಗಳು ವೆಸ್ಟ್​ ಇಂಡೀಸ್​ನಲ್ಲಿ ನಡೆಯುವುದರಿಂದ ರಿಸರ್ವ್​ ಪ್ಲೇಯರ್ಸ್ ಆಗಿ ರಿಂಕು ಸಿಂಗ್ ಮತ್ತು ಕಲೀಲ್ ಅಹ್ಮದ್​ ತಂಡದ ಜೊತೆ ಉಳಿದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

ಸದ್ಯ ಗಿಲ್ ಮತ್ತು ಆವೇಶ್​ ಖಾನ್ ಅವರು ಅಮೆರಿಕದ ಫ್ಲೋರಿಡಾದಲ್ಲಿ ಇದ್ದಾರೆ. ಇಂದು ಕೆನಡಾ ವಿರುದ್ಧ ನಡೆಯುವ ಪಂದ್ಯದ ಬಳಿಕ ಅಲ್ಲಿಂದ ನ್ಯೂಯಾರ್ಕ್​ಗೆ ಆಗಮಿಸಿ ಭಾರತದ ಪ್ಲೈಟ್ ಅನ್ನು ಹತ್ತುವ ಸಾಧ್ಯತೆ ಇದೆ. ಇನ್ನು ಅಮೆರಿಕದಲ್ಲಿ ನಡೆಯುವ ಮ್ಯಾಚ್​​ಗಳಿಗೆ ಮಾತ್ರ ಈ ಇಬ್ಬರನ್ನು ರಿಸರ್ವ್ ಆಟಗಾರರಾಗಿ ಆಯ್ಕೆ ಮಾಡಲಾಗಿತ್ತು ಎಂದು ಈಗ ಹೇಳಲಾಗುತ್ತಿದೆ. ಅಲ್ಲದೇ ವಿಂಡೀಸ್​​ನಲ್ಲಿ ಭಾರತದ ಪಂದ್ಯಗಳು ಬ್ಯಾಕ್​ ಟು ಬ್ಯಾಕ್ ಇರುವುದರಿಂದ ಇವರ ಅವಶ್ಯಕತೆ ತಂಡಕ್ಕೆ ಇಲ್ಲವೆಂದು ತವರಿಗೆ ಕಳುಹಿಸಲಾಗುತ್ತಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾಕ್ಕೆ ಬಿಗ್​ ಶಾಕ್​.. ಭಾರತಕ್ಕೆ ಮರಳಲಿರೋ ಶುಭ್​ಮನ್ ಗಿಲ್, ಆವೇಶ್ ಖಾನ್; ಕಾರಣ?

https://newsfirstlive.com/wp-content/uploads/2024/06/GILL_AVESH.jpg

Load More